Advertisement

“ಮಾತೃಪೂರ್ಣ’ಪರಿಣಾಮಕಾರಿ ಜಾರಿಗೆ ಬೇಕು 15 ದಿನ

10:31 AM Oct 06, 2017 | |

ಬೆಂಗಳೂರು: ರಾಜ್ಯದ ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ವಿತರಿಸುವ “ಮಾತೃ ಪೂರ್ಣ’ ಯೋಜನೆಗೆ ಸರ್ಕಾರ ಗಾಂಧಿ ಜಯಂತಿಯಂದು ಚಾಲನೆ ನೀಡಿದೆ. ಆದರೂ ರಾಜ್ಯದೆಲ್ಲೆಡೆ ಈ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಇನ್ನೂ 15 ದಿನ ಬೇಕಾಗಬಹುದು!

Advertisement

ಪೌಷ್ಟಿಕ ಬಿಸಿಯೂಟ ತಯಾರಿ, ವಿತರಣೆಗೆ ಪಾತ್ರೆ, ತಟ್ಟೆ, ಲೋಟ, ಅಡುಗೆ ಅನಿಲ ಸಿಲಿಂಡರ್‌, ಕುಕ್ಕರ್‌ ಇತರೆ
ಪರಿಕರಗಳು ಅಗತ್ಯ. ಇವುಗಳ ಪೂರೈಕೆಗೆ ಹಲವೆಡೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. 15 ದಿನಗಳಲ್ಲಿ ಎಲ್ಲ ಅಂಗನ
ವಾಡಿಗಳಿಗೂ ಅಗತ್ಯ ಪರಿಕರಗಳು ಪೂರೈಕೆಯಾದರೆ ಪರಿಣಾಮಕಾರಿ ಯಾಗಿ ಜಾರಿಯಾಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿಗಳು 2017-18ನೇ ಸಾಲಿನ ಬಜೆಟ್‌ ನಲ್ಲೇ ಮಾತೃಪೂರ್ಣ ಯೋಜನೆ ಘೋಷಿಸಿದ್ದರೂ ಅದಕ್ಕೆ
ಪೂರಕ ಸಿದ್ಧತೆ ಸಕಾಲದಲ್ಲಿ ಕೈಗೊಂಡಂತಿಲ್ಲ. ಏಕೆಂದರೆ ಯೋಜನೆಯ ಪರಿಣಾಮಕಾರಿ ಜಾರಿಗೆ ಅಗತ್ಯ ಪರಿಕರ
ಗಳನ್ನು ಪೂರೈಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಜಾರಿ ನಿಧಾನವಾಗಿದೆ. ಕೆಲವು ಪ್ರದೇಶಗಳಲ್ಲಿ
ಸಂಘ-ಸಂಸ್ಥೆಗಳು ಪರಿಕರಗಳನ್ನು ದೇಣಿಗೆ ನೀಡುತ್ತಿವೆ. 

ಇನ್ನೂ ಟೆಂಡರ್‌ ಪ್ರಕ್ರಿಯೆ: ಕುಕ್ಕರ್‌, ಅಡುಗೆ ಅನಿಲ ಸಿಲಿಂಡರ್‌, ಬರ್ನಲ್‌, ತಟ್ಟೆ, ಲೋಟಗಳ ಪೂರೈಕೆಗೆ ಬಹಳಷ್ಟು ಕಡೆ ಇನ್ನೂ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ, ತಾಪಂ ಸಿಇಒಗಳ ಸಹಯೋಗದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿ ಪೂರೈಕೆಗೆ ಕ್ರಮ ವಹಿಸುತ್ತಿದೆ. ಬಹಳಷ್ಟು ಕಡೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ ಯರು ಲಭ್ಯವಿರುವ ಪಾತ್ರೆ, ಪರಿಕರಗಳನ್ನೇ ಬಳಸಿ ವಿತರಿಸುತ್ತಿದ್ದಾರೆ. ಕೆಲವೆಡೆ ಊಟ ವಿತರಣೆ ಸಮಯದಲ್ಲೂ ವ್ಯತ್ಯಯವಾಗಿದೆ. ಪ್ರತಿ ಅಂಗನವಾಡಿಯಲ್ಲಿ ಸರಾಸರಿ 10 ಗರ್ಭಿಣಿ ಯರು, ಬಾಣಂತಿಯರಿದ್ದಾರೆ. ಆದರೆ ನಗರ, ಪಟ್ಟಣ ಪ್ರದೇಶದ ಕೆಲ ಅಂಗನವಾಡಿ ಯಲ್ಲಿ 30- 40 ಗರ್ಭಿಣಿ, ಬಾಣಂತಿಯರು ನೋಂದಣಿಯಾಗಿದ್ದಾರೆ. ಅವರಿಗೆಲ್ಲ ತಟ್ಟೆ, ಲೋಟ ಹೊಂದಿಸುವುದು ಸವಾಲೆನಿಸಿದೆ. ಮಕ್ಕಳು ಬಳಸಿದ ತಟ್ಟೆ, ಲೋಟಗಳನ್ನು ಸ್ವತ್ಛಗೊಳಿಸಿ ನೀಡುವ ಹೊತ್ತಿಗೆ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಮೊಟ್ಟೆ, ತರಕಾರಿ ಇತರೆ ಪದಾರ್ಥಗಳ ಖರೀ ದಿಗೆ ಬಾಲವಿಕಾಸ ಸಮಿತಿಯೊಂದಿಗೆ ಜಂಟಿ ಬ್ಯಾಂಕ್‌ ಖಾತೆ ತೆರೆಯಬೇಕೆಂಬ ನಿಯಮ ಸರಿ ಯಲ್ಲ. ಬದಲಿಗೆ ಸಂಬಂಧಪಟ್ಟ ಅಧಿಕಾರಿಗ ಳೊಂದಿಗೆ ಜಂಟಿ ಖಾತೆ ತೆರೆಯುವುದು ಸೂಕ್ತ ಎಂಬುದನ್ನು ಹಿರಿಯ ಅಧಿಕಾರಿ ಗಳ ಗಮನಕ್ಕೆ ತರಲಾಗಿದೆ ಎಂದು ಅಂಗನವಾಡಿ ಕಾರ್ಯ ಕರ್ತೆ ಎಸ್‌.ನಾಗರತ್ನಾ ಹೇಳುತ್ತಾರೆ.

