ಸುಳ್ಯ/ಬೆಂಗಳೂರು: ಎರಡು ಮೂರು ದಿನಗಳಿಂದ ಗುಡುಗುತ್ತಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಣ್ಣಗಾ ಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ಬೆಂಗಳೂರಿ ನಿಂದ ತವರು ನೆಲ ಸುಳ್ಯಕ್ಕೆ ತೆರಳಿದ್ದಾರೆ.
ಸುಳ್ಯದ ಮೂಲಮನೆಯಾದ ದೇವರಗುಂಡದಲ್ಲಿ ದೈವ ಕೋಲ ಇರುವ ಹಿನ್ನೆಲೆಯಲ್ಲಿ ತೆರಳಿದ್ದು, ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಯಸಿ ದೈವಕ್ಕೆ ಮೊರೆ ಇಟ್ಟಿದ್ದಾರೆ.
ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಅವರು, ಬಿಜೆಪಿ ನಾಯಕರ ಒತ್ತಾಸೆಯಿಂದ ಮರುಸ್ಪರ್ಧೆ ಘೋಷಿಸಿ ದ್ದರು. ಆದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಹೆಸರು ಘೋಷಣೆಯಾಗಿದ್ದು, ಇದರಿಂದ ಡಿವಿಎಸ್ ಅಸಮಾಧಾನ ಗೊಂಡಿದ್ದರು.
ಅಷ್ಟೇ ಅಲ್ಲದೆ ಹುಟ್ಟು ಹಬ್ಬ ದಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಕಾಂಗ್ರೆಸ್‌ನವ ರನ್ನು ತಮ್ಮನ್ನು ಸಂಪರ್ಕಿಸಿದ್ದು, ಬಿಜೆಪಿಯವರೂ ಮನವೊಲಿಸುತ್ತಿದ್ದಾರೆ. ನನ್ನ ಮುಂದಿನ ನಿರ್ಧಾರ ಗಳನ್ನು ಆತ್ಮಸಾಕ್ಷಿ ಹಾಗೂ ಕುಟುಂಬದವರನ್ನು ಕೇಳಿ ಮಾಡುತ್ತೇನೆ ಎಂದಿದ್ದರಲ್ಲದೆ ಮಂಗಳವಾರ ಮಾಧ್ಯಮಗೋಷ್ಠಿ ಕರೆಯುವುದಾಗಿ ಹೇಳಿದ್ದರು. ಮಂಗಳವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬುಧವಾರ ಪತ್ರಿಕಾ ಗೋಷ್ಠಿ ಕರೆಯುವುದಾಗಿ ಹೇಳಿದ್ದರು.
ಬುಧವಾರ ಬೆಳಗ್ಗೆಯೇ ಬೆಂಗಳೂರಿನಿಂದ ತೆರಳಿದ್ದು, ದೈವ ಕೋಲ ಮುಗಿಸಿ ಶುಕ್ರವಾರದ ಅನಂತರ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸದಾನಂದಗೌಡರನ್ನು ಸಂಘ-ಪರಿವಾರದ ಮುಖಂಡರೂ ಕರೆಯಿಸಿಕೊಂಡು ಸಮಾಧಾನ ಹೇಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ತಡರಾತ್ರಿ ಸುಳ್ಯಕ್ಕೆ ಆಗಮನ
ಸುಳ್ಯ: ಸದಾನಂದ ಗೌಡ ಅವರು ಬುಧವಾರ ತಡರಾತ್ರಿ ಸುಳ್ಯದ ಮಂಡೆಕೋಲಿನ ತಮ್ಮ ದೇವರಗುಂಡದ ಮನೆಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ದೇವರಗುಂಡದಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿ ರಾಜಕೀಯ ನಿರ್ಧಾರ ಕೈಗೊಳ್ಳಲು ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಅವರ ರಾಜಕೀಯದ ಮುಂದಿನ ನಡೆದ ಬಗ್ಗೆ ನಿರ್ಧಾರದ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.