Advertisement

ಈಡನ್‌ನಲ್ಲಿ ಮೆರೆದ ಉತ್ತಪ್ಪ  -ಕೆಕೆಆರ್‌

01:30 PM Apr 16, 2017 | Harsha Rao |

ಕೋಲ್ಕತಾ: ತವರಿನ “ಈಡನ್‌ ಗಾರ್ಡನ್ಸ್‌’ನಲ್ಲಿ ಕೋಲ್ಕತಾ ನೈಟ್‌ರೈಡರ್ ಮತ್ತೂಂದು ಗೆಲುವಿನ ಪ್ರದರ್ಶನ ನೀಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 17 ರನ್ನುಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ 6 ವಿಕೆಟಿಗೆ 172 ರನ್‌ ಗಳಿಸಿ ಸವಾಲೊಡ್ಡಿ ದರೆ, ಹೈದರಾಬಾದ್‌ 6 ವಿಕೆಟಿಗೆ 155 ರನ್‌ ಮಾಡಿ ಶರಣಾಯಿತು. ಇದು ಗಂಭೀರ್‌ ಪಡೆ 4 ಪಂದ್ಯಗಳಲ್ಲಿ ಸಾಧಿಸಿದ 3ನೇ ಗೆಲುವು.

ಇನ್ನೊಂದೆಡೆ ಹೈದರಾಬಾದ್‌ 4ನೇ ಸ್ಪರ್ಧೆಯಲ್ಲಿ 2ನೇ ಸೋಲನುಭವಿಸಿತು. ವಾರ್ನರ್‌ ಬಳಗದ ಎರಡೂ ಗೆಲುವು ತವರಿನ ಅಂಗಳದಲ್ಲೇ ಬಂದಿದ್ದು, ಹೈದರಾಬಾದ್‌ನಾಚೆ ಆಡಿದ ಎರಡೂ ಪಂದ್ಯಗಳಲ್ಲಿ ಎಡವಿತು. ಇನ್ನೊಂದು ಸೋಲು ಮುಂಬಯಿಯಲ್ಲಿ ಎದುರಾಗಿತ್ತು.

ಕೆಕೆಆರ್‌ ಶಿಸ್ತಿನ ಬೌಲಿಂಗ್‌
ಚೇಸಿಂಗ್‌ ವೇಳೆ ಹೈದರಾಬಾದ್‌ ಆರಂಭ ದಲ್ಲಷ್ಟೇ ಒಂದಿಷ್ಟು ಹೋರಾಟ ತೋರ್ಪಡಿಸಿತು. ವಾರ್ನರ್‌-ಧವನ್‌ 6.4 ಓವರ್‌ಗಳಿಂದ 46 ರನ್‌ ಪೇರಿಸಿದರು. ಆದರೆ ಕೋಲ್ಕತಾದ ಶಿಸ್ತಿನ ದಾಳಿ ಎನ್ನುವುದು ಇವರ ಬಿರುಸಿನ ಬ್ಯಾಟಿಂಗಿಗೆ ಅಡ್ಡಿಯಾಯಿತು. 10ನೇ ಓವರಿನಲ್ಲಿ ವಾರ್ನರ್‌ 2ನೇ ವಿಕೆಟ್‌ ರೂಪದಲ್ಲಿ ಔಟಾಗುವಾಗ ಹೈದರಾಬಾದ್‌ ಕೇವಲ 59 ರನ್‌ ಮಾಡಿತ್ತು. ವಾರ್ನರ್‌ 30 ಎಸೆತಗಳಿಂದ 26 ರನ್‌ ಮಾಡಿದರು (4 ಬೌಂಡರಿ)ಯುವರಾಜ್‌ ಸಿಂಗ್‌ ಗಳಿಕೆಯೂ 26 ರನ್‌. ಆದರೆ ಇದಕ್ಕಾಗಿ ಅವರು ಕೇವಲ 16 ಎಸೆತ ತೆಗೆದುಕೊಂಡರು. 2 ಬೌಂಡರಿ, 2 ಸಿಕ್ಸರ್‌ ಸಿಡಿಸಿದರು. 15ನೇ ಓವರಿನಲ್ಲಿ ಯುವರಾಜ್‌ ವಿಕೆಟ್‌ ಪತನವೇ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎನಿಸಿತು. ಅನಂತರ ಕೆಕೆಆರ್‌ ಬೌಲಿಂಗ್‌ ಇನ್ನಷ್ಟು ಹರಿತಗೊಂಡಿತು; ರನ್‌ ಗತಿ ಏರುತ್ತ ಹೋಯಿತು. ಇದನ್ನು ನಿಭಾಯಿಸಲು ಹೈದರಾಬಾದ್‌ಗೆ ಸಾಧ್ಯವಾಗಲಿಲ್ಲ.

