Advertisement

ಬ್ಯಾಂಕರ್‌ಗಳೊಂದಿಗೆ ಡಿವಿ ಸಭೆ : ಆಧ್ಯತಾ ವಲಯ, ಸಾಲ ಯೋಜನೆ ತ್ವರಿತ ಮಂಜೂರಿಗೆ ಸೂಚನೆ

12:07 PM Nov 03, 2015 | mahesh |

ಬೆಂಗಳೂರು: ಸಣ್ಣ ಕೈಗಾರಿಕೆ, ಕೃಷಿ, ಶಿಕ್ಷಣ, ವಸತಿ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಇವೇ ಮುಂತಾದ ಆಧ್ಯತಾ ವಲಯದ ಯೋಜನೆಗಳಿಗೆ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.

Advertisement

ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಗಿರುವ ಕೆನರಾ ಬ್ಯಾಂಕಿನ ಉಸ್ತುವಾರಿಯಲ್ಲಿ ಇಂದು ನಡೆದ ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವರು ವಿವಿಧ ಸಾಲಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಕಿಸಾನ್‌ ಸಮ್ಮಾನ್‌ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ರಿಯಾಯಿತಿಗಳೂ ನೇರ ವರ್ಗಾವಣೆ ಮೂಲಕ ನಡೆಯತ್ತದೆ. ಯಾರೊಬ್ಬರೂ ವಿಶೇಷವಾಗಿ ರೈತರು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ (ಹೊರವಲಯದಲ್ಲಿ) ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬಗಳ ಸಮೀಕ್ಷೆ ನಡೆಸಿ ಪ್ರತಿಯೊಂದು ಕುಟುಂಬಕ್ಕೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸುವ ವ್ಯವಸ್ಥೆ ಮಾಡುವಂತೆ ಸಚಿವ ಸದಾನಂದ ಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಿವರಾಮೇಗೌಡ ಅವರಿಗೆ ಸೂಚಿಸಿದರು.

ಅನುಸೂಚಿತ ಜಾತಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಾಲ್ಮಿಕಿ ನಿಗಮ ಇವೇ ಮುಂತಾದ ನಿಗಮ-ಮಂಡಳಿಗಳು, ಪ್ರಾಯೋಜಿಸುವ ಅನೇಕ ಸಾಲಯೋಜನೆಗಳ ಬಹುತೇಕ ಅರ್ಜಿಗಳು ಹಾಗೂ ಬಿಬಿಎಂಪಿ ಶಿಪಾರಸು ಮಾಡಿರುವ ಬೀದಿಬದಿ ವ್ಯಾಪಾರಿಗಳ ಕಿರುಸಾಲದ ಅರ್ಜಿಗಳು ಅನೇಕ ತಿಂಗಳುಗಳಿಂದ ಬಾಕಿಯುರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಅರ್ಜಿಗಳಿಗೆ ಮಂಜೂರಾತಿ ನೀಡುವಲ್ಲಿ ಅನಗತ್ಯ ಹಾಗೂ ಸಕಾರಣವಿಲ್ಲದೆ ವಿಳಂಬ ಮಾಡುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಸಚಿವರು ಅರ್ಜಿಗಳು ಸಾಲಕ್ಕೆ ಅರ್ಹವಾಗಿಲ್ಲದಿದ್ದರೆ ಅಂತ ಅರ್ಜಿಗಳನ್ನು ಸಕಾರಣ ಕೊಟ್ಟು ತಿರಸ್ಕರಿಸಿ. ತಿಂಗಾಳುನಗಟ್ಟಲೆ ಬಾಕಿ ಇಟ್ಟುಕೊಳ್ಳಬೇಡಿ. ಮುಂದಿನ 15 ದಿನಗಳಲ್ಲಿ ತಮಗೆ ಅನುಸರಣಾ ವರದಿ ಸಲ್ಲಿಸಿ ಎಂದು ಸೂಚಿಸಿದರು.

Advertisement

ಕೊರಾನದಿಂದ ಬ್ಯಾಂಕರಗಳು ಎದುರಿಸಿದ ಸವಾಲುಗಳು, ಕೇಂದ್ರ ಸರಕಾರವು ಘೋಷಿಸಿರುವ ಸ್ವಾವಲಂಬಿ ಯೋಜನೆಗಳ ಜಾರಿಯಲ್ಲಿ ಎದುರಾಗುತ್ತಿರುವ ಅಡಚಣೆಗಳು, ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ಬಗ್ಗೆ ಹೊಸ ಹೊಸ ಯೋಚನೆಗಳು ಇದ್ದರೆ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ಸಚಿವವರು ಬ್ಯಾಂಕರ್‌ಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಮುಕ್ತ ಆಹ್ವಾನ ನೀಡಿದರು.

ಕೊರೊನಾ ಮಧ್ಯೆಯೂ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಪಿಎಂಇಜಿಪಿ ಯೋಜನೆಯ ಅನುಷ್ಠಾನದ ಜವಾಬ್ಧಾರಿ ವಹಿಸಿಕೊಂಡಿರುವ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದ (ಕೆವಿಐಸಿ) ರಾಜ್ಯ ಘಟಕವು ಉತ್ತಮ ಕಾರ್ಯನಿರ್ವಹಿಸಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವ ಬಗ್ಗೆ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದರು.

ಕೆವಿಐಸಿ, ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆ ಹಾಗೂ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರನ್ಸ್‌ ಮೂಲಕವೂ ಚರ್ಚೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next