Advertisement

Copa America ಫುಟ್‌ಬಾಲ್‌ ಕ್ವಾರ್ಟರ್‌ ಫೈನಲ್‌ಗೆ ಈಕ್ವಡಾರ್‌

12:32 AM Jul 02, 2024 | Team Udayavani |

ಗ್ಲೆಂಡೇಲ್‌ (ಅರಿಜೋನಾ): ಮೆಕ್ಸಿಕೊ ವಿರುದ್ಧ ಗೋಲಿಲ್ಲದ ಡ್ರಾ ಸಾಧಿಸುವ ಮೂಲಕ ಈಕ್ವಡಾರ್‌ ಕೊಪಾ ಅಮೆರಿಕ ಫುಟ್‌ಬಾಲ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇಲ್ಲಿ ಹಾಲಿ ಚಾಂಪಿಯನ್‌ ಆರ್ಜೆಂಟೀನಾದ ಸವಾಲು ಎದುರಾಗಿದೆ.

Advertisement

“ಬಿ’ ವಿಭಾಗದಲ್ಲಿದ್ದ ಈಕ್ವಡಾರ್‌ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. 3 ಪಂದ್ಯಗಳಲ್ಲಿ ಒಂದನ್ನು ಗೆದ್ದು, ಒಂದನ್ನು ಸೋತು, ಇನ್ನೊಂದನ್ನು ಡ್ರಾ ಮಾಡಿಕೊಂಡಿತು. ಮೆಕ್ಸಿಕೊ ಕೂಡ 4 ಅಂಕ ಸಂಪಾದಿಸಿತಾದರೂ ಗೋಲು ಗಳಿಕೆಯಲ್ಲಿ ಅದು ಈಕ್ವಡಾರ್‌ಗಿಂತ ಹಿಂದುಳಿಯಿತು.

ಎಲ್ಲ 3 ಪಂದ್ಯಗಳನ್ನು ಗೆದ್ದು 9 ಅಂಕ ಸಂಪಾದಿಸಿದ ವೆನಿಜುವೆಲಾ “ಬಿ’ ವಿಭಾಗದ ಅಗ್ರಸ್ಥಾನಿಯಾಯಿತು. ಟೆಕ್ಸಾಸ್‌ನಲ್ಲಿ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ವೆನಿಜುವೆಲಾ 3-0 ಅಂತರದಿಂದ ಜಮೈಕಾವನ್ನು ಕೆಡವಿತು. ವೆನಿಜುವೆಲಾದ ಕ್ವಾರ್ಟರ್‌ ಫೈನಲ್‌ ಎದುರಾಳಿ ಕೆನಡಾ.

ವೆನಿಜುವೆಲಾ ಪರ ಎಡ್ವರ್ಡ್‌ ಬೆಲ್ಲೊ, ಸಾಲೋಮನ್‌ ರಾಂಡನ್‌ ಮತ್ತು ಎರಿಕ್‌ ರಮಿರೆಝ್ ಗೋಲು ಹೊಡೆದರು. ಈಕ್ವಡಾರ್‌ ಮತ್ತು ಮೆಕ್ಸಿಕೊ ವಿರುದ್ಧ ಗೆದ್ದಾಗಲೇ ವೆನಿಜುವೆಲಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next