Advertisement
ವೈದ್ಯೆಯ ಕೊಲೆ ನಡೆಸುವ ಮುಂಚೆ ಸಂಜಯ್ ತನ್ನ ಸ್ನೇಹಿತನ ಜತೆಗೂಡಿ ಕೋಲ್ಕತಾದ 2 ರೆಡ್‌ಲೈಟ್ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆದರೆ ಸೆಕ್ಸ್ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರೆ 5 ಆರೋಪಿಗಳ ಮೇಲೆ 2ನೇ ಹಂತದ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ತನಿಖೆ ಯಲ್ಲಿ ಘೋಷ್ ಅಸಮಂಜಸ ಉತ್ತರಗಳನ್ನು ನೀಡುತ್ತಿ ರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೂಂದು ಸುತ್ತಿನ ಸುಳ್ಳು ಪತ್ತೆ ಪರೀಕ್ಷೆ ನಡೆಸು ತ್ತಿದ್ದಾರೆ. ಅತ್ಯಾಚಾರದ ತನಿಖೆಯೊಂದಿಗೆ ಆಸ್ಪತ್ರೆ ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಕೂಡ ತನಿಖೆ ನಡೆಸುತ್ತಿದೆ.
Related Articles
ಪಶ್ಚಿಮ ಬಂಗಾಲದಲ್ಲಿ ಅತ್ಯಾಚಾರ ಸೇರಿ ಮಹಿಳೆಯರ ವಿರುದ್ಧದ ಪ್ರಕರಣಗಳ ತನಿಖೆಗೆ ತ್ವರಿತ ಗತಿ ಕೋರ್ಟ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡ ಲಾಗಿ ದ್ದರೂ, ಏಕೆ ಆರಂಭಿ ಸ ಲಾಗಿಲ್ಲ ಎಂದು ಕೇಂದ್ರ ಸರಕಾರ ಪ್ರಶ್ನಿಸಿದೆ. ಟ್ರೈನಿ ವೈದ್ಯೆ ಮೇಲೆ ಅತ್ಯಾ ಚಾರ, ರೇಪ್ ನಡೆದಿದ್ದ ಪ್ರಕರಣ ಖಂಡಿಸಿ ಕಠಿನ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿಗೆ ಉತ್ತರಿಸಿದ ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಮಹಿಳೆಯರ ಸಹಾಯವಾಣಿ ಆರಂಭಿಸುವಂತೆ ಸೂಚಿಸಲಾಗಿತ್ತು. ಅದು ಇನ್ನೂ ಶುರುವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement