Advertisement

ರಷ್ಯಾ-ಉಕ್ರೇನ್ ಸಮರದ ನಡುವೆ ಸಾರ್ಥಕ ಸೇವೆ

12:14 AM Mar 02, 2022 | Team Udayavani |

ಈ ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ಟಾಮ್‌ ಲಿಟಲ್‌ಡೈಕ್‌. ವಯಸ್ಸು 31. ಯುದ್ಧಪೀಡಿತ ಉಕ್ರೇನ್‌ನಲ್ಲಿ ಇವರು, ತಮ್ಮ 16 ಸೀಟುಗಳ ಮಿನಿಬಸ್‌ನ ಮೂಲಕ ಮಾನವೀಯ ಸೇವೆಯೊಂದನ್ನು ಸಲ್ಲಿಸುವಲ್ಲಿ ನಿರತರಾಗಿದ್ದಾರೆ.

Advertisement

ಉಕ್ರೇನ್‌ನ ಅಕ್ಕಪಕ್ಕದ ದೇಶಗಳ ಗಡಿಗಳತ್ತ ಸಾಗುತ್ತಿರುವ ನಿರಾಶ್ರಿತರಿಗೆ, ಅಗತ್ಯವಿರುವ ಕಂಬಳಿಗಳು, ಹಾಸಿಗೆ ದಿಂಬುಗಳನ್ನು ಸರಬರಾಜು ಮಾಡುತ್ತಾರೆ. ಮಂಗಳವಾರವಷ್ಟೇ, ಕೆಂಟ್‌ ಪಟ್ಟಣದಿಂದ ಇವರು ದಾನಿಗಳಿಂದ ಪಡೆದ ಹಾಸಿಗೆ, ದಿಂಬು, ಬ್ಲಾಂಕೆಟ್‌ಗಳನ್ನು ತುಂಬಿಕೊಂಡು ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ:ಕೀವ್‌ ನಗರದಲ್ಲಿರುವ ಟವರ್‌ ಧ್ವಂಸ; ಎಲ್ಲ ಟಿವಿ ಚಾನೆಲ್‌ ಬಂದ್‌

ಗಡಿಯನ್ನು ತಲುಪಲು ಕಷ್ಟಪಡುವ ಜನರಿಗೆ ತಮ್ಮ ಬಸ್‌ನಲ್ಲಿ ಉಚಿತವಾಗಿ ಗಡಿ ತಲುಪಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಹೆಂಗಸರು, ಮಕ್ಕಳು ಗಡಿ ಪ್ರದೇಶಗಳಲ್ಲಿ ಛಳಿಯಲ್ಲಿ ಮುದುರಿಕೊಂಡು ಕುಳಿತಿರುವ ಫೋಟೋಗಳನ್ನು ನೋಡಿ ಇವರಿಗೆ ಸಮಾಜ ಸೇವೆಯ ಮನಸ್ಸಾಯಿತಂತೆ.

Advertisement

Udayavani is now on Telegram. Click here to join our channel and stay updated with the latest news.

Next