Advertisement
ದಸರಾ ಮಹೋತ್ಸವ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿರುವ ಮಹಿಳಾ ಮತ್ತು ಮಕ್ಕಳ ದಸರಾದಲ್ಲಿ ಮೈಸೂರು