ನೆಲಮಂಗಲ: ಶಾಲಾ, ಕಾಲೇಜಿನಲ್ಲಿ ಶಿಕ್ಷಣ ಪಡೆ ಯುವ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಓದದೇ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗು ವಂತೆ ಶಿಕ್ಷಣ ಪಡೆಯಬೇಕೆಂದು ಜಿಲ್ಲಾ ಶಿಕ್ಷಣ ಸಂಯೋಜಕ ಹನುಮ ನಾಯಕ್ ಸಲಹೆ ನೀಡಿದರು. ಪಟ್ಟಣದ ಶ್ರೀನಿವಾಸ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಥಾಮಸ್ ಮೆಮೋ ರಿಯಲ್ ಆಂಗ್ಲ ಫ್ರೌಢಶಾಲೆ ವಾರ್ಷಿ ಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದ ಪರೀಕ್ಷೆಗೆ ಗಮನ ಹರಿಸಿ: ಇತ್ತೀಚಿಗೆ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಮಾತ್ರ ಶಿಕ್ಷಣ ಪಡೆಯುವ ಹಂತಕ್ಕೆ ತಲುಪಿದ್ದಾರೆ. ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಪರೀಕ್ಷೆಗಾಗಿ ಸೀಮಿತರಾಗದೆ ಜೀವನದ ಪರೀಕ್ಷೆಗೆ ಬೇಕಾಗಿರುವ ಚಟುವಟಿಕೆಗಳ ಕಡೆಗೂ ಗಮನ ವಹಿಸಬೇಕು ಎಂದರು.
ರ್‍ಯಾಂಕ್ ಮುಖ್ಯವಲ್ಲ: ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿ ಚಟುವಟಿಕೆ, ಪರಿಸರ ಸಂರಕ್ಷಣೆ, ವೃದ್ಧರ ಸೇವೆ ಮುಂತಾದ ಚಟುವಟಿಕೆಗಳ ಕಡೆ ಮುಖ ಮಾಡಿದರೆ ಜೀವನದ ಪಾಠ ಅರಿವಾಗುತ್ತದೆ. ಕೇವಲ ಫಸ್ಟ್ ರ್‍ಯಾಂಕ್ ಪಡೆಯುವುದು ಮುಖ್ಯವಲ್ಲ. ಜೀವನ ನಡೆಸಲು ಯೋಗ್ಯವಾದ ರ್‍ಯಾಂಕ್ ಪಡೆಯುವುದು ಬಹಳ ಮುಖ್ಯ. ಆದ್ದರಿಂದ ಪೋಷಕರು ಕೇವಲ ಪರೀಕ್ಷೆಗಾಗಿ ಮಾತ್ರ ಮಕ್ಕಳನ್ನು ಓದಿಸದೇ ಜೀವನ ರೂಪಿಸಿಕೊಳ್ಳುವ ಕಡೆಗೂ ಗಮನ ಹರಿಸಬೇಕೆಂದು ತಿಳಿಸಿದರು.
ಥಾಮಸ್ ಮೆಮೋರಿಯಲ್ ಆಂಗ್ಲ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷೆ ಸಿಸ್ಟರ್ ಜೊಸ್ನಾ ಫ್ರಾನ್ಸೀಸ್ ಆಂಥೋಣಿ ಮಾತನಾಡಿ, ಮಕ್ಕಳನ್ನು ಕೇವಲ ಪಠ್ಯ ಪುಸ್ತಕ ಶಿಕ್ಷಣಕ್ಕೆ ಸೀಮಿತಗೊಳಿಸದೇ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಆಸಕ್ತಿ ಹೆಚ್ಚಿಸುವ ಮೂಲಕ ಸರ್ವತೋಮುಖ ಬೆಳೆವಣಿಗೆಗೆ ಶಾಲೆ ಸಾಕ್ಷಿಯಾಗಿದೆ. ಈ ಹಿಂದಿನ ಎಸ್.ಎಸ್.ಎಸ್.ಸಿ. ಪರೀಕ್ಷೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಪೋಷಕರ ಸಹಕಾರ ದಿಂದ ಉತ್ತಮ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಸಾಂಸ್ಕೃತಿಕ ಚಟುವಟಿಕೆ: ಥಾಮಸ್ ಮೆಮೋರಿ ಯಲ್ ಆಂಗ್ಲ ಪ್ರೌಢಶಾಲೆ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಲ್.ಕೆ.ಜಿ. ಮಕ್ಕಳಿಂದ ಒಬ್ಬತ್ತನೇ ತರಗತಿ ಮಕ್ಕಳ ವರೆಗೂ ಅನೇಕ ಹಾಡುಗಳಿಗೆ ನೃತ್ಯ ನಡೆಯಿತು. ಥಾಮಸ್ ಮೆಮೋರಿಯಲ್ ಆಂಗ್ಲ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಮನುಷ್ಯನು ಬದುಕಲು ಭೂಮಿ, ಮರ, ಗಿಡ, ನೀರು ಉಳಿಸುವಂತೆ ಜನರಿಗೆ ಜಾಗೃತಿ ಮೂಡಿಸಿ, ರಕ್ಷಿಸುವಂತೆ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರತಿಸಿರಿಲ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ರವಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸೈಯದ್ ಖಲೀಮುಲ್ಲಾ, ಅಮೆರಿಕಾದ ಅತಿಥಿ ಗಳಾದ ಅಡಮ್, ಆಚ್ಛೆ, ಥಾಮಸ್ ಮೆಮೋರಿ ಯಲ್ ಆಂಗ್ಲ ಪ್ರೌಢಶಾಲೆ ಕಾರ್ಯದರ್ಶಿ ಲಿಲ್ಲಿ ಪ್ರಕಾಶಂ, ಮುಖ್ಯ ಶಿಕ್ಷಕಿ ಸುಜಾ ಕಿರಣ್ ಸೇರಿದಂತೆ ಶಾಲಾ ಮಕ್ಕಳ ಪೋಷಕರು, ಸ್ಥಳೀಯರು ಮತ್ತಿತರರು ಭಾಗವಹಿಸಿದ್ದರು.