ಉತ್ತಪ್ಪ-ಪಾಂಡೆ ಭರ್ಜರಿ ಬ್ಯಾಟಿಂಗ್‌
ಕೋಲ್ಕತಾ ನೈಟ್‌ರೈಡರ್ ಮತ್ತೆ ಸುನೀಲ್‌ ನಾರಾಯಣ್‌ ಅವರನ್ನು ಆರಂಭಿಕನನ್ನಾಗಿ ಇಳಿಸಿತಾದರೂ ಈ ಸಲ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ನಾರಾಯಣ್‌ ಕೇವಲ 6 ರನ್‌ ಮಾಡಿ ನಿರ್ಗಮಿಸಿದರು. ನಾಯಕ ಗೌತಮ್‌ ಗಂಭೀರ್‌ ಆಟ 15 ರನ್ನಿಗೆ ಮುಗಿಯಿತು. 6ನೇ ಓವರಿನಲ್ಲಿ 40 ರನ್ನಿಗೆ 2 ವಿಕೆಟ್‌ ಬಿತ್ತು. ಈ ಐಪಿಎಲ್‌ನ ಪವರ್‌ ಪ್ಲೇ ಅವಧಿಯಲ್ಲಿ ಕೆಕೆಆರ್‌ ಗಳಿಸಿದ ಕನಿಷ್ಠ ರನ್‌ ಇದಾಗಿದೆ.

Advertisement

ಈ ವೇಳೆ ಜತೆಗೂಡಿದ ಕರ್ನಾಟಕದ ಆಟ ಗಾರರಾದ ರಾಬಿನ್‌ ಉತ್ತಪ್ಪ ಮತ್ತು ಮನೀಷ್‌ ಪಾಂಡೆ ಹೈದರಾಬಾದ್‌ ಬೌಲಿಂಗ್‌ ಮೇಲೆ ಸವಾರಿ ಮಾಡಲಾರಂಭಿಸಿದರು. 8.4 ಓವರ್‌ ಜತೆಯಾಟ ನಡೆಸಿ ರನ್‌ಗತಿಯನ್ನು ಏರಿಸತೊಡಗಿದರು. ಇವರಲ್ಲಿ ಉತ್ತಪ್ಪ ಆಟ ಅತ್ಯಂತ ಬಿರುಸಿನಿಂದ ಕೂಡಿತ್ತು. 39 ಎಸೆತ ಎದುರಿಸಿದ ಅವರು 4 ಸಿಕ್ಸರ್‌, 5 ಬೌಂಡರಿ ನೆರವಿನಿಂದ 68 ರನ್‌ ಸೂರೆಗೈದರು. ಇದು ಕೋಲ್ಕತಾ ಸರದಿಯ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಹಾಗೆಯೇ ಇದು ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಪ್ಪ ಬಾರಿಸಿದ ಮೊದಲ ಆರ್ಧ ಶತಕವೂ ಆಗಿದೆ.

4 ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡ ಮನೀಷ್‌ ಪಾಂಡೆ ಗಳಿಕೆ 35 ಎಸೆತಗಳಿಂದ 46 ರನ್‌. ಬೀಸಿದ್ದು 3 ಬೌಂಡರಿ ಹಾಗೂ 2 ಸಿಕ್ಸರ್‌. ಯೂಸುಫ್ ಪಠಾಣ್‌ 15 ಎಸೆತಗಳಿಂದ 21 ರನ್‌ ಮಾಡಿ ಔಟಾಗದೆ ಉಳಿದರು (1 ಬೌಂಡರಿ, 1 ಸಿಕ್ಸರ್‌). ಸೂರ್ಯಕುಮಾರ್‌ ಯಾದವ್‌ (4) ಕ್ಲಿಕ್‌ ಆಗಲಿಲ್ಲ.

