Advertisement

West Bengal; ಅತ್ಯಾಚಾರಕ್ಕೆ ಗಲ್ಲೇ ಶಿಕ್ಷೆ: ಹೊಸ ಮಸೂದೆ

12:36 AM Sep 01, 2024 | Team Udayavani |

ಕೋಲ್ಕತಾ: ಕೋಲ್ಕತಾದ ವೈದ್ಯ ಕಾಲೇಜಲ್ಲಿ ಟ್ರೈನಿ ವೈದ್ಯೆ ಮೇಲೆ ರೇಪ್‌ ಮತ್ತು ಹತ್ಯೆ ಪ್ರಕರಣ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಪಶ್ಚಿಮ ಬಂಗಾಲ ಸರಕಾರವು ಸೋಮವಾರದಿಂದ 2 ದಿನಗಳ ವಿಶೇಷ ಅಧಿವೇಶನ ಕರೆದಿದೆ. ಸಿಎಂ ಮಮತಾ ಘೋಷಿಸಿರುವಂತೆ, ಕಠಿನ ಅತ್ಯಾಚಾರ ನಿಗ್ರಹ ಕಾನೂನನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

Advertisement

ಮಸೂದೆಯ ಅನ್ವಯ, ಇಂಥ ಪ್ರಕರಣಗಳ ವಿಚಾರಣೆಗೆ ಕಾಲಮಿತಿ ನಿಗದಿಪಡಿಸಲಾಗುತ್ತದೆ. ತಪ್ಪಿತಸ್ಥರಿಂದ ಪಡೆಯುವ ದಂಡದ ಮೊತ್ತವನ್ನೂ ಹೆಚ್ಚಿಸ­ಲಾಗುತ್ತದೆ. ಒಂದು ವೇಳೆ, ಅದು ಅತ್ಯಾಚಾರ-ಕೊಲೆ ಪ್ರಕರಣವಾಗಿದ್ದರೆ, ತಪ್ಪಿತಸ್ಥರಿಗೆ ಮರಣದಂಡನೆಯೇ ಏಕೈಕ ಶಿಕ್ಷೆಯಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಮಸೂದೆಯಲ್ಲಿ ಏನಿದೆ?
ಎಲ್ಲ ಅತ್ಯಾಚಾರಕ್ಕೂ ಜೀವಾವಧಿ/ ಗಲ್ಲುಶಿಕ್ಷೆ
ಸಂತ್ರಸ್ತೆಯ ವಯಸ್ಸು ಎಷ್ಟೇ ಆಗಿದ್ದರೂ ಇದೇ ಶಿಕ್ಷೆ
ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಕಾಲಮಿತಿ
ಅಪರಾಧಿಗಳಿಂದ ಪಡೆಯುವ ದಂಡ ಹೆಚ್ಚಳ
ಅತ್ಯಾಚಾರ-ಕೊಲೆ ಆಗಿದ್ದರೆ ಮರಣದಂಡನೆ ಏಕೈಕ ಶಿಕ್ಷೆ
ಜತೆಗೆ, ಅಪರಾಧಿಗೆ ಭಾರೀ ಪ್ರಮಾಣದ ದಂಡ

Advertisement

Udayavani is now on Telegram. Click here to join our channel and stay updated with the latest news.