Advertisement
ಶಿಕ್ಷಕಿಯಿಂದ ಅಭಿವೃದ್ಧಿ ಕನಸುಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾ.ಪಂ ಚುನಾವಣೆಯಲ್ಲಿ ಎಂ.ಎ.ಬಿಇಡಿ ಪದವೀಧರೆ ಚುನಾವಣೆ ಕಣದಲ್ಲಿರುವುದು ವಿಶೇಷವಾಗಿದೆ. ಪಾಲಹಳ್ಳಿ ಗ್ರಾಮದ 2ನೇ ವಾರ್ಡಿನಿಂದ ಸ್ಪರ್ಧಿಸಿರುವ ಶ್ರುತಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ ಯಾಗಿದ್ದಾರೆ. ಶ್ರೀರಂಗಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು ಗ್ರಾ. ಪಂ ಚುನಾವಣೆಯ 2ನೇ ವಾರ್ಡಿನ ಬಿಸಿಎಂ(ಬಿ) ಮಹಿಳಾ ವರ್ಗದ ಮೀಸಲಾಗಿದ್ದ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ
ಹಾವೇರಿ: ಜಿಲ್ಲೆಯಲ್ಲಿ ಈ ಬಾರಿಯ ಗ್ರಾಪಂ ಚುನಾವಣೆಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ವೈದ್ಯರು ಸ್ಪರ್ಧಿಸಲು ಸನ್ನದ್ಧರಾಗಿದ್ದಾರೆ. ರಾಣಿಬೆನ್ನೂರು ತಾಲೂಕಿನ ಮಾಕನೂರು ಗ್ರಾ.ಪಂನಲ್ಲಿ ಬಿಎಎಂಎಸ್ ವೈದ್ಯ ಡಾ| ಮಾಹಂತೇಶ ಹುಚ್ಚಣ್ಣನವರ ಸ್ಪರ್ದಿಸಿದ್ದಾರೆ. ಅರೇಮಲ್ಲಾಪುರ ಗ್ರಾಮದಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಪತ್ರಕರ್ತ ವೀರೇಶ ಬಾರ್ಕಿ, ರಾಣಿಬೆನ್ನೂರು ತಾಲೂಕಿನ ಇಟಗಿ ಗ್ರಾಪಂ ಚುನಾವಣೆಗೆ ಮಾಕನೂರು ಗ್ರಾಮದ ಎಂಇಡಿ ಪದವೀಧರರಾದ ನೇತ್ರಾ ಕಬ್ಟಾರ ಸ್ಪ ರ್ಧಿಸಿದ್ದಾರೆ. ಹಾಲಕ್ಕಿ ಸಮಾಜದ ಸ್ನಾತಕೋತ್ತರ ಪದವೀಧರೆ
ಕಾರವಾರ: ಕುಮಟಾ ತಾಲೂಕಿನ ಅಳ ಕೋಡ್ ಗ್ರಾಪಂ ವ್ಯಾಪ್ತಿಯ ವಾರ್ಡ್ ನಂ.3 ರಲ್ಲಿ ಹಾಲಕ್ಕಿ ಸಮಾಜದ ಮಹಿಳೆ ಎಂಕಾಂ ಪದವೀಧರೆ ಪ್ರೇಮಾ ಸುರೇಶ ಗೌಡ ಸ್ಪರ್ಧಿಸಿದ್ದಾರೆ. ಅಳ್ಕೊಡ್ ಗ್ರಾಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಪಡೆದವರೊಬ್ಬರು ಗ್ರಾ.ಪಂ ಚುನಾ ವಣಾ ಕಣಕ್ಕಿಳಿದಿದ್ದಾರೆ. ಈ ಬಾರಿ ಗ್ರಾಪಂ ಚುನಾವಣೆ ಯಲ್ಲಿ ಹಲವಾರು ಹೊಸ ಮುಖಗಳು ಸ್ಪರ್ಧಿಸುತ್ತಿದ್ದು, ಗ್ರಾಮದ ಅಭಿವೃದ್ಧಿಗಾಗಿ ಚುನಾ ವಣಾ ಕಣಕ್ಕಿಳಿಯು ತ್ತಿರುವುದಾಗಿ ಹೇಳುತ್ತಿದ್ದಾರೆ. ಅದರಲ್ಲೂ ಉನ್ನತ ಶಿಕ್ಷಣ ಪಡೆದ ಮಹಿಳೆ ಈ ಬಾರಿ ಕಣಕ್ಕಿಳಿ ದಿರುವುದು ವಿಶೇಷ.