15 ದಿನಗಳಲ್ಲಿ ಪೂರೈಕೆ: ಇನ್ನೂ 15 ದಿನದೊಳಗೆ ಎಲ್ಲೆಡೆ ಪರಿಕರಗಳು ಪೂರೈಕೆಯಾಗುವ ವಿಶ್ವಾಸ ವಿದೆ. ಸದ್ಯಕ್ಕೆ
ಅಂಗನವಾಡಿಯಲ್ಲಿ ಲಭ್ಯವಿರುವ ಪರಿಕರಗಳನ್ನೇ ಬಳಸಿ ಕೊಂಡು ಊಟ ವಿತರಿಸು ವಂತೆ ಸೂಚಿಸಲಾಗಿದೆ ಎಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿ ಯೊಬ್ಬರು ತಿಳಿಸುತ್ತಾರೆ.

ಊಟದಲ್ಲಿರುವ ಪೌಷ್ಟಿಕ ಆಹಾರಗಳು…: ಮಧ್ಯಾಹ್ನದ  ಪೌಷ್ಟಿಕ ಬಿಸಿಯೂಟದಲ್ಲಿ ಅನ್ನ, ತರಕಾರಿ ಸಾಂಬಾರ್‌,
ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ, 200 ಮಿ.ಲೀ. ಹಾಲು ಹಾಗೂ ಕಡಲೆ ಮಿಠಾಯಿ ನೀಡಲಾಗುತ್ತದೆ. ಮೊಟ್ಟೆ ಸೇವಿ
ಸದವರಿಗೆ ಮೊಳಕೆ ಕಾಳು ವಿತರಿಸಲಾಗುತ್ತದೆ. ಗರ್ಭಿಣಿ, ಬಾಣಂತಿಯರಿಗೆ ಒಂದು ದಿನಕ್ಕೆ ಬೇಕಾಗುವ ಪ್ರೊಟೀನ್‌,
ಕ್ಯಾಲಿÏಯಂ ಕ್ಯಾಲೋರಿಯ ಅಂಶಗಳಲ್ಲಿ ಶೇ.40ರಿಂದ ಶೇ.45ರಷ್ಟು ಅಂಶ ಒಂದು ಊಟ ಒದಗಿಸಲಿದೆ. ತಿಂಗಳಲ್ಲಿ 25 ದಿನ ಊಟ ವಿತರಿಸಲಾಗುತ್ತದೆ. 8 ತಿಂಗಳು ತುಂಬಿದ ಗರ್ಭಿಣಿಯರು ಹೆರಿಗೆಯಾಗಿ 45 ದಿನದವರೆಗೆ ಮನೆಗೆ ಊಟ ನೀಡಲಾಗುತ್ತದೆ. ಈ ಯೋಜನೆಗೆ ಬಿಪಿಎಲ್‌, ಎಪಿಎಲ್‌ ಎಂಬ ಮಾನದಂಡವಿಲ್ಲ. ಯಾರು ಬೇಕಾದರೂ ನೋಂದಣಿ ಮಾಡಿಸಿ ಪಡೆಯಬಹುದು. ಯೋಜನೆಯಡಿ ಗರ್ಭ ಧರಿಸಿದಾಗಿನಿಂದ ಆರು ತಿಂಗಳ ಬಾಣಂತಿವರೆಗೆ ಊಟ ವಿತರಿಸಲಾಗುವುದು. 

Advertisement

ಮನೆಗೆ ಪೂರೈಕೆ ಸ್ಥಗಿತ
ಈ ಹಿಂದೆ ಬಿಪಿಎಲ್‌ ಕುಟುಂಬದ ನೋಂದಾಯಿತ ಗರ್ಭಿಣಿ, ಬಾಣಂತಿಯರಿಗೆ ತಿಂಗಳಿಗೆ 2.50 ಕೆ.ಜಿ. ಅಕ್ಕಿ, 3 ಕೆ.ಜಿ. ಗೋಧಿ, 500 ಗ್ರಾಂ. ಹೆಸರುಕಾಳು, 750 ಗ್ರಾಂ. ಬೆಲ್ಲ, 500 ಗ್ರಾಂ. ಕಡಲೆ ಬೀಜವನ್ನು ದಿನಕ್ಕೆ ಏಳು ರೂ. ವೆಚ್ಚದಂತೆ ಮನೆಗಳಿಗೆ ಪೂರೈಸಲಾಗುತ್ತಿತ್ತು. ಮಾತೃಪೂರ್ಣ ಯೋಜನೆ ಜಾರಿಯಿಂದಾಗಿ ಅಕ್ಟೋಬರ್‌ನಿಂದ ಪೂರೈಕೆ ಸ್ಥಗಿತಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next