Advertisement

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ 17 ಕೋಟಿ ರೂ. ಆಸ್ತಿ ಜಪ್ತಿ

10:26 PM Feb 16, 2021 | Team Udayavani |

ನವದೆಹಲಿ: ಸರ್ಕಾರೇತರ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ 17.66 ಕೋಟಿ ರೂ. ಮೊತ್ತದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಜಪ್ತಿ ಮಾಡಿದೆ.

Advertisement

ಭಾರತದಲ್ಲಿ ತನ್ನ ಚಟುವಟಿಕೆಯನ್ನು ನಿಲ್ಲಿಸಿರುವುದಾಗಿ ಅಮ್ನೆಸ್ಟಿ ಸಂಸ್ಥೆ ಕೆಲ ತಿಂಗಳುಗಳ ಹಿಂದೆ ಪ್ರಕಟಿಸಿತ್ತು. ಜಪ್ತಿ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಅಮ್ನೆಸ್ಟಿ ಸಂಸ್ಥೆಯು ಕಾನೂನು ಬಾಹಿರವಾಗಿ ವಿದೇಶಿ ದೇಣಿಗೆಯನ್ನು ಸಂಗ್ರಹಿಸಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಸಂಸ್ಥೆಯನ್ನು ನೋಂದಾಯಿಸದೇ ದೇಣಿಗೆಗಳನ್ನು ಪಡೆಯುವ ಮೂಲಕ ನಿಯಮಗಳ ಉಲ್ಲಂಘನೆ ಮಾಡಿದೆ ಎಂದಿದೆ.

ಇದನ್ನೂ ಓದಿ:ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ತೆರವು

Advertisement

Udayavani is now on Telegram. Click here to join our channel and stay updated with the latest news.

Next