Advertisement

Super-8; ಜೋರ್ಡನ್‌ ಹ್ಯಾಟ್ರಿಕ್‌: ಸೆಮಿಫೈನಲ್‌ಗೆ ಇಂಗ್ಲೆಂಡ್‌

12:01 AM Jun 24, 2024 | Team Udayavani |

ಬ್ರಿಜ್‌ಟೌನ್‌: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 3ನೇ ಹ್ಯಾಟ್ರಿಕ್‌ ದಾಖಲಾಗಿದೆ. ಪ್ಯಾಟ್‌ ಕಮಿನ್ಸ್‌ ಅವರ ಸತತ 2 ಹ್ಯಾಟ್ರಿಕ್‌ ಸಾಧನೆಯ ಬಳಿಕ ಇಂಗ್ಲೆಂಡ್‌ನ‌ ಪೇಸ್‌ ಬೌಲರ್‌ ಕ್ರಿಸ್‌ ಜೋರ್ಡನ್‌ ಈ ಯಾದಿಯನ್ನು ಅಲಂ ಕರಿಸಿದ್ದಾರೆ. ಅಮೆರಿಕ ವಿರುದ್ಧದ ರವಿವಾರದ ಸೂಪರ್‌-8 ಮುಖಾಮುಖಿಯಲ್ಲಿ ಜೋರ್ಡನ್‌ 5 ಎಸೆತಗಳಲ್ಲಿ 4 ವಿಕೆಟ್‌ ಉಡಾಯಿಸಿ ಮೆರೆದರು. ಇಂಗ್ಲೆಂಡ್‌ 10 ವಿಕೆಟ್‌ ಜಯದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು.

Advertisement

ಜೋರ್ಡನ್‌ 19ನೇ ಓವರ್‌ನ ಮೊದಲ ಎಸೆತದಲ್ಲಿ ಕೋರಿ ಆ್ಯಂಡರ್ಸನ್‌ ವಿಕೆಟ್‌ ಉಡಾಯಿಸಿದ ಬಳಿಕ 3ನೇ, 4ನೇ ಹಾಗೂ 5ನೇ ಎಸೆತಗಳಲ್ಲಿ ಅಲಿ ಖಾನ್‌, ನೋಸ್ತುಶ್‌ ಕೆಂಜಿಗೆ ಮತ್ತು ಸೌರಭ್‌ ನೇತ್ರಾವಲ್ಕರ್‌ ಅವರನ್ನು ಔಟ್‌ ಮಾಡಿದರು. ಜೋರ್ಡನ್‌ ಸಾಧನೆ 10 ರನ್ನಿಗೆ 4 ವಿಕೆಟ್‌.

ಅಮೆರಿಕ 18.5 ಓವರ್‌ಗಳಲ್ಲಿ 115ಕ್ಕೆ ಕುಸಿದರೆ, ಇಂಗ್ಲೆಂಡ್‌ 9.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 117 ರನ್‌ ಬಾರಿಸಿತು. ಬಟ್ಲರ್‌ 83, ಸಾಲ್ಟ್ 25 ರನ್‌ ಮಾಡಿ ಅಜೇಯರಾಗಿ ಉಳಿದರು. ಹರ್ಮೀತ್‌ ಸಿಂಗ್‌ ಅವರ ಒಂದೇ ಓವರ್‌ನಲ್ಲಿ ಬಟ್ಲರ್‌ ಸತತ 5 ಸಿಕ್ಸರ್‌ ಬಾರಿಸಿ ಅಬ್ಬರಿಸಿದರು.

ವಿಂಡೀಸ್‌ಗೆ ಮಹತ್ವದ ಪಂದ್ಯ

ನಾರ್ತ್‌ ಸೌಂಡ್‌: ಟಿ20 ವಿಶ್ವಕಪ್‌ ಸೂಪರ್‌-8 ಗ್ರೂಪ್‌-2ರ ಅಂಕಪಟ್ಟಿಯ ಅಗ್ರಸ್ಥಾನಿ ದಕ್ಷಿಣ ಆಫ್ರಿಕಾ ತಂಡ, ಸೋಮವಾರ ವೆಸ್ಟ್‌ ಇಂಡೀಸ್‌ ಸವಾಲು ಎದುರಿಸಲಿದೆ. ಸೆಮಿಫೈನಲ್‌ ಪ್ರವೇಶದ ನಿಟ್ಟಿನಲ್ಲಿ ವೆಸ್ಟ್‌ ಇಂಡೀಸ್‌ಗೆ ಇದು ಮಹತ್ವದ ಪಂದ್ಯವಾಗಿದೆ.

Advertisement

ಗ್ರೂಪ್‌-2ರಲ್ಲಿ ಎರಡೂ ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಫೈನಲ್‌ ಸನಿಹದಲ್ಲಿದೆ. ಆದರೆ ಎರಡರಲ್ಲಿ ಒಂದು ಪಂದ್ಯ ಗೆದ್ದು 2 ಅಂಕ ಗಳಿಸಿರುವ ವಿಂಡೀಸ್‌ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ವಿರುದ್ಧ 7 ರನ್‌ಗಳ ರೋಚಕ ಜಯ ಗಳಿಸಿ ಓಟ ಮುಂದುವರಿಸಿತ್ತು. ವೆಸ್ಟ್‌ ಇಂಡೀಸ್‌ ದುರ್ಬಲ ಅಮೆರಿಕ ವಿರುದ್ಧ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ತಂಡಗಳೂ ತಲಾ 11 ಬಾರಿ ಗೆದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next