ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಭೂಕಂಪ ಸಂಭವಿಸಿದೆ. 12:45 ರ ಸುಮಾರಿಗೆ ಸಂಭವಿಸಿದ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.5ರಷ್ಟು ದಾಖಲಾಗಿದೆ.
ಇಲ್ಲಿಯವರೆಗೆ, ಯಾವುದೇ ಸಾವುನೋವುಗಳು ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.
ಗುರುವಾರ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ 2.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಹಿಂದೆ 2022ರ ಡಿಸೆಂಬರ್ ನಲ್ಲಿ ಉತ್ತರಕಾಶಿಯಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಇದನ್ನೂ ಓದಿ:ಮೋದಿ ಬಗ್ಗೆ ಮಾತನಾಡಿದವರ ಮೇಲೆ ದಾಳಿಯಾಗುತ್ತಿದೆ; ಲಂಡನ್ ನಲ್ಲಿ ರಾಹುಲ್ ಗಾಂಧಿ ಹೇಳಿಕೆ
ಉತ್ತರಕಾಶಿಯು ಕುಸಿಯುತ್ತಿರುವ ಪಟ್ಟಣ ಜೋಶಿಮಠದಿಂದ ಸುಮಾರು 290 ಕಿಲೋ ಮೀಟರ್ ದೂರದಲ್ಲಿದೆ.