Advertisement

Dwayne Bravo: ಎಲ್ಲಾ ಮಾದರಿ ಕ್ರಿಕೆಟ್‌ ನಿಂದ ನಿವೃತ್ತಿಯಾದ ʼಚಾಂಪಿಯನ್‌ʼ ಬ್ರಾವೋ

11:01 AM Sep 27, 2024 | Team Udayavani |

ಟ್ರಿನಿಡಾಡ್:‌ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ನ ಆಲ್‌ ರೌಂಡರ್‌, ಟಿ20 ಕ್ರಿಕೆಟ್‌ ನ ದಿಗ್ಗಜ ಡ್ವೇನ್‌ ಬ್ರಾವೋ (Dwayne Bravo) ಅವರು ಎಲ್ಲಾ ಮಾದರಿ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (CPL)‌ ನ ಟ್ರಿನಿಡಾಡ್‌ ನೈಟ್‌ ರೈಡರ್ಸ್‌ ಮತ್ತು ಸೈಂಟ್‌ ಲೂಸಿಯಾ ಕಿಂಗ್ಸ್‌ ನಡುವಿನ ಪಂದ್ಯವೇ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಯಿತು.

Advertisement

ಸೆ.24ರಂದು ಟ್ರಿನಿಡಾಡ್‌ ನೈಟ್‌ ರೈಡರ್ಸ್‌ ಪರವಾಗಿ ಆಡುತ್ತಿದ್ದ ಬ್ರಾವೋ ಗಾಯಗೊಂಡರು. ಹೀಗಾಗಿ ಕೊನೆಯಲ್ಲಿ ಅಂದರೆ 11ನೇ ಆಟಗಾರನಾಗಿ ಕಣಕ್ಕಿಳಿದ ಅವರು ಆಟ ಪೂರ್ಣಗೊಳಿಸದೆ ತೆರಳಿದರು. ಈ ಮೂಲಕ 21 ವರ್ಷಗಳ ಕ್ರಿಕೆಟ್‌ ಜೀವನಕ್ಕೆ ತೆರೆ ಎಳೆದರು.

ಗುರುವಾರ (ಸೆ.26) ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಬ್ರಾವೋ ತನ್ನ ಜೀವನ ಮತ್ತು ವೃತ್ತಿಜೀವನವನ್ನು ವ್ಯಾಖ್ಯಾನಿಸಿದ ಆಟಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.‌

“ವೃತ್ತಿಪರ ಕ್ರಿಕೆಟಿಗನಾಗಿ ಇಪ್ಪತ್ತೊಂದು ವರ್ಷಗಳು – ಇದು ಅನೇಕ ಎತ್ತರಗಳು ಮತ್ತು ಕೆಲವು ಇಳಿಕೆಗಳನ್ನು ತುಂಬಿದ ನಂಬಲಾಗದ ಪ್ರಯಾಣವಾಗಿದೆ” ಎಂದು ಬ್ರಾವೋ ಬರೆದಿದ್ದಾರೆ. “ನಾನು ಈ ಸಂಬಂಧವನ್ನು ಮುಂದುವರಿಸಲು ಇಷ್ಟಪಡುವೆ ಆದರೆ, ಈಗ ವಾಸ್ತವ ಎದುರಿಸುವ ಸಮಯ. ನನ್ನ ಮನಸ್ಸು ಮುಂದುವರಿಯಲು ಬಯಸುತ್ತದೆ, ಆದರೆ ನನ್ನ ದೇಹವು ಇನ್ನು ಮುಂದೆ ನೋವು, ಕುಸಿತಗಳು ಮತ್ತು ಒತ್ತಡವನ್ನು ಸಹಿಸುವುದಿಲ್ಲ. ನನ್ನ ಸಹ ಆಟಗಾರರು, ನನ್ನ ಅಭಿಮಾನಿಗಳು ಅಥವಾ ನಾನು ಪ್ರತಿನಿಧಿಸುವ ತಂಡಗಳನ್ನು ನಾನು ನಿರಾಸೆಗೊಳಿಸೆಗೊಳಿಸಲು ಬಯಸುವುದಿಲ್ಲ” ಎಂದು ಬ್ರಾವೋ ಹೇಳಿದ್ದಾರೆ.

Advertisement

ವಿಶ್ವದಾದ್ಯಂತ ಹಲವು ಟಿ20 ಕೂಟಗಳಲ್ಲಿ ಆಡಿರುವ ʼಚಾಂಪಿಯನ್‌ʼ ಖ್ಯಾತಿಯ ಡ್ವೇನ್‌ ಬ್ರಾವೋ ಸಿಪಿಎಲ್‌ ನಲ್ಲಿ ಐದು ಬಾರಿ ಚಾಂಪಿಯನ್‌ ಶಿಪ್‌ ಗೆದ್ದ ತಂಡದಲ್ಲಿದ್ದವರು. ಅಲ್ಲದೆ ಐಪಿಎಲ್‌, ಬಿಪಿಎಲ್‌, ಪಿಎಸ್‌ಎಲ್ ಗಳಲ್ಲಿ ಚಾಂಪಿಯನ್‌ ಆಗಿದ್ದಾರೆ.

631 ವಿಕೆಟ್‌ಗಳೊಂದಿಗೆ ಬ್ರಾವೋ ಅವರು ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಆಟಗಾರನಾಗಿದ್ದಾರೆ. ಜೊತೆಗೆ 177 ಪ್ರಥಮ ದರ್ಜೆ ವಿಕೆಟ್‌ಗಳು ಮತ್ತು 271 ಲಿಸ್ಟ್-ಎ ವಿಕೆಟ್‌ ಗಳು ಪಡೆದಿದ್ದಾರೆ. 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತರಾದ ನಂತರ, ಬ್ರಾವೋ ತರಬೇತುದಾರರಾಗಿ ಕಾಣಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next