Advertisement

ವಾಡಿ-ಇಂಗಳಗಿ ರಸ್ತೆ ಅಭಿವೃದ್ಧಿಗೆ ಗ್ರಹಣ

11:37 AM Feb 10, 2022 | Team Udayavani |

ವಾಡಿ: ವಾಡಿ-ಇಂಗಳಗಿ ರಸ್ತೆ ಸಂಪೂರ್ಣ ಹದಗೆಟ್ಟು ದಶಕಗಳೇ ಉರುಳಿದರೂ ಕಾಯ ಕಲ್ಪದ ಭಾಗ್ಯ ಕೂಡಿಬಂದಿಲ್ಲ. ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮವು ವಾಡಿ ನಗರ ಕೇಂದ್ರದಿಂದ ಕೇವಲ ಆರು ಕಿ.ಮೀ ಅಂತರದಲ್ಲಿದೆ.

Advertisement

80ರ ದಶಕದಲ್ಲಿ ಗ್ರಾಮಕ್ಕೆ ಸಿಮೆಂಟ್‌ ರಸ್ತೆ ನಿರ್ಮಿಸಿಕೊಡಲಾಗಿತ್ತು. ಅದೀಗ ಬಿರುಕುಬಿಟ್ಟು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಪ್ರತಿವರ್ಷ ರಸ್ತೆ ಬಿರುಕಿಗೆ ಡಾಂಬರ್‌ ತೇಪೆ ಹಚ್ಚಲಾಗುತ್ತಿದೆ.

ಇಂಗಳಗಿ ಗ್ರಾಮಸ್ಥರು ವಾಡಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದು, ಪ್ರತಿನಿತ್ಯ ನೂರಾರು ಮಂದಿ ಖಾಸಗಿ ವಾಹನಗಳಲ್ಲಿ ಬಂದು ಹೋಗುತ್ತಾರೆ. ರಸ್ತೆ ದುಸ್ಥಿತಿ ಕಾರಣ ಬೈಕ್‌, ಆಟೋ, ಕಾರು, ಜೀಪುಗಳ ಚಾಲಕರು ತತ್ತರಿಸಿದ್ದಾರೆ.

ಇನ್ನು ಕಲ್ಲು ಪಾಲಿಶ್‌ ಘಟಕಗಳೂ ರಸ್ತೆ ಬದಿಯಲ್ಲೇ ಇರುವುದರಿಂದ ಕೊಳೆ ನೀರು ರಸ್ತೆಗೆ ಬಿಡಲಾಗುತ್ತಿದೆ. ಜತೆಗೆ ಭಾರವಾದ ವಾಹನಗಳ ಸಂಚಾರವೂ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ. ಸಂಬಂಧಪಟ್ಟವರು ರಸ್ತೆ ಮರುನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಂಗಳಗಿ ಗ್ರಾ.ಪಂ. ಸದಸ್ಯ ಗೌಸ್‌ ದುದ್ದನಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next