ಹೈದರಾಬಾದ್‌ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ಸೀಮರ್‌ ಭುವನೇಶ್ವರ್‌ ಕುಮಾರ್‌. ಕೇವಲ 20 ರನ್ನಿತ್ತ ಅವರು ನಾರಾಯಣ್‌, ಪಾಂಡೆ ಮತ್ತು ಗ್ರ್ಯಾಂಡ್‌ಹೋಮ್‌ ವಿಕೆಟ್‌ ಹಾರಿಸಿದರು. ಅಘ^ನ್‌ ಸ್ಪಿನ್ನರ್‌ ರಶೀದ್‌ ಖಾನ್‌ ಒಂದೇ ವಿಕೆಟ್‌ ಉರುಳಿಸಿದರೂ ಉತ್ತಮ ನಿಯಂತ್ರಣ ಸಾಧಿಸಿದರು. ನೆಹ್ರಾ ಮತ್ತು ಕಟಿಂಗ್‌ ಕೂಡ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್

ಸುನೀಲ್‌ ನಾರಾಯಣ್‌    ಬಿ ಭುವನೇಶ್ವರ್‌    6
ಗೌತಮ್‌ ಗಂಭೀರ್‌    ಬಿ ರಶೀದ್‌    15
ರಾಬಿನ್‌ ಉತ್ತಪ್ಪ    ಸಿ ರಶೀದ್‌ ಬಿ ಕಟಿಂಗ್‌    68
ಮನೀಷ್‌ ಪಾಂಡೆ    ಸಿ ವಾರ್ನರ್‌ ಬಿ ಭುವನೇಶ್ವರ್‌    46
ಯೂಸುಫ್ ಪಠಾಣ್‌    ಔಟಾಗದೆ    21
ಸೂರ್ಯಕುಮಾರ್‌ ಯಾದವ್‌    ಸಿ ಓಜಾ ಬಿ ನೆಹ್ರಾ    4
ಗ್ರ್ಯಾಂಡ್‌ಹೋಮ್‌    ಬಿ ಭುವನೇಶ್ವರ್‌    0
ಕ್ರಿಸ್‌ ವೋಕ್ಸ್‌    ಔಟಾಗದೆ    1
ಇತರ        11
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    172
ವಿಕೆಟ್‌ ಪತನ:
1-10, 2-40, 3-117, 4-153, 5-163, 6-170.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-20-3
ಆಶಿಷ್‌ ನೆಹ್ರಾ        4-0-35-1
ಬೆನ್‌ ಕಟಿಂಗ್‌        4-0-41-1
ರಶೀದ್‌ ಖಾನ್‌        4-0-29-1
ಮೊಸಸ್‌ ಹೆನ್ರಿಕ್ಸ್‌        2-0-26-0
ಬಿಪುಲ್‌ ಶರ್ಮ        2-0-20-0

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌    ಸಿ ವೋಕ್ಸ್‌ ಬಿ ಕುಲದೀಪ್‌    26
ಶಿಖರ್‌ ಧವನ್‌    ಸಿ ಗ್ರ್ಯಾಂಡ್‌ಹೋಮ್‌ ಬಿ ಪಠಾಣ್‌    23
ಮೊಸಸ್‌ ಹೆನ್ರಿಕ್ಸ್‌    ಸಿ ಮತ್ತು ಬಿ ವೋಕ್ಸ್‌    13
ಯುವರಾಜ್‌ ಸಿಂಗ್‌    ಸಿ ರಿಷಿ ಬಿ ವೋಕ್ಸ್‌    26
ದೀಪಕ್‌ ಹೂಡಾ    ಸ್ಟಂಪ್ಡ್ ಉತ್ತಪ್ಪ ಬಿ ನಾರಾಯಣ್‌    13
ಬೆನ್‌ ಕಟಿಂಗ್‌    ಸಿ ಗ್ರ್ಯಾಂಡ್‌ಹೋಮ್‌ ಬಿ ಬೌಲ್ಟ್    15
ನಮನ್‌ ಓಜಾ    ಔಟಾಗದೆ    11
ಬಿಪುಲ್‌ ಶರ್ಮ    ಔಟಾಗದೆ    21
ಇತರ        7
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    155
ವಿಕೆಟ್‌ ಪತನ:
1-46, 2-59, 3-65, 4-96, 5-112, 6-129.
ಬೌಲಿಂಗ್‌:
ಉಮೇಶ್‌ ಯಾದವ್‌        3-0-27-0
ಟ್ರೆಂಟ್‌ ಬೌಲ್ಟ್        4-0-33-1
ಸುನೀಲ್‌ ನಾರಾಯಣ್‌        4-0-18-1
ಕುಲದೀಪ್‌ ಯಾದವ್‌        4-0-23-1
ಯೂಸುಫ್ ಪಠಾಣ್‌        1-0-2-1
ಕ್ರಿಸ್‌ ವೋಕ್ಸ್‌        4-0-49-2

ಪಂದ್ಯಶ್ರೇಷ್ಠ: ರಾಬಿನ್‌ ಉತ್ತಪ್ಪ

Advertisement

Udayavani is now on Telegram. Click here to join our channel and stay updated with the latest news.

Next