Advertisement
ಶಿಕ್ಷಣ ತಜ್ಞರಲ್ಲದೆ ಚೀನೀ ಉದ್ಯಮಿಗಳು, ಉದ್ಯಮ ತಜ್ಞರು, ಕಾನೂನು ತಜ್ಞರಿಗೂ ಈ ನಿಯಮಾವಳಿ ಅನ್ವಯಿಸಲಿದೆ. ಈ ವೀಸಾ ನಿಬಂಧನೆಗಳು ಪಾಕ್ ಮೇಲೆ ವಿಧಿಸ ಲಾಗಿರುವ ನಿಯಮಗಳಂತೆಯೇ ಇರುತ್ತವೆ ಎಂದು ಸ್ಪಷ್ಪಪಡಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ನಮ್ಮ ಸಂಸ್ಕೃತಿ ಮೇಲೆ ಚೀನದ ಪ್ರಭಾವ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಚೀನದ ಶೈಕ್ಷಣಿಕ ಸಂಸ್ಥೆಗಳು ಭಾರತದ ವಿ.ವಿ.ಗಳ ಜತೆಗೆ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕೇಂದ್ರ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಐಐಟಿ, ಬನಾರಸ್ ಹಿಂದೂ ವಿ.ವಿ., ಜೆಎನ್‌ಯು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ಜತೆಗೆ ಚೀನದ ಸಂಸ್ಥೆಗಳು ಈ ಹಿಂದೆ ಒಪ್ಪಂದ ಮಾಡಿಕೊಂಡಿದ್ದವು. ಚೀನೀ ಭಾಷಾ ತರಬೇತಿ ಕಚೇರಿಗಳನ್ನೂ ಇಲ್ಲಿ ಸ್ಥಾಪಿಸಲಾಗಿತ್ತು. ಭಾರತ ಮತ್ತು ಚೀನದ ಶಿಕ್ಷಣ ಸಂಸ್ಥೆಗಳ ನಡುವೆ ಒಟ್ಟು 54 ಒಡಂಬಡಿಕೆಗಳಾಗಿದ್ದು, ಇವುಗಳ ಬಗ್ಗೆಯೂ ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ.