Advertisement

Liquor Policy Case:ಕೇಜ್ರಿವಾಲ್‌ ಬಳಿಕ ಇ.ಡಿಯಿಂದ AAP ಸಚಿವ ಕೈಲಾಶ್‌ ಗೆಹ್ಲೋಟ್‌ ವಿಚಾರಣೆ

04:23 PM Mar 30, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹ್ಲೋಟ್‌ ಶನಿವಾರ (ಮಾರ್ಚ್‌ 30) ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿದ್ದು, ಅಧಿಕಾರಿಗಳು ಈ ಸಂದರ್ಭದಲ್ಲಿ ವಿಚಾರಣೆಗೊಳಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Gadag; ಎಲೆಕ್ಟ್ರೋಲ್ ಬಾಂಡ್ ವಿಷಯವಾಗಿ ಮೋದಿ ಶ್ವೇತ ಪತ್ರ ಹೊರಡಿಸಲಿ: ಎಚ್.ಕೆ ಪಾಟೀಲ

ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್‌ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಅಬಕಾರಿ ನೀತಿ ಸಿದ್ಧಪಡಿಸುವ ಸಂದರ್ಭದಲ್ಲಿ ಗೆಹ್ಲೋಟ್‌ ಅವರು ತಮ್ಮ ಅಧಿಕೃತ ನಿವಾಸವನ್ನು ಬಳಸಲು ಆಪ್‌ ನ ಸಂವಹನ ಉಸ್ತುವಾರಿ ವಿಜಯ್‌ ನಾಯರ್‌ ಅವರಿಗೆ ಅನುಮತಿ ನೀಡಿರುವುದಾಗಿ ತನಿಖಾ ಸಂಸ್ಥೆ ಆರೋಪಿಸಿದೆ.

ಅಲ್ಲದೇ ಗೆಹ್ಲೋಟ್‌ ಅವರು ಪದೇ, ಪದೇ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈ ಮೊದಲು ದೂರಿದ್ದರು. ಸಿಎಂ ಕೇಜ್ರಿವಾಲ್‌ ಏಪ್ರಿಲ್‌ 1ರವರೆಗೆ ಇ.ಡಿ. ಕಸ್ಟಡಿಯಲ್ಲಿರಲಿದ್ದಾರೆ.

Advertisement

ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್‌ ಸೇರಿದಂತೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್‌, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರನ್ನು ಕೂಡಾ ಜಾರಿ ನಿರ್ದೇಶನಾಲಯ ಈ ಮೊದಲು ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next