Related Articles
ಚಿಕ್ಕಮಗಳೂರು: ಗ್ರಾಪಂ ಚುನಾವಣೆ ಅಖಾಡದಲ್ಲಿ ಮಾಜಿ ಸೈನಿಕರೊಬ್ಬರು ಸ್ಪರ್ಧೆಗಿಳಿದಿರುವುದು ಈ ಬಾರಿಯ ಗ್ರಾ.ಪಂ. ಚುನಾವಣೆ ವಿಶೇಷಗಳಲ್ಲಿ ಒಂದಾಗಿದೆ. ಮಾಜಿ ಸೈನಿಕ ಬಿ.ಎಂ.ರಾಘವೇಂದ್ರ ಅವರು ಚಿಕ್ಕಮಗಳೂರು ತಾಲೂಕು ಕೆ.ಆರ್.ಪೇಟೆ ಗ್ರಾಪಂನಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 1996ರಲ್ಲಿ ಭಾರತ ಸೇನೆಯ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್( ಬ್ಲ್ಯಾಕ್‌ಕ್ಯಾಟ್) ತುಕಡಿಯಲ್ಲಿ 20 ವರ್ಷ ಕರ್ತವ್ಯ ನಿರ್ವಹಿಸಿ, 2016ರಲ್ಲಿ ನಿವೃತ್ತಿ ಪಡೆದಿದ್ದಾರೆ. ನಿವೃತ್ತಿ ನಂತರ ಕೃಷಿ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಜಮ್ಮು-ಕಾಶ್ಮೀರ, ಹರಿಯಾಣ, ದೆಹಲಿಗಳಲ್ಲಿ ಕೆಲಸ ನಿರ್ವಹಿಸಿದ್ದು, 2002-03ರಲ್ಲಿ ಎಲ್.ಕೆ.ಅಡ್ವಾಣಿ ಅವರು ಉಪ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆಯ ಕಮಾಂಡೋ ಆಗಿ ಕಾರ್ಯ ನಿರ್ವಹಿಸಿದ್ದರು. ಎಲ್.ಕೆ. ಆಡ್ವಾಣಿ ಅವರು ಕನ್ಯಾಕುಮಾರಿಯಿಂದ ಅಮೃತಸರದವರೆಗೆ “ಭಾರತ ಉದಯ ಯಾತ್ರೆ ನಡೆಸಿದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆಯ 20 ಜನರ ತಂಡದಲ್ಲಿ ಬಿ.ಎಂ.ರಾಘವೇಂದ್ರ ಕೂಡ ಕಾರ್ಯನಿರ್ವಹಿಸಿದ್ದು, ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ, ಜಯಲಲಿತಾ, ಮಹೇಂದ್ರ ಸಿಂಗ್ ಬಿಟ್ಟಾ, ಪ್ರಫುಲ್ ಕುಮಾರ್ ಮೆಹ್ತಾ, ಸೇರಿ ಅನೇಕ ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲೂ ಸೇವೆ ಸಲ್ಲಿಸಿದ್ದಾರೆ.
