ಶಿರಸಿ: ಇಂದಿನ ಕಾಲದಲ್ಲಿ ರೈತರ ಮಕ್ಕಳು ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವುದು ಸಹಜವಾಗಿದೆ. ಸಂಸಾರ ನಿರ್ವಹಣೆಗೆ ಉದ್ಯೋಗ ಅನಿವಾರ್ಯವೂ ಆಗಿದೆ. ಆದರೆ ಈ ರೀತಿ ನಗರಗಳಲ್ಲಿ ವಾಸವಿರುವ ಅನೇಕ ಕುಟುಂಬ ಕೃಷಿ ಭೂಮಿ ಮಾರಾಟ ಮಾಡಲು ಮುಂದಾಗಿವೆ. ಪಾರಂಪರಿಕವಾಗಿ ನಮಗೆ ಹಿರಿಯರು ನೀಡಿರುವ ಭೂಮಿ ಉಳಿಸಿಕೊಳ್ಳಬೇಕೆನ್ನುವ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕು ಎಂದು ಟಿಆರ್‌ಸಿ ಅಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ಶ್ರೀಪಾದ ಹೆಗಡೆ ಹೇಳಿದರು.
Advertisement
ಅವರು ತೋಟಗಾರಿಕಾ ಇಲಾಖೆ, ಟಿಆರ್‌ಸಿ, ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘ ಮತ್ತು ಪ್ರಿಂಪ್ಕೋಸ್ ಕೋ-ಆಪರೇಟಿವ್ ಸೊಸೈಟಿ, ಬಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಡಲದ ವಿವೇಕಾನಂದ ಸಭಾಭವನದಲ್ಲಿ ನಡೆದ ಅಡಕೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ನಮ್ಮ ಜಿಲ್ಲೆಯ ಪ್ರತಿ ಅಡಕೆ ಬೆಳೆಗಾರ ಸರಾಸರಿ ಅಡಕೆ ಕ್ಷೇತ್ರ 32 ಗುಂಟೆ. ಇದನ್ನು ವಿಸ್ತರಿಸಲು ಜಾಗದ ಕೊರತೆ ಸಹ ಇದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಭಾಗದಲ್ಲಿ ಅಡಕೆ ತೋಟ ನಿರ್ಮಿಸುತ್ತಿರುವ ಒಬ್ಬೊಬ್ಬ ರೈತ ಕನಿಷ್ಠ 50 ಸಾವಿರ ಸಸಿಗಳನ್ನು ನಾಟಿ ಮಾಡತೊಡಗಿದ್ದಾರೆ. ಈ ಅಡಕೆ ಮಾರುಕಟ್ಟೆ ಪ್ರವೇಶಿಸಿದ ನಂತರ ನಮ್ಮ ಭಾಗದ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಸಿಪಿಸಿಆರ್‌ಐ ಕಾಸರಗೋಡಿನ ಪ್ರಧಾನ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಎಲೆಚುಕ್ಕೆ ರೋಗವು ಶಿಲೀಂಧ್ರದಿಂದ ಬರುವ ರೋಗ. ಇದು ಗಾಳಿ ಮೂಲಕವೂ ಹರಡುವುದರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬಹುಬೇಗ ಪಸರಿಸುತ್ತದೆ. ನಾವು ಕೋವಿಡ್ ಸಂದರ್ಭದಲ್ಲಿ ಹೇಗೆ ಎಲ್ಲರೂ ಒಗ್ಗೂಡಿ ಸೋಂಕನ್ನು ಎದುರಿಸಿದ್ದೆವೋ ಅದೇ ಮಾದರಿಯಲ್ಲಿ ಎಲ್ಲರೂ ಒಂದಾಗಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಬಂಡಲ ಹಾಲು ಸಂಘದ ಅಧ್ಯಕ್ಷ ವಿಶ್ವನಾಥ ಮರಾಠಿ ಮಾತನಾಡಿದರು. ಟಿಆರ್‌ಸಿ ನಿರ್ದೇಶಕ ಹಾಗೂ ಪ್ರಿಂಪ್ಕೋಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷಕುಮಾರ ಗೌಡರ್ ಕಸಗೆ ಸ್ವಾಗತಿಸಿದರು.
ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ನಿರ್ವಹಿಸಿದರು. ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಹೆಗಡೆ ವಂದಿಸಿದರು. ಮಂಜಗುಣಿ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಹಾಗೂ ಟಿಆರ್‌ಸಿ ನಿರ್ದೇಶಕರಾದ ಎಸ್. ಎನ್. ಹೆಗಡೆ ಹಾವಳಿಮನೆ, ವಿN°àಶ್ವರ ರಾಮಚಂದ್ರ ಹೆಗಡೆ ಅಗಾÕಲ ಕಿಬ್ಬಳ್ಳಿ, ಟಿಆರ್‌ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್ಮಾವಿನಕೊಪ್ಪ ಉಪಸ್ಥಿತರಿದ್ದರು.