ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಬಳಿಯ ಒಂದು ಪ್ರದೇಶ ಸೀಲಾಂಪುರ. ಇಲ್ಲಿಗೆ ಸಮೀಪದಲ್ಲಿ ಇರುವ ಬಯಲು ಪ್ರದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ತ್ಯಾಜ್ಯಗಳ ತಾಣ. ಇದು ಜಗತ್ತಿನ ಅತಿ ದೊಡ್ಡ ಇ-ವೇಸ್ಟೇಜ್‌ನ ಇ-ಮಾರುಕಟ್ಟೆಯೂ ಹೌದು. ಇಲ್ಲಿ ದಿನೇ ದಿನೇ ಬಂದು ಬೀಳುತ್ತಿರುವ ಇ-ತ್ಯಾಜ್ಯ, ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ವಿಶ್ವಸಂಸ್ಥೆ ಕೂಡ ತನ್ನ ವರದಿಯೊಂದರಲ್ಲಿ ಆತಂಕ ವ್ಯಕ್ತಪಡಿಸಿದೆ.
ಇ-ವೇಸ್ಟ್‌ಅಂದರೆ ಏನು?
ಕೆಟ್ಟು ಹೋಗಿರುವ ಹಳೆಯ ಕಂಪ್ಯೂಟರ್ ಮಾನಿಟರ್ಗಳು, ಕೀ ಬೋರ್ಡ್ ಗಳು, ಡೆಸ್ಕ್ಟಾಪ್ ಕಂಪ್ಯೂಟರ್‌ಗಳು, ಒಡೆದು ಹೋದ ಲ್ಯಾಂಡ್‌ಲೈನ್ ಫೋನುಗಳು, ಮೊಬೈಲ್ ಹ್ಯಾಂಡ್ಸೆಟ್ಗಳು, ಟಿವಿಗಳು, ಸ್ಟೆಬಿಲೈಸರ್‌ಗಳು, ಏರ್ ಕಂಡೀಶನ್ಗಳು, ರೆಫ್ರಿಜರೇಟರ್ಗಳು, ವೈರ್‌ಗಳು, ಮೈಕ್ರೋವೇವ್ಗಳು, ವ್ಯಾಕ್ಯೂಮ್ ಕ್ಲೀನರ್ಸ್, ವಾಷಿಂಗ್ ಮೆಷೀನ್. ಇಂಥ ವೇಸ್ಟೇಜುಗಳೇ ಬೆಟ್ಟಗಳಂತೆ ರಾಶಿರಾಶಿಯಾಗಿ ಬಿದ್ದಿವೆ.
ಇಡೀ ವಿಶ್ವದಲ್ಲಿ ವರ್ಷಕ್ಕೆ 53.6 ಮಿಲಿಯನ್ ಟನ್‌ನಷ್ಟು ಇ-ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ಇದರಲ್ಲಿ ಶೇ. 17.4ರಷ್ಟು ಇ-ತ್ಯಾಜ್ಯ ಮಾತ್ರ ಮರುಬಳಕೆಗೆ (ರೀ-ಸೈಕಲ್‌ಗೆ) ಉಪಯೋಗಿಸಲ್ಪಡುತ್ತದೆ. ಈಗ, ಲಾಕ್‌ಡೌನ್‌ನ ಪರಿಣಾಮವಾಗಿ ಈ ಇ-ವೇಸ್ಟೇಜ್ ಪ್ರಮಾಣ ಗಣನೀ¿ುವಾಗಿ ಹೆಚ್ಚಿದೆ. ಅಮೆರಿಕ, ಚೀನದಂಥ ಕೆಲವು ರಾಷ್ಟ್ರಗಳಲ್ಲಿ ಇ-ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆಯಿದೆ. ಆದರೆ, ಇನ್ನುಳಿದ ರಾಷ್ಟ್ರಗಳಲ್ಲಿ ಇಂಥ ವ್ಯವಸ್ಥೆಗಳು ಇನ್ನೂ ಅವು ಜಾರಿಗೆ ಬರಬೇಕಿವೆ.
ಇಡೀ ದಕ್ಷಿಣ ಏಷ್ಯಾದಲ್ಲಿ ಇ-ತ್ಯಾಜ್ಯ ವಿಲೇವಾರಿಗೆ ಕರಡು ರೂಪಿಸಿರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಆದರೆ, ಇದನ್ನು ಕಟ್ಟಾನಿಟ್ಟಾಗಿ ಜಾರಿಗೊಳಿಸಲಾಗಿಲ್ಲ. ಇ-ತ್ಯಾಜ್ಯ ವಿಲೇವಾರಿಗಷ್ಟೇ ಅಲ್ಲದೆ, ಇಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಕಂಪನಿಗಳಿಗೆ, ದೀರ್ಘಕಾಲದವರೆಗೆ ಬಾಳಿಕೆ ಬರುವ, ಕಾರ್ಬನ್ ಹೊರಸೂಸುವಿಕೆ ಪ್ರಮಾಣ ಕಡಿಮೆ ಇರುವಂಥ ಉಪಕರಣಗಳನ್ನು ತಯಾರಿಸುವಂತೆ ಸೂಚಿಸಬೇಕಿದೆ.
ಪರಿಣಾಮವೇನು?
ಪರಿಸರ ಮಾಲಿನ್ಯ
ಪ್ರಕೃತಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಳ
ಪ್ಲಾಸ್ಟಿಕ್ ತ್ಯಾಜ್ಯದ ಹೆಚ್ಚಳ
ಗ್ಲೋಬಲ್ ವಾರ್ಮಿಂಗ್‌ಗೆ ಪರೋಕ್ಷ ಸಹಕಾರ