Advertisement

ಆಮ್ಲಜನಕ ಸಮಸ್ಯೆ ನಿವಾರಣೆಗೆ ಪ್ರಯತ್ನ: ಸಚಿವ

02:10 PM May 18, 2021 | Team Udayavani |

ಪಾಂಡವಪುರ: ಪಟ್ಟಣದ ಉಪಭಾಗೀಯ ಆಸ್ಪತ್ರೆಯಲ್ಲಿ ಸೋಂಕಿತರು ಹಾಗೂ ಸೌಮ್ಯ ಲಕ್ಷಣವಿರುವವರು ಆಕ್ಸಿಜನ್‌ ಸಮಸ್ಯೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣದಲ್ಲಿ ಆಮ್ಲಜನಕದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ವೈದ್ಯರುಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ ನೀಡಿದರು.

Advertisement

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿತಾಲೂಕಾದ್ಯಂತ ಕೊರೊನಾ ಸ್ಥಿತಿಗತಿ ಹಾಗೂ ನಿಯಂತ್ರಣ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಇರುವವರು ಆಮ್ಲಜನಕ ಕೊರತೆಯಿಂದ ಹಾಗೂ ಆಮ್ಲಜನಕ ಅರ್ಧಕ್ಕೆ ನಿಂತು ಪ್ರಾಣಬಿಡುತ್ತಿದ್ದು, ಮುಂದೆಈರೀತಿಯನಡೆಯದಂತೆ ವೈದ್ಯರಿಗೆ ಎಚ್ಚರಿಕೆ ನೀಡಿದರು. ಆಮ್ಲಜನಕ ಕೊರತೆ ನೀಗಿಸಲು ಮಿನಿ ಹಾಗೂ ಜಂಬೋ ಸಿಲಿಂಡರ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಆಕ್ಸಿಜನ್‌ ಬೆಡ್‌ ಹೆಚ್ಚು ಸೃಷ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಬಗ್ಗೆ ರಾಜ್ಯ ಸರ್ಕಾರ ಎಚ್ಚರವಹಿಸುತ್ತಿದ್ದು, ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಕುರಿತು ಸಿಎಂನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿಚರ್ಚೆ ನಡೆಸಲಾಗುವುದು ಎಂದರು.ತಾಲೂಕಿನ ಸೋಂಕಿತರು ಹೊರ ಜಿಲ್ಲೆಯಲ್ಲಿಚಿಕಿತ್ಸೆ ಫ‌ಲಿಕಾರಿಯಾಗದೆ ಮೃತಪಟ್ಟವರು ಸೇರಿದಂತೆ ಒಟ್ಟು 67 ಮಂದಿ ಕೊರೊನಾಗೆ ಬಲಿಯಾಗಿದ್ದು,ಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿ 25 ಮಂದಿ ಬಲಿಯಾಗಿದ್ದಾರೆ. ತಾಲೂಕಾದ್ಯಂತ ಕೊರೊನಾವನ್ನು ನಿಯಂತ್ರಣಕ್ಕೆ ತರಲುಅಧಿಕಾರಿಗಳು ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌, ತಾಪಂ ಇಒ ಆರ್‌ .ಪಿ.ಮಹೇಶ್‌, ತಾಲೂಕು ಆರೋಗ್ಯಾಧಿಕಾರಿಡಾ.ಸಿ.ಎ.ಅರವಿಂದ್‌, ಸರ್ಕಾರಿ ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ.ರಾಜಣ್ಣ ಪೊ›ಬೆಷನರಿತಹಶೀಲ್ದಾರ್‌ ನಯನ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್‌, ಕಿಯೋನಿಕ್ಸ್‌ ನಿರ್ದೇಶಕಎಚ್‌.ಎನ್‌.ಮಂಜುನಾಥ್‌, ತಾಲೂಕು ಬಿಜೆಪಿ ಅಧ್ಯಕ್ಷ ಎಲ್‌.ಅಶೋಕ್‌, ತಾಪಂ ಸದಸ್ಯೆ ಮಂಗಳಾ ಸೇರಿದಂತೆ ಅಧಿಕಾರಿಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next