Advertisement
ಅದೃಷ್ಟ ಪರೀಕ್ಷೆಗಿಳಿದ ಪ್ರಾಚಾರ್ಯಗದಗ: ಎಂಜಿನಿಯರಿಂಗ್ ಪದವಿ ಪಡೆದು ಐಟಿಐ ಕಾಲೇಜುವೊಂದರಲ್ಲಿ ಪ್ರಾಚಾರ್ಯರಾಗಿರುವ ರಮೇಶ್ ಯಲ್ಲಪ್ಪ ವಡವಿ ಮುಂಡರಗಿ ತಾಲೂಕಿನ ಡಂಬಳ ಗ್ರಾಪಂನ ನಾರಾಯಣಪುರ ಗ್ರಾಮದ 9ನೇ ವಾರ್ಡ್‌ನಿಂದ ಸ್ಪ ರ್ಧಿಸಿದ್ದಾರೆ. ಬೆಂಗಳೂರಿನ ವೇಮನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. 2018ರಿಂದ ಗದುಗಿನ ಶ್ರೀ ರಾಕೇಶ್ ಸಿದ್ಧರಾಮಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಸಾಮಾಜಿಕ ಸೇವೆಗೆ ಧುಮುಕುವ ಹಂಬಲದಲ್ಲಿದ್ದಾರೆ. ಕುಣಿಗಲ್‌ನಿಂದ ಪ್ರಾಂಶುಪಾಲ ಸ್ಪರ್ಧೆ
ಕುಣಿಗಲ್: ಪಟ್ಟಣದ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಕಪನಿಪಾಳ್ಯ ರಮೇಶ್ ಕೊತ್ತಗೆರೆ ಪಂಚಾಯ್ತಿ ಮಾವಿನಕಟ್ಟೆ ಕ್ಷೇತ್ರದಿಂದ, ಅತಿಥಿ ಉಪನ್ಯಾಸಕ ಡಿ.ಕೆ.ನಾಗಣ್ಣ, ಸಂತೇಮಾವತ್ತೂರು ಎರಡನೇ ಬ್ಲಾಕ್‌ನಿಂದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಮೋದ್, ನಡೆಮಾವಿನಪುರ ಕ್ಷೇತ್ರದಿಂದ, ಭಕ್ತರಹಳ್ಳಿ ಗ್ರಾಪಂ ಕುರುಡಿಹಳ್ಳಿ ಕ್ಷೇತ್ರದಿಂದ ಎಂಜಿನಿಯರ್ ಮಧು, ಕೆಂಪನ ಹಳ್ಳಿ ಗ್ರಾಪಂನ ಸೋಂದಲಗೆರೆ
ಕ್ಷೇತ್ರದಿಂದ ಎಂಜಿನಿಯರ್ ರವೀಂದ್ರ, ನಿವೃತ್ತ ಪಿಎಸ್‌ಐ ಕೆಂಪರಾಜು ಶೆಟ್ಟಿಗೆರೆ ಕ್ಷೇತ್ರದಿಂದ, ಅಮೃತೂರು ಎಎಸ್‌ಐ ಜೈರಾಮ್ ಅವರ ಪತ್ನಿ ಪದ್ಮಾ ಬೆನವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ಪರ್ಧೆ
ದಾವಣಗೆರೆ: ಚನ್ನಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಗತೂರು ಗ್ರಾಪಂನಲ್ಲಿ ಎಂಜಿನಿಯರಿಂಗ್ ಪದವೀಧರರೋರ್ವರು ಸ್ಪರ್ಧಿಸಿದ್ದಾರೆ. ಶಿವಕುಮಾರಸ್ವಾಮಿ ಬಿ.ಎಸ್. ಅಖಾಡಕ್ಕಿಳಿದ ಪದವೀಧರ. ಕಗತೂರಿನ ವಾರ್ಡ್ ನಂ.1, ವಾರ್ಡ್ ನಂ. 2 ಎರಡರಲ್ಲೂ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದಾರೆ. ಮೂರೂವರೆ ವರ್ಷ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಇವರು, 2018ರಲ್ಲಿ ಕಂಪನಿ ಕೆಲಸ ಬಿಟ್ಟು ತವರಿಗೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪದವೀಧರ ಸ್ಪರ್ಧೆ
