Advertisement

ವಿಜಯಪುರ ಜಿಲ್ಲೆಯಲ್ಲಿ ಭೂಕಂಪದ ಅನುಭವ, ಮನೆ ಬಿಟ್ಟು ಹೊರಗೆ ಓಡಿ ಬಂದ ಜನ

09:21 AM Jun 13, 2021 | Team Udayavani |

ವಿಜಯಪುರ: ಜಿಲ್ಲೆಯ ಭಾನುವಾರ ನಸುಕಿನಲ್ಲಿ 2-25 ರಿಂದ 2-30  ರ ಅವಧಿಯಲ್ಲಿ ಹಲವು ಕಡೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರಿಂದಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದು ಜಾಗರಣೆ ಮಾಡಿದ ಘಟನೆ ನಡೆದಿದೆ.

Advertisement

ವಿಜಯಪುರ ನಗರದ ಗ್ಯಾಂಗ್ ಬಾವಡಿ ಪ್ರದೇಶದಲ್ಲಿ ನಸುಕಿನ 2-29 ಕ್ಕೆ, ಲೋಹಗಾಂವ್ ಗ್ರಾಮದಲ್ಲಿ ಬೆಳಿಗ್ಗೆ 2-27 ರ, ಅರಕೇರಿ, ಕಳ್ಳಕವಟಗಿ ಸೇರಿದಂತೆ ವಿಜಯಪುರ ಗ್ರಾಮೀಣ, ತಿಕೋಟ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಭೂಕಂಪದ ಅನುಭವ ಆಗಿದೆ.

ಜನರು ಗಾಢ ನಿದ್ದೆಯಲ್ಲಿ ಇದ್ದಾಗ ನಸುಕಿನಲ್ಲಿ ಜರುಗಿದ ಭೂಕಂಪದ ಅನುಭವ ಆಗುತ್ತಲೇ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.  ವಿದ್ಯಾವಂತರು ಭೂಕಂಪದ ಅನುಭವ ಆಗುತ್ತಲೇ ಖಚಿತ ಪಡಿಸಿಕೊಳ್ಳಲು ತಮ್ಮ ಮೊಬೈಲ್ ಮೂಲಕ ಗೂಗಲ್ ಸರ್ಚ್ ಮಾಡಿದ್ದಾರೆ.

ಇದನ್ನೂ ಓದಿ:ಎಲೆಕ್ಟ್ರಿಕ್ ಸ್ಕೂಟರ್ ಪ್ರಿಯರಿಗೆ ಸಿಹಿಸುದ್ದಿ: ಸಬ್ಸಿಡಿ ಹೆಚ್ಚಳ,ವಾಹನದ ದರ ಇಳಿಕೆ ಸಾಧ್ಯತೆ

ಮತ್ತೆ ಕೆಲವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪದ ಅನುಭವ ಆಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ನಗರದ ಗ್ಯಾಂಗ್ ಬಾವಡಿ ನಿವಾಸಿ ಅರಕೇರಿ ಶಾಲೆ ಶಿಕ್ಷಕ ನಿಂಗಣ್ಣ ಅರವತ್ತು, ಲೋಹಗಾಂವ ವಸ್ತಿ ಪ್ರದೇಶದ ಸಂತೋಷ ಬಗಲಿ, ಕಳ್ಳಕವಟಗಿ ವಸ್ತಿ ಪ್ರದೇಶದ ನಿವಾಸಿ ಪರಮೇಶ ಗದ್ಯಾಳ ಹೀಗೆ ಹಲವರು ನಸುಕಿನಲ್ಲಿ 3-4 ಬಾರಿ ಭೂಮಿಯ ಆಳದಿಂದ ಭಾರಿ ಸದ್ದಿನ ಮೂಲಕ ಭೂಕಂಪನ ಅನುಭವ ಆಗಿದ್ದನ್ನು ಉದಯವಾಣಿ ಪತ್ರಿಕೆಗೆ ಖಚಿತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next