Advertisement

ತಿಂಗಳಂತ್ಯದಲ್ಲಿ ವಿದ್ಯಾಗಮ ನಿರ್ಧಾರ: ಶಿಕ್ಷಣ ಸಚಿವ ನಾಗೇಶ್‌

07:39 PM Aug 09, 2021 | Team Udayavani |

ಬೆಂಗಳೂರು : ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳ ಭೌತಿಕ ತರಗತಿ ಆಗಸ್ಟ್‌ 23ರಿಂದ ಆರಂಭವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಿಸುವ ಬಗ್ಗೆ ಈ ತಿಂಗಳ ಅಂತ್ಯದೊಳಗೆ ನಿರ್ಧರಿಸಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಹೇಳಿದರು.

Advertisement

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಶಾಲಾರಂಭಕ್ಕೆ ಸಂಬಂಧಿಸಿದಂತೆ ತಜ್ಞರ ವರದಿ ಈಗಾಗಲೇ ಬಂದಿದೆ. ಹೀಗಾಗಿ ಪ್ರೌಢಶಾಲೆ ಮತ್ತು ಪಿಯುಸಿ ತರಗತಿ ಆರಂಭಿಸುವ ನಿರ್ಧಾರವನ್ನು ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಿಸುವ ಬಗ್ಗೆ ಆಗಸ್ಟ್‌ ಅಂತ್ಯದೊಳಗೆ ತೀರ್ಮಾನಿಸಲಿದ್ದೇವೆ. ಭೌತಿಕ ತರಗತಿ ಹೇಗೆ ನಡೆಸಬೇಕು ಎಂಬುದು ಸಹಿತವಾಗಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ವಿಸ್ತೃತ ಎಸ್‌ಒಪಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ ಎಂದರು.

ದಾಖಲಾತಿ ಹೆಚ್ಚಳಕ್ಕೆ ಕ್ರಮ:
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಮಾತನಾಡಿ, ನಮ್ಮಲ್ಲಿ 5600 ಪದವಿ ಪೂರ್ವ ಕಾಲೇಜುಗಳಿದ್ದು, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಸೇರಲು ಅವಕಾಶವಿದೆ. ಜತೆಗೆ ಈ ವರ್ಷ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸುವ ಕಾರ್ಯವೂ ನಡೆಯುತ್ತಿದೆ. ಅನುದಾನ ರಹಿತ ಪಿಯು ಕಾಲೇಜು ಆರಂಭಿಸಲು ಅರ್ಜಿ ಆಹ್ವಾನಿಸಿದ್ದೇವೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಸಿಗಲಿದೆ. ಉಪನ್ಯಾಸಕರ ಕೊರತೆ ನಿಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು

ಈಗಾಗಲೇ ಶೇ.84ರಷ್ಟು ಶಾಲಾ ಶಿಕ್ಷಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಇದರಲ್ಲಿ ಶೇ.19ರಷ್ಟು ಶಿಕ್ಷಕರು 2ನೇ ಡೋಸ್‌ ಕೂಡ ಪಡೆದಿದ್ದಾರೆ. ಉಳಿದ ಶಿಕ್ಷಕರಿಗೆ ಆಗಸ್ಟ್‌ 23ರೊಳಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದ್ದೇವೆ. ಭೌತಿಕ ತರಗತಿ ಆರಂಭಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆನ್‌ಲೈನ್‌ ತರಗತಿಯೂ ಮುಂದುವರಿಯಲಿದೆ. ಪಾಳಿ ಪದ್ಧತಿಯಲ್ಲಿ ತರಗತಿ ನಡೆಯಲಿದೆ ಎಂದು ವಿವರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next