ಭಾರತೀನಗರ: ಎಂ.ಎಸ್ಸಿ. ಪದವೀಧರ ರೊಬ್ಬರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆ.ಹೊನ್ನಲಗೆರೆ ಸರ್ಕಾರಿ ಪಿಯು ಕಾಲೇಜು ಹಾಗೂ ಭಾರತೀ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಂ.ದೊಡ್ಡಿಯ ಮಾದೇಗೌಡ ಬಡಾವಣೆಯ ಎಂ.ಎಸ್. ಪ್ರಮೋದ್ ಕುಮಾರ್ ಅವರು ಕೆ.ಎಂ.ದೊಡ್ಡಿ ಗ್ರಾಪಂ 3ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಖಾಸಗಿ ಕಂಪನಿ ತೊರೆದು ಅಖಾಡಕ್ಕೆ
ಬಾಗಲಕೋಟೆ: ಡಬಲ್ ಡಿಗ್ರಿ ಪಡೆದು, ಖಾಸಗಿ ಕಂಪನಿಯೊಂದರಲ್ಲಿ ಕೈ ತುಂಬ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ, ಗ್ರಾ.ಪಂ. ಚುನಾವಣೆಗೆ ಧುಮುಕಿದ್ದು, ಪ್ರಮುಖ ಐದು ಅಂಶಗಳ ಅಭಿವೃದ್ಧಿಯ ಗುರಿ ಯೊಂದಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾನೆ. ತಾಲೂಕಿನ ಯಡ ಹಳ್ಳಿ ಗ್ರಾಪಂ ವ್ಯಾಪ್ತಿಯ ಆನದಿನ್ನಿ ಕ್ರಾಸ್-6ನೇ ವಾರ್ಡ್‌ನ ಸಾಮಾನ್ಯ ವರ್ಗ ಸ್ಥಾನಕ್ಕೆ ಬಿಕಾಂ ಹಾಗೂ ಎಂಬಿಎ ಪದವೀಧರ ಸಂತೋಷ ಬಜೆಟ್ಟಿ ಎಂಬ 30 ವರ್ಷದ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನೌಕರಿ ಬಿಟ್ಟು ಚುನಾವಣೆಗೆ ಇಳಿದಿದ್ದಾನೆ. ಕರಾವಳಿ: ಪಿ.ಜಿ.,ಎಂಜಿನಿಯರ್ ಸ್ಪರ್ಧಿಗಳು
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾ.ಪಂ.ನಲ್ಲಿ ಎಂಕಾಂ ಪದವೀಧರ ಅಶ್ವಥ ರಾವ್ ಬಾಳಿಕೆ, ಸರಪಾಡಿ ಗ್ರಾ.ಪಂ.ನಲ್ಲಿ ಎಂಎಸ್‌ಡಬ್ಲ್ಯು ಪದವೀಧರೆ ಜಯಂತಿ ರಾಮಣ್ಣ ನಾಯ್ಕ, ಮತ್ತು ಬಿಎಡ್ ಪದವೀಧರೆ ಸೌಮ್ಯಲತಾ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಳಿಕೆ ಗ್ರಾ.ಪಂ.ನಲ್ಲಿ ನಿವೃತ್ತ ಶಿಕ್ಷಕ ಕಾನ ಈಶ್ವರ ಭಟ್ ಚುನಾವಣ ಕಣದಲ್ಲಿದ್ದಾರೆ. ಎಂಜಿನಿಯರಿಂಗ್ ಪದವೀಧರ ಸ್ಪರ್ಧೆ
