ನವದೆಹಲಿ: ದೆಹಲಿಯ ಎನ್ ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ (ಜನವರಿ 11) ಭೂಕಂಪನ ಸಂಭವವಿಸಿದ್ದು, ಜನರು ಭಯದಿಂದ ಹೊರ ಓಡಿಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಕಾಫಿ, ಕಾಳುಮೆಣಸು ಖರೀದಿ ಸಂದರ್ಭ ಮಾಹಿತಿ ಸಂಗ್ರಹ ಅಗತ್ಯ: ತಪ್ಪಿದಲ್ಲಿ ಜೈಲು ಶಿಕ್ಷೆ
ಭೂ ಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿದ್ದು, ಭೂಕಂಪದ ಕೇಂದ್ರ ಸ್ಥಾನ ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶ ಎಂದು ಗುರುತಿಸಲಾಗಿದೆ. ಉತ್ತರ ಭಾರತ ಹಾಗೂ ನೆರೆಯ ಪಾಕಿಸ್ತಾನದಾದ್ಯಂತ ಭೂಕಂಪನದಿಂದ ಜನರು ಬೆಚ್ಚಿಬಿದ್ದಿರುವುದಾಗಿ ವರದಿ ವಿವರಿಸಿದೆ.
ಇಂದು ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ನೋಯ್ಡಾ, ಘಾಜಿಯಾಬಾದ್ ಮತ್ತು ಗುರ್ಗಾಂವ್ ನಲ್ಲಿ ಪರಿಣಾಮ ಹೆಚ್ಚಿದ್ದು, ಜನರು ಮನೆ ಮತ್ತು ಕಚೇರಿಯಿಂದ ಹೊರಗೆ ಓಡಿಬಂದಿರುವುದಾಗಿ ವರದಿ ವಿವರಿಸಿದೆ.
ಭೂಗರ್ಭ ಶಾಸ್ತ್ರ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ತುರ್ತು ಅಗತ್ಯ ಸೇವೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.