ಕೊಹಿಮಾ: ಮಣಿಪುರದ ಕೊಹಿಮಾ ಜಿಲ್ಲೆಯ ದಜುಕೌ ಕಣಿವೆಯ ಅರಣ್ಯದಲ್ಲಿ ಉಂಟಾಗಿರುವ ಬೆಂಕಿಯನ್ನು ಶಮನಗೊಳಿಸಲು ಐಎಎಫ್ ಹೆಲಿಕಾಪ್ಟರ್‌ಗಳು, ಎನ್‌ಡಿಆರ್‌ಎಫ್ ತಂಡಗಳು ಶ್ರಮಿಸುತ್ತಿವೆ.
ನದಿಯಿಂದ ನೀರು ತೆಗೆದುಕೊಂಡು ಬೆಂಕಿ ಇರುವ ಪ್ರದೇಶಕ್ಕೆ ಹೋಗುವ ಫೋಟೋ, ವಿಡಿಯೋ ಈಗ ವೈರಲ್ ಆಗಿದೆ. ಇದು ವರೆಗೆ ಸುಮಾರು 24 ಸಾವಿರ ಲೀಟರ್ ನೀರನ್ನು ಬಳಕೆ ಮಾಡಲಾಗಿದೆ. ಅದಕ್ಕಾಗಿ ದೊಡ್ಡ ಗಾತ್ರದ ಬಕೆಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಪ್ರದೇಶ ಚಾರಣಕ್ಕಾಗಿಯೂ ವಿಶ್ವದಲ್ಲಿ ಹೆಸರುವಾಸಿಯಾಗಿದ್ದು, ಸುಮಾರು 200 ಎಕರೆ ಪ್ರದೇಶದಷ್ಟು ಅರಣ್ಯ ಸುಟ್ಟು ಕರಕಲಾಗಿದೆ.
ರಾಜ್ಯ ಪೊಲೀಸ್ ಇಲಾಖೆ, ಐಎಎಫ್, ಅರಣ್ಯ ಇಲಾಖೆ ಬೆಂಕಿ ಶಮನಗೊಳಿಸಲು ಶತ ಪ್ರಯತ್ನ ನಡೆಸುತ್ತಿದೆ. ಎಲ್ಲ ಇಲಾಖೆಗಳ ನಡುವೆ ಸಮನ್ವಯಕ್ಕಾಗಿ ದುಜುಕೌನಲ್ಲಿ ಅತ್ಯಾಧುನಿಕ ನಿಯಂತ್ರಣ ಕೊಠಢಿಯನ್ನೂ ಸ್ಥಾಪಿಸಲಾಗಿದೆ.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜಕುಮಾರ್ ಎಂ ಮಾತನಾಡಿ ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳೂ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದಿದ್ದಾರೆ.