ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ 1,697 ಅಂಗಡಿಗಳನ್ನು ಇ ಪ್ರಕ್ಯೂರ್ ಮೆಂಟ್ ಮೂಲಕ ಇ ಹರಾಜು ಮಾಡಲು ನಗರಸಭೆ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ವರ್ತಕರು ಚಿಂತಾ ಕ್ರಾಂತರಾಗಿದ್ದಾರೆ.
ಪ್ರಯತ್ನ ವಿಫಲ: ಇಷ್ಟು ದಿನಗಳ ಕಾಲ ಇ ಹರಾಜು ಮಾಡಬಾರದು, ಅನೇಕ ವರ್ಷಗಳಿಂದ ಇರುವ ಅಂಗಡಿಗಳನ್ನು ಹೆಚ್ಚಿನ ಠೇವಣಿ ಮತ್ತು ಬಾಡಿಗೆಗೆ ಅವರಿಗೇ ನೀಡಬೇಕು ಎಂದು ಹೋರಾಟ ನಡೆಸಿದ್ದರು. ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಬೆಂಬಲ ಪಡೆದು ಇ ಹರಾಜು ಪ್ರಕ್ರಿಯೆ ನಿಲ್ಲಿಸುವುದಕ್ಕೆ ಪ್ರಯತ್ನಪಟ್ಟಿದ್ದು, ವಿಫಲವಾಗಿದೆ. ನ್ಯಾಯಾಲಯಕ್ಕೆ: ನಮ್ಮ ಸಹಾಯಕ್ಕೆ ಬರುವಂತೆ ಎಲ್ಲಾ ರಾಜಕಾರಣಿಗಳನ್ನು ಕೋರಿದ್ದೇವೆ. ಯಾರಿಗೂ ಒಂದು ಪೈಸೆ ದುಡ್ಡು ಕೊಟ್ಟಿಲ್ಲ. 20 ಸಾವಿರ ಕುಟುಂಬಗಳು ಬೀದಿಗೆ ಬೀಳದಂತೆ ಮನವಿ ಮಾಡಿದ್ದೇವೆ.
ನಗರಸಭೆ ನಿರ್ಧಾರ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಲು ಹಲವು ವರ್ತಕರು ನಿರ್ಧರಿಸಿದ್ದಾರೆ. ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ಎಂ.ಜಿ.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದೇವೇಂದ್ರನ್ ತಿಳಿಸಿದ್ದಾರೆ. ಈ ಮಧ್ಯೆ ಎಂ.ಜಿ.ಮಾರುಕಟ್ಟೆಯ 1,441, ಆಂಡರಸನ್‌ಪೇಟೆಯ 207, ಸ್ಯಾನಿಟರಿ ಬೋರ್ಡ್‌ನ 27 ಮತ್ತು ನಗರಸಭೆ ಮೈದಾನದ ಬಳಿಯ 22, ಒಟ್ಟು 1,697 ಅಂಗಡಿಗಳನ್ನು ಮರುಪಾವತಿ ಠೇವಣಿ ಹಾಗೂ ಬಾಡಿಗೆಗೆ ಹನ್ನೆರಡು ವರ್ಷದ ಅವಧಿಗೆ ಬಿಡಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ:ಹೊಸಬರ ಕನಸಿನ ‘ಎವಿಡೆನ್ಸ್’ ಫಸ್ಟ್ ಲುಕ್ ಟೀಸರ್ ಔಟ್
ಒಂದು ಸ್ಲಾಟ್‌ನಲ್ಲಿ ತಲಾ 75 ಅಂಗಡಿ: ಇಂದು (ಜನವರಿ 29) ಇ ಹರಾಜಿಗೆ ಚಾಲನೆ ದೊರೆಯಲಿದ್ದು, ಬೆಳಗ್ಗೆ 11ರಿಂದ ಲೈವ್ ಹರಾಜು ಪ್ರಕ್ರಿಯೆಯಲ್ಲಿ ತೊಡಗಬಹುದು. ಮಾರ್ಚ್ ತಿಂಗಳವರೆಗೂ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ಮಾ.20 ರಂದು ಮುಕ್ತಾಯವಾಗಲಿದೆ. ಅಂಗಡಿಗಳನ್ನು ಸ್ಲಾಟ್ ಮಾಡಲಾಗಿದೆ. ಒಂದು ಸ್ಲಾಟ್‌ನಲ್ಲಿ ತಲಾ 75 ಅಂಗಡಿ ಇರುತ್ತವೆ. ಈ ಹಿನ್ನೆಲೆಯ ಲ್ಲಿ ನಗರಸಭೆ ಸಿಬ್ಬಂದಿ ಗುರುವಾರ ಅಂಗಡಿ ತೆರವು ಮಾಡುವಂತೆ 20 ದಿನಗಳ ಕಾಲಾವಕಾಶ ನೀಡಿ, ವರ್ತಕರಿಗೆ ತೆರವು ನೋಟಿಸ್ ನೀಡಿದರು. ನಗರಸಭೆಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಎಲ್ಲಾ ಅಂಗಡಿಗಳಿಗೂ ನೋಟಿಸ್ ನೀಡುವ ತವಕದಲ್ಲಿದ್ದರು.