ಮಂಗಳೂರು ತಾ|ನ ಮೂಲ್ಕಿ ಬಳಿಯ ಕಿಲ್ಪಾಡಿ ಗ್ರಾ.ಪಂ.ನಲ್ಲಿ ಎಂಜಿನಿಯರಿಂಗ್ ಪದವೀಧರರಾಗಿರುವ ವಿಕಾಸ್ ಶೆಟ್ಟಿ ಸ್ಪರ್ಧೆಗೆ ಇಳಿದಿದ್ದಾರೆ. ಪಡುಪಣಂಬೂರು ಪಂಚಾಯತ್‌ನಲ್ಲಿ ಬಿಇ ಪದವೀಧರೆ ಶೋಭಿತಾ ವಸಂತ್ ಸ್ಪರ್ಧಿಸಿದ್ದಾರೆ. ಕಾಣಿಯೂರು 3ನೇ ವಾರ್ಡ್‌ನಲ್ಲಿ ಎಂಎಸ್‌ಡಬ್ಲ್ಯೂ ಪದವೀಧರ ಅಮಿತ್ ಕುಮಾರ್ ಅವರು ಮೊದಲ ಬಾರಿ ಸ್ಪರ್ಧಿಸಿದ್ದಾರೆ. ನ್ಯಾಯತರ್ಪು ಒಂದನೇ ವಾರ್ಡ್‌ನಲ್ಲಿ ಎಂಎ, ಬಿಎಡ್ ಪದವೀಧರೆ ಭವಾನಿ ಲೋಕೇಶ್ ಅವರು ಪರಿಶಿಷ್ಟ ಜಾತಿ ಮಹಿಳೆ ಮೀಸಲು ಸ್ಥಾನದಿಂದ ಮೊದಲ ಬಾರಿ ಸ್ಪರ್ಧಿಸಿದ್ದಾರೆ. ಬೆಳುವಾಯಿ ಗ್ರಾ.ಪಂ.ನ ವಾರ್ಡ್ 4ರಲ್ಲಿ ಎಂಎಸ್ಸಿ ಪದವೀಧರೆ, ಹಾಲಿ ಎಂಎಸ್‌ಡಬ್ಲ್ಯು ಪದವಿ ವ್ಯಾಸಂಗ ನಡೆಸುತ್ತಿರುವ ಜಯಶ್ರೀ ಕಣಕ್ಕಿಳಿದಿದ್ದಾರೆ. ಪುತ್ತಿಗೆ ಪಂಚಾಯತ್‌ನಲ್ಲಿ ಎಂಕಾಂ ಪದವೀಧರೆ ಸ್ಮಿತಾ ಆರ್., ತೆಂಕಮಿಜಾರು ಪಂಚಾಯತ್‌ನಲ್ಲಿ ಕಾಲೇಜು ಉಪನ್ಯಾಸಕರಾಗಿರುವ ಜನಾರ್ದನ ಗೌಡ, ಬಾಳೆಪುಣಿ ಪಂಚಾಯತ್‌ನಲ್ಲಿ ಎಂಜಿನಿಯರ್ ಶಶಿನಂದನ್ ಸ್ಪರ್ಧೆಯಲ್ಲಿದ್ದಾರೆ. ಕೊಣಾಜೆ ಅಡ್ಕರೆಪಡ್ಪುನಲ್ಲಿ ಎಂ.ಎ., ಬಿಎಡ್ ಮಾಡಿರುವ ಸುಮಲತಾ ಅವರು ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನ ಉದ್ಯೋಗ ತೊರೆದ ಎಂಎಸ್‌ಡಬ್ಲ್ಯು ಪದವೀಧರೆ ಬೆಂಗಳೂರಿನಲ್ಲಿನ ಉದ್ಯೋಗ ತೊರೆದು ಎಂಎಸ್‌ಡಬ್ಲ್ಯು ಪದವೀಧರೆ ನಿಶ್ಚಿತಾ ಶೆಟ್ಟಿ ಬಳ್ಕೂರು ಗ್ರಾ.ಪಂ.ನಲ್ಲಿ ಸ್ಪರ್ಧಿಸಿದ್ದಾರೆ. ಊರಿನ ಅಭಿವೃದ್ಧಿಗೆ ತನ್ನಿಂದಾದ ಸೇವೆ ಸಲ್ಲಿಸಬೇಕೆಂಬ ಹಂಬಲದಲ್ಲಿ ಅವರು ಉದ್ಯೋಗ ತೊರೆದು ಊರಿಗೆ ಬಂದಿದ್ದಾರೆ. ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ದೀಕ್ಷಿತಾ ಅವರು ಸ್ಪರ್ಧಿಸುತ್ತಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಮೊದಲ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. ಸಾಗರ ತಾಲೂಕಿನಲ್ಲಿ ಉಪನ್ಯಾಸಕರ ಉಮೇದುವಾರಿಕೆ
ಸಾಗರ: ತಾಲೂಕಿನ ಗ್ರಾಪಂ ಕಣದಲ್ಲಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಉಪನ್ಯಾಸಕರು ಸ್ಪರ್ಧೆಗಿಳಿದಿರುವುದು ವಿಶೇಷ. ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ 5ನೇ ವಾರ್ಡ್ ಅಭ್ಯರ್ಥಿಯಾಗಿ ಪಿಎಚ್‌ಡಿ, ಎಎಸ್‌ಸಿ ಪದವೀಧರ ಡಾ|ಗಿರೀಶ್ ಜನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಇವರ ಹೊರತಾಗಿ ಮತ್ತಿಬ್ಬರು ಉನ್ನತ ವ್ಯಾಸಂಗದ ಅಭ್ಯರ್ಥಿಗಳು ತಾಲೂಕಿನ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕೆಳದಿ ಗ್ರಾಪಂ ವ್ಯಾಪ್ತಿಯ ಹಾರೆಗೊಪ್ಪ ಬಂದಗದ್ದೆ ವಾರ್ಡ್ 3ರಲ್ಲಿ ಎಚ್.ಎಸ್.ರಮೇಶ್ ಅಭ್ಯರ್ಥಿಯಾಗಿದ್ದಾರೆ. ಗಣಿತದಲ್ಲಿ ಎಂಎಸ್‌ಸಿ ಪದವೀಧರರಾಗಿದ್ದು, ಸಾಗರದಲ್ಲಿ ಟ್ಯುಟೋರಿಯಲ್ ನಡೆಸುತ್ತಿದ್ದಾರೆ. ಹೆಗ್ಗೊàಡು ಗ್ರಾಪಂ ವ್ಯಾಪ್ತಿಯ ಮಾವಿನಸರದಲ್ಲಿ ರಾಜೇಶ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಡಿಪ್ಲೊಮಾ ಪದವಿ, ಐಟಿಐ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಸೂಗೂರು ಗ್ರಾಪಂಗೆ ಎಂಕಾಂ ಪದವೀಧರೆ ಸ್ಪರ್ಧೆ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕು ಕೆ. ಸೂಗೂರು ಗ್ರಾಪಂನ 1ನೇ ವಾರ್ಡ್ ನಿಂದ ಸ್ನಾತಕೋತ್ತರ ವಿದ್ಯಾರ್ಥಿನಿ ಪೂಜಾರಿ ಶೋಭಾ ಸ್ಪರ್ಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಎಂಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿ ಪೂಜಾರಿ ಶೋಭಾ, ವಿದ್ಯಾಭ್ಯಾಸ ಪೂರ್ಣಗೊಳ್ಳುವ ಮುನ್ನವೇ ಜನಸೇವೆಯಲ್ಲಿ ತೊಡಗಲು ಮುಂದಾಗಿದ್ದಾರೆ. ಬಿಇ ಪದವೀಧರನ ಕನಸು
ಬೆಳಗಾವಿ: ಬಡವರಿಗೆ ಗ್ರಾಮ ಪಂಚಾಯತ್ ನ್ಯಾಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಿಇ ಮೆಕಾನಿಕಲ್ ಪದವೀಧರ ಶಿವಕುಮಾರ ಹೊನ್ನಮಾನೆ ಈ ಬಾರಿ ಉಗಾರ ಬುದ್ರುಕ ಗ್ರಾ.ಪಂ ಗೆ ಸ್ಪರ್ಧಿಸುತ್ತಿದ್ದಾರೆ. 2014-15ರಲ್ಲಿ ಬಿಇ ಮುಗಿಸಿ ಪುಣೆ, ಸಾಂಗಲಿಯಲ್ಲಿ ಕೆಲವು ತಿಂಗಳು ನೌಕರಿ ಮಾಡಿ ರಾಜೀನಾಮೆ ಕೊಟ್ಟು ಊರಿಗೆ ಮರಳಿ ಕೃಷಿ ಚಟುವಟಿಕೆಯಲಿ ತೊಡಗಿಕೊಂಡಿದ್ದಾರೆ. ಐದಾರು ವರ್ಷಗಳಿಂದ ಗ್ರಾಪಂನಲ್ಲಿಯ ಅವ್ಯವಹಾರದಿಂದ ಬೇಸತ್ತಿದ್ದೇವೆ. ಆದುದರಿಂದ ಈ ಬಾರಿ ನಾನೇ ಸ್ಪರ್ಧಿಸು ತ್ತಿದ್ದೇನೆ ಎನ್ನುತ್ತಾರೆ. ಕೃಷಿ ಜತೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧೆ
