Advertisement

ಇ-ಸ್ಟಾಂಪಿಂಗ್‌ ಅವಧಿ ವಿಸ್ತರಣೆ

03:45 AM Mar 06, 2017 | Team Udayavani |

ಬೆಂಗಳೂರು:ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಅಸ್ತಿತ್ವದಲ್ಲಿರುವ “ಇ-ಸ್ಟಾಂಪಿಂಗ್‌’ ಪದ್ದತಿಯ ಒಂದು ವರ್ಷದ ಅವಧಿಗೆ ವಿಸ್ತರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Advertisement

ರಾಜ್ಯದಲ್ಲಿ “ಇ-ಸ್ಟಾಂಪಿಂಗ್‌’ ಪದ್ದತಿ ಜಾರಿಗೆ ತರಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಷನ್‌ ಆಫ್ ಇಂಡಿಯಾ ನಡುವೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ 2017ರ ಜ.24ಕ್ಕೆ ಮುಗಿದಿದ್ದು, ಅದನ್ನು ಇನ್ನೊಂದು ವರ್ಷಕ್ಕೆ ಅಂದರೆ, 2018ರ ಜ.24ರವರೆಗೆ ಅನ್ವಯ ಆಗುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

“ಇ-ಸ್ಟಾಂಪಿಂಗ್‌’ ವ್ಯವಸ್ಥೆಯನ್ನು 2009ರಲ್ಲಿ ಮೊದಲು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ನಂತರ 2010ರಲ್ಲಿ ಐದು ವರ್ಷದ ಕರಾರು ಅವಧಿಯೊಂದಿಗೆ ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಷನ್‌ ಆಫ್ ಇಂಡಿಯಾ ಜೊತೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ-ಸ್ಟಾಂಪಿಂಗ್‌ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಬಳಿಕ ಪ್ರತಿ ಒಂದು ವರ್ಷಕ್ಕೆ ಕರಾರು ಮಾಡಿಕೊಳ್ಳಲಾಗುತ್ತಿದೆ.

ಇ-ಸ್ಟಾಂಪಿಂಗ್‌ ಪದ್ದತಿ ಅನುಷ್ಠಾನಗೊಳಿಸಲು ನೇಮಿಸಿಕೊಳ್ಳಲು ಉದ್ದೇಶಿಸಿರುವ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಅಂಚೆ ಕಚೇರಿಗಳು ಮಾರಾಟ ಮಾಡುವ ಪ್ರತಿ ಇ-ಸ್ಟಾಂಪಿಂಗ್‌ ಸರ್ಟಿಫಿಕೇಟ್‌ಗೆ, ಅಂದರೆ 100 ರೂ. ಮುಖ ಬೆಲೆಯವರೆಗೂ 10 ರೂ. ಹಾಗೂ 101 ರೂ. ಯಿಂದ 5 ಸಾವಿರ ಮುಖ ಬೆಲೆಯುಳ್ಳ ಸರ್ಟಿಫಿಕೇಟ್‌ಗೆ 15 ರೂ.ಗಳಂತೆ ಸೇವಾ ಶುಲ್ಕವನ್ನು ಸಾರ್ವಜನಿಕರಿಂದ ಪಡೆಯಲು ಅನುಮೋದನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next