Advertisement

ವಿಜಯ್‌ ಮಲ್ಯ ಗಡೀಪಾರಿಗೆ ಲಂಡನ್‌ನಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದ ಇಡಿ

04:17 PM Jul 19, 2017 | Team Udayavani |

ಹೊಸದಿಲ್ಲಿ : ಎಂಟು ಸಾವಿರ ಕೋಟಿ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಕ್ರಮದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸುವುದಕ್ಕಾಗಿ ಪ್ರಕೃತ ಜಾರಿ ನಿರ್ದೇಶನಾಲಯದ ತಂಡವೊಂದು ಈಗ ಲಂಡನ್‌ನಲ್ಲಿದೆ ಎಂದು ಹಿರಿಯ ಅಧಿಕಾರಿ ಇಂದು ಬುಧವಾರ ಹೇಳಿದ್ದಾರೆ. 

Advertisement

ಮೊನ್ನೆ ಸೋಮವಾರ ಕಾನೂನು ಸಲಹೆಗಾರ ಸೇರಿದ ಇಬ್ಬರು ಸದಸ್ಯರ ತಂಡವು ಲಂಡನ್‌ಗೆ ಎರಡು ದಿನಗಳ ಭೇಟಿಗಾಗಿ ಪ್ರಯಾಣಿಸಿದ್ದು ಇದೇ ಗುರುವಾರ ದೇಶಕ್ಕೆ ಮರಳಲಿದೆ ಎಂದು ಇಡಿ ಅಧಿಕಾರಿ ಹೇಳಿದ್ದಾರೆ. 

ವಿಜಯ್‌ ಮಲ್ಯ ವಿರುದ್ಧ ಸಿದ್ಧಪಡಿಸಲಾಗಿರುವ 5,500 ಪುಟಗಳ ಸುದೀರ್ಘ‌ ಚಾರ್ಜ್‌ ಶೀಟನ್ನು ಲಂಡನ್‌ನ ಕ್ರೌನ್‌ ಪ್ರಾಸಿಕ್ಯೂಶನ್‌ ಕಚೇರಿಯಲ್ಲಿ ಸಲ್ಲಿಸಲು ದ್ವಿಸದಸ್ಯ ಇಡಿ ತಂಡ ಈಗ ಲಂಡನ್‌ನಲ್ಲಿದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next