Advertisement
ಶಾಲೆಯಿಂದ ಬೆಳೆದವರು ಅನೇಕ : ಅಂತಾರಾಷ್ಟ್ರೀಯ ಮಟ್ಟದ ಪರಿಣತರ ಸಹಿತ ಅನೇಕ ವಿದ್ಯಾಸಂಪನ್ನರು ಈ ಶಾಲೆಯ ಮೂಲಕ ಬಾಲಪಾಠ ಕಲಿತವರು. 1927ರಲ್ಲಿ ಕೇಂದ್ರ ತೋಟ ಮತ್ತು ಬೆಳೆ ಸಂಶೋಧನೆ ಕೇಂದ್ರ (ಸಿ.ಪಿ.ಸಿ.ಆರ್.ಐ) ಬಳಿ ಸ್ಥಾಪಿತವಾಗಿರುವ ಈ ಶಾಲೆ ಸ್ವಾತಂತ್ರ್ಯ ಹೋರಾಟಗಾರರ ಸಹಿತ ಅನೇಕ ಸಾಮಾಜಿಕ ಕಾರ್ಯಕರ್ತರನ್ನು, ಸಾಹಿತಿಗಳನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ ಗುರುಕುಲವಾಗಿದೆ.
Related Articles
ಇಲ್ಲಿ ನಡೆಸಲಾಗುವ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸುವ ಅನೇಕ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಲು ಆರಂಭಿಸಲಾಗಿತ್ತು. ಮಾತೃ ಭಾಷಾ ಕಲಿಕೆಗಾಗಿ ಮೂರು, ನಾಲ್ಕು ತರಗತಿಗಳನ್ನು ರಚಿಸಿ ಮಧುರ ಕನ್ನಡ, ಮಲೆಯಾಳ ತಿಳಕ್ಕಂ ಇತ್ಯಾದಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಯಿತು. ಇವುಗಳಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿವೆ ಎಂದು ಮುಖ್ಯಶಿಕ್ಷಕಿ ಎಂ.ಸುಮತಿ ಅಭಿಪ್ರಾಯಪಡುತ್ತಾರೆ.
Advertisement
ಇಂಗ್ಲಿಷ್ ಭಾಷೆ ಕಲಿಕೆಯನ್ನು ಸುಧಾರಿಸುವ “ಹಲೋ ಇಂಗ್ಲಿಷ್’ ಯೋಜನೆ, ವಿಜ್ಞಾನ-ಗಣಿತದಲ್ಲಿ ಪರಿಣತಿ ಒದಗಿಸುವ “ಶ್ರದ್ಧೆ’ ಕಲಿಕಾ ಯೋಜನೆ, ಇತ್ಯಾದಿಗಳು ಇಲ್ಲಿ ಫಲದಾಯಕವಾಗಿವೆ ಎಂದವರು ನುಡಿದರು.
ಶಿಕ್ಷಣ ಮರ್ಮವರಿತ ಶಿಕ್ಷಕರು ಶಿಕ್ಷಣ ಚಟುವಟಿಕೆಗಳ ಮರ್ಮವರಿತ ಶಿಕ್ಷಕರು ಇಲ್ಲಿರುವುದೂ ಶಿಕ್ಷಣಾಲಯದ ಪ್ರಗತಿಗೆ ಪ್ರಧಾನ ಕಾರಣವಾಗಿದೆ. ಸಾರ್ವಜನಿಕರ ನಡುವೆ ಲಾಲು ಮಾಸ್ಟರ್ ಎಂದೇ ಖ್ಯಾತರಾಗಿರುವ ಡಿ.ಅಮೃತಲಾಲ್, ಪಿ.ಕೆ. ಮೊಯ್ದಿàನ್ ಕುಟ್ಟಿ,ಕೆ.ಶ್ರೀಜಾ,ಎನ್.ವಿ. ಪ್ರೇಮ ಕುಮಾರ್, ಎಂ.ಎ. ಮೊಹಸೀನಾ, ಸ್ವಾತಿ,ಕೆ.ವಿಜಯಾ ಎಂಬ ಶಿಕ್ಷಕ ವೃಂದ ಇಲ್ಲಿನ ಅಭಿವೃದ್ಧಿಗೆ ಹೆಗಲು ನೀಡುತ್ತಿದ್ದಾರೆ. ಮಕ್ಕಳ ಮನೋಧರ್ಮವನ್ನು ಚೆನ್ನಾಗಿ ಅರಿತಿರುವ ಪೇದೆ ಸುಂದರ ಅವರು, ಅಡುಗೆಯಾಳು ಪದ್ಮಿನಿ ಅವರು ಶಾಲೆಯ ಕುಟುಂಬದ ಸದಸ್ಯರೇ ಆಗಿದ್ದಾರೆ. ಶಾಲೆಯಲ್ಲಿ ಈಗ ಒಟ್ಟು 72 ವಿದ್ಯಾರ್ಥಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಈ ಬೆಳವಣಿಗೆ ಇತರ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಉತ್ತಮ ಉದಾಹರಣೆಯಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ಸೈ
ಪಠ್ಯೇತರ ಚಟುವಟಿಕೆಗಳೂ ಇಲ್ಲಿ ಅತ್ಯುತ್ತಮ ರೀತಿ ನಡೆಯುತ್ತಿವೆ. ಕಲೋತ್ಸವಗಳು,ವಿಜ್ಞಾನ ಮೇಳಗಳು, ಕ್ರೀಡಾ ಸ್ಪರ್ಧೆಗಳು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಇಲ್ಲಿ ಯಶಸ್ವಿಯಾಗಿ ನಡೆದಿವೆ.ಶಿಕ್ಷಕರ ದಕ್ಷತೆಯ ನೇತೃತ್ವದೊಂದಿಗೆ ಗಣಿತ ಮೇಳ,ಶಿಬಿರಗಳು, ಸಿನಿಮಾ ಪ್ರದರ್ಶನ,ಸಾಕ್ಷ Âಚಿತ್ರಗಳ ಪ್ರದರ್ಶನ,ಅಧ್ಯಯನ ಪ್ರವಾಸ ಇತ್ಯಾದಿಗಳೂ ಇಲ್ಲಿ ಮಕ್ಕಳ ಪ್ರೋತ್ಸಾಹಕ್ಕಾಗಿ ನಡೆಯುತ್ತಿವೆ.ಇವೆಲ್ಲದಕ್ಕೂ ಹೆತ್ತವರು ಮತ್ತು ಸಾರ್ವಜನಿಕರ ಸಕ್ರಿಯ ಬೆಂಬಲವೇ ಕಾರಣ. ಸ್ಮಾರ್ಟ್-ಹೈಟೆಕ್ ಕ್ಲಾಸ್ ರೂಂಗಳು
ಸ್ಥಳೀಯ ಯುವಜನ ಒಕ್ಕೂಟವಾಗಿರುವ ಎರಿಯಾಲ್ ಯೂತ್ ಕಲ್ಚರ್ ಸೆಂಟರ್(ಇ.ವೈ.ಸಿ.ಸಿ.) ನೇತೃತ್ವದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ವಿದ್ಯಾಲಯದಲ್ಲಿ ಒಂದು ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಿಸಿರುವುದು ಕಲಿಕಾ ವಲಯದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತ್‌ನ ಸಹಭಾಗಿತ್ವದೊಂದಿಗೆ ಹೈಟೆಕ್ ಕ್ಲಾಸ್ ರೂಂ ಒಂದನ್ನೂ ಇಲ್ಲಿ ನಿರ್ಮಿಸಲಾಗಿದೆ.