ಸೊರಬ: ಎಂಜಿನಿಯರಿಂಗ್ ಪದವೀಧರರೊಬ್ಬರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜಡೆ ಗ್ರಾಪಂ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ವಾರ್ಡ್ ನಂ.1ರಲ್ಲಿ ರವೀಂದ್ರ ಎ. ನಾಡಿಗೇರ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 1995ರಲ್ಲಿ ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ ರವೀಂದ್ರ, ಸುಮಾರು 25 ವರ್ಷ ಗೋವಾದ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದರು. 5 ವರ್ಷಗಳಿಂದ ಸ್ವ ಗ್ರಾಮದಲ್ಲಿ ನೆಲೆಸಿದ್ದು, ತಮ್ಮ 32 ಎಕರೆಯಲ್ಲಿ ಕೃಷಿ ಕಾಯಕ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ರಾಮರಾಜ್ಯದ ಕನಸು
ಮಂಡ್ಯ: ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವಕರು, ಪದವೀಧರರು, ಎಂಜಿನಿಯರ್‌ಗಳು, ವಕೀಲರು ಸ್ಪರ್ಧಿಸಿದ್ದಾರೆ. ಎಂಜಿನಿಯರ್ ಸುಹಾಸ್: ಮಳವಳ್ಳಿ ತಾಲೂಕಿನ ಕುಂದೂರು ಗ್ರಾಪಂ ವ್ಯಾಪ್ತಿಯ ಮಲ್ಲಿಗಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರ ದಿಂದ ಬಿಇ ಇನ್ ಎಲೆಕ್ಟ್ರಾನಿಕ್ಸ್ ಪದವೀಧರ ಸುಹಾಸ್ ಕಣದಲ್ಲಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ 20 ಸಾವಿರ ವೇತನಕ್ಕೆ ಕೆಲಸ ನಿರ್ವಹಿಸುತ್ತಿದ್ದರು. ಹುದ್ದೆಯನ್ನು ತ್ಯಜಿಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಾನು ಹುಟ್ಟಿ ದಾಗಿನಿಂದಲೂ ಗ್ರಾಮ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಸರಕಾರದ ಯೋಜನೆಗಳನ್ನು ಗ್ರಾಮದ ಅಭಿವೃದ್ಧಿಗೆ ಬಳಸಲು ಯೋಜನೆ ರೂಪಿಸಿ ಚುನಾವಣೆಗೆ ಧುಮುಕುತ್ತಿದ್ದೇನೆ ಎನ್ನುತ್ತಾರೆ ಸುಹಾಸ್. ಅತಿಥಿ ಉಪನ್ಯಾಸಕಿ ಶಿಲ್ಪಶ್ರೀ: ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಕ್ಯಾತುಂಗೆರೆ ವಾರ್ಡ್‌ನ ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಎಂಎಸ್ಸಿ ಪದವೀಧರೆ ಶಿಲ್ಪಶ್ರೀ ಸ್ಪರ್ಧಿಸಿದ್ದಾರೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಎಸ್ಸಿ ಪದವಿ ಪಡೆದಿರುವ ಇವರು ವಿವಿಧ ಖಾಸಗಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ ನಡೆಯುವ ಚುನಾವಣೆಯಲ್ಲಿ ವಿದ್ಯಾವಂತರು ಹೆಚ್ಚಾಗಿ ಬರಬೇಕು. ಅಲ್ಲದೆ ಜನಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆಂದು ಶಿಲ್ಪಶ್ರೀ ತಿಳಿಸಿದರು. ಎಂಎ ಪದವೀಧರ ಸತೀಶ್: ಬೆಂಗಳೂರು ವಿಶ್ವವಿದ್ಯಾಲ ಯದ ಇತಿಹಾಸ ವಿಭಾಗದಲ್ಲಿ ಎಂಎ ಹಾಗೂ ಬಿಎಡ್ ಪದವಿ ವ್ಯಾಸಂಗ ಮಾಡಿರುವ ಎ.ಸಿ.ಸತೀಶ್ ಹಲಗೂರು ಗ್ರಾಪಂ ವ್ಯಾಪ್ತಿಯ ಅಂತರವಳ್ಳಿ ಗ್ರಾಮದಿಂದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಗ್ರಾಮ ಸ್ವರಾಜ್ ಆಶಯಗಳನ್ನು ಈಡೇರಿಸುವ ಉದ್ದೇಶದಿಂದ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎನ್ನುತ್ತಾರೆ ಸತೀಶ್. ಬಿಇ ಪದವೀಧರೆ ಆರ್.ಶೃತಿ: ಮಳವಳ್ಳಿ ತಾಲೂಕಿನ ಹಲಗೂರು ಗ್ರಾಪಂಚಾಯ್ತಿಯ 2ನೇ ವಾರ್ಡ್‌ನಿಂದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಪದವಿ ಪಡೆದಿರುವ ಆರ್.ಶೃತಿ ಕಣದಲ್ಲಿದ್ದಾರೆ. ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಗಮನಹರಿಸಲಿಲ್ಲ. ಆದ್ದರಿಂದ ಅವರನ್ನು ದೂರುವ ಬದಲು ನಾನೇ ಖುದ್ದಾಗಿ ಸ್ಪರ್ಧಿಸಬೇಕು ಎಂಬ ಉದ್ದೇಶದಿಂದ ಸ್ಪರ್ಧಿಸಿದ್ದು, ಜನರ ಸೇವೆ ಮಾಡಲು ಮುಂದ್ದಾಗಿದ್ದೇನೆ ಎನ್ನುತ್ತಾರೆ ಆರ್.ಶೃತಿ. ಎಂಬಿಎ ಪದವೀಧರ ಎಸ್.ಜೆ.ಪ್ರಮೋದ: ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಪಂ ವ್ಯಾಪ್ತಿಯ ಶಿಖರನಹಳ್ಳಿ ಸಾಮಾನ್ಯ ಮೀಸಲು ಕ್ಷೇತ್ರದಿಂದ ಎಂಬಿಎ ಪದವೀಧರ ಎಸ್.ಜೆ.ಪ್ರಮೋದ ಸ್ಪರ್ಧಿಸಿದ್ದಾರೆ. ಖಾಸಗಿ ಕಂಪನಿಯ ಉದ್ಯೋಗ ತ್ಯಜಿಸಿ ನಾಮಪತ್ರ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಕೆಲವೇ ವ್ಯಕ್ತಿಗಳು ಅಧಿಕಾರ ಹಿಡಿಯುತ್ತಿದ್ದಾರೆ. ಆದರೆ ಗ್ರಾಮದ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಈ ಬಾರಿ ಸ್ಪರ್ಧಿಸಿ ಗ್ರಾಮದ ಅಭಿವೃದ್ಧಿ ಶ್ರಮಿಸುವ ಆಶಯ ಹೊಂದಿದ್ದೇನೆ ಎನ್ನುತ್ತಾರೆ ಎಸ್.ಜೆ. ಪ್ರಮೋದ.