Advertisement

ನಾಲವಾರ ಶ್ರೀಗಳ ಆಶೀರ್ವಾದ ಪಡೆದ  ಶಿಕ್ಷಣ ಸಚಿವ ನಾಗೇಶ

07:19 PM Aug 08, 2021 | Team Udayavani |

ವಾಡಿ (ಚಿತ್ತಾಪುರ): ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಸಿ.ನಾಗೇಶ ಅವರು ನಾಲವಾರ ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಪೂಜ್ಯ ಡಾ.ಸಿದ್ಧ ತೋಟೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

Advertisement

ಶನಿವಾರ (ಆ.08) ಸಂಜೆ ಶ್ರೀಮಠಕ್ಕೆ ಭೇಟಿ ನೀಡಿದ ಸಚಿವ ನಾಗೇಶ, ಕೋರಿಸಿದ್ಧನ ಗದ್ದುಗೆಗೆ ಪೂಜೆ ಸಲ್ಲಿಸಿದರು. ಆರತಿ ಬೆಳಗಿ ದೇವರ ದರ್ಶನ ಪಡೆದರು. ನಂತರ ಪೂಜ್ಯ ತೋಟೇಂದ್ರ ಶ್ರೀಗಳ ಪಾದದಡಿ ಕುಳಿತು ಪುನಿತರಾದರು. ಇದೆ ವೇಳೆ ಶ್ರೀಗಳು ಶಿಕ್ಷಣ ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಮಠದ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ, ರಾಜ್ಯದಲ್ಲಿ ಏಳುತ್ತಿರುವ ಕೋವಿಡ್ ಸೊಂಕಿನ ಅಲೆಗಳ ಮಧ್ಯೆ ಜನಗಳ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ವರ್ಷದಿಂದ ಶಾಲಾ ಕಾಲೇಜು ತೆರೆಯದ ಕಾರಣ ಮಕ್ಕಳ ಶೈಕ್ಷಣಿಕ ಜೀವನ ಆತಂಕದಲ್ಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಠಿಯಿಂದ ಉತ್ತಮ ಆಡಳಿತ ನೀಡಲು ಸಿಕ್ಕಿರುವ ಅಧಿಕಾರದ ಅವಕಾಶವನ್ನು ಉಪಯೋಗಿಸಿಕೊಳ್ಳಿ. ನಾಡಿನ ಜನರ ಮತ್ತು ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿರಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ದ್ವೀದಳ ದಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಿಜೆಪಿ ಯಾದಗಿರಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಕಾರ್ಯದರ್ಶಿ ಗುರು ಕಾಮಾ, ಮುಖಂಡರಾದ ಮಹೇಶ ವೀರಯ್ಯಸ್ವಾಮಿ ಚಿಂಚೋಳಿ, ಶ್ರೀಮಠದ ವಕ್ತಾರ ಮಹಾದೇವ ಗವ್ಹಾರ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next