Advertisement

Team India ಫುಟ್‌ಬಾಲ್‌ ಕೋಚ್‌ ಸ್ಟಿಮ್ಯಾಕ್‌ಗೆ ಗೇಟ್‌ಪಾಸ್‌

11:41 PM Jun 17, 2024 | Team Udayavani |

ಹೊಸದಿಲ್ಲಿ: ಭಾರತೀಯ ಪುರುಷರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಐಗರ್‌ ಸ್ಟಿಮ್ಯಾಕ್‌ ಅವರನ್ನು ಅಖೀಲ ಭಾರತ ಫುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್) ಈ ಸ್ಥಾನದಿಂದ ಕೆಳಗಿಳಿಸಿದೆ. ಕಳೆದ ಸೋಮವಾರ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಕತಾರ್‌ ವಿರುದ್ಧ ಭಾರತ 2-1 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

Advertisement

ಸ್ಟಿಮ್ಯಾಕ್‌ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯಗಳಲ್ಲಿ ನಮ್ಮವರ ಪ್ರದರ್ಶನ ಭಾರತೀಯ ಫುಟ್‌ಬಾಲ್‌ ಫೆಡರೇಶನ್‌ಗೆ ತೃಪ್ತಿ ನೀಡಿಲ್ಲ. ಈ ಕಾರಣಕ್ಕೆ ಕ್ರೊವೇಶಿಯಾದ ಮಾಜಿ ಫುಟ್ಬಾಲಿಗನನ್ನು ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next