Advertisement

ಆತ್ಮನಿರ್ಭರ ಯೋಜನೆ : ರಾಜ್ಯಕ್ಕೆ 4,267 ಕೋ.ರೂ.: ಡಿವಿಎಸ್‌

09:39 AM Jul 11, 2020 | sudhir |

ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ಕರ್ನಾಟಕಕ್ಕೆ ಈವರಗೆ 4,267 ಕೋ. ರೂ. ಬಿಡುಗಡೆಯಾಗಿದ್ದು, ಮುಂದೆಯೂ ಹಂತಹಂತವಾಗಿ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಕ್ಷೇತ್ರಕ್ಕೆ ಕೇಂದ್ರ ಸರಕಾರ ನೆರವಾಗಿದ್ದು, ರಾಜ್ಯದ 1,58,786 ಎಂಎಸ್‌ಎಂಇಗೆ ಸುಮಾರು 4,106 ಕೋ. ರೂ. ನೀಡ ಬೇಕಿತ್ತು. ಈ ಪೈಕಿ 87,868 ಎಂಎಸ್‌ಎಂಇಗಳಿಗೆ 2,439 ಕೋ. ರೂ. ವಿತರಣೆಯಾಗಿದೆ. ರಾಜ್ಯದ 3,10,688 ಮಂದಿ ಇಪಿಎಫ್‌ನಡಿ 1,125 ಕೋ. ರೂ. ಹಿಂಪಡೆದಿದ್ದಾರೆ. ಹಾಗೆಯೇ ಬಿಲ್ಡಿಂಗ್‌ ಆ್ಯಂಡ್‌ ಕನ್‌ಸ್ಟ್ರಕ್ಷನ್‌ ಫಂಡ್‌ನಿಂದ ರಾಜ್ಯಕ್ಕೆ 681 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ರಾಜ್ಯದ 88,09,042 ಮಂದಿಯ ಜನಧನ್‌ ಖಾತೆಗೆ ಎಪ್ರಿಲ್‌, ಮೇ, ಜೂನ್‌ ತಿಂಗಳಿಗೆ ಒಟ್ಟು 161 ಕೋ.ರೂ. ಜಮೆಯಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದ 48.39 ಲಕ್ಷ ರೈತರಿಗೆ ತಲಾ 2,000 ರೂ.ನಂತೆ 967.81 ಕೋ. ರೂ. ಪಾವತಿಯಾಗಿದೆ ಎಂದರು.

ದುರುಪಯೋಗವಿಲ್ಲ
ಆತ್ಮನಿರ್ಭರ ಯೋಜನೆಯ ಅನು ಷ್ಠಾನದಲ್ಲಿ ಯಾವುದೇ ತೊಂದರೆ ಗಳಿದ್ದರೆ ನಮಗೆ ಮಾಹಿತಿ ನೀಡ ಬಹುದು. ಪ್ರಧಾನಿಯವರು ಘೋಷಿ ಸಿದ ಯೋಜನೆಯಡಿ ಪ್ರತಿ ಪೈಸೆಯನ್ನೂ ಕಟ್ಟಕಡೆಯ ಫಲಾನುಭವಿಗೆ ತಲುಪಿ ಸುತ್ತೇವೆ. ಇದರಲ್ಲಿ ಯಾವುದೇ ರೀತಿಯಲ್ಲಿ ದುರುಪಯೋಗಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಮೊಸರಲ್ಲಿ ಕಲ್ಲು ಹುಡುಕುವವರು
ಕೋವಿಡ್‌ ಕಾಲದಲ್ಲಿ ಎಲ್ಲರೂ ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ ಕೆಲವರು ಆರೋಪದ ಮಾತುಗಳನ್ನಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವಂತಹ ಸಾಕಷ್ಟು ಜನ, ಪಕ್ಷಗಳನ್ನು ಕಂಡಿದ್ದೇವೆ ಎಂದು ಡಿವಿಎಸ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next