Advertisement

1.16 ಕೋಟಿಯ ಕಾರ್ತಿ ಆಸ್ತಿ ಜಪ್ತಿ

06:50 AM Sep 26, 2017 | Team Udayavani |

ಹೊಸದಿಲ್ಲಿ: ಏರ್‌ಸೆಲ್‌-ಮ್ಯಾಕ್ಸಿಸ್‌ ಡೀಲ್‌ ಹಣಕಾಸು ಅಕ್ರಮ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ 1.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ಮುಟ್ಟುಗೋಲು ಹಾಕಿಕೊಂಡಿದೆ.

Advertisement

ಕಾರ್ತಿ ಅವರಿಗೆ ನಂಟಿರುವ ಸಂಸ್ಥೆಯ 26 ಲಕ್ಷ ರೂ. ನಿಗದಿತ ಠೇವಣಿ ಹಾಗೂ ಕಾರ್ತಿ ಅವರ ಉಳಿತಾಯ ಖಾತೆಯಲ್ಲಿರುವ ಮೊತ್ತ ಮತ್ತು ನಿಗದಿತ ಠೇವಣಿಯಲ್ಲಿರುವ 90 ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಚಿದಂಬರಂ, “ನನ್ನ ಪುತ್ರನ ವಿರುದ್ಧದ ಕ್ರಮವು ಸುಳ್ಳುಗಳು ಹಾಗೂ ಊಹೆಗಳ ಮಿಶ್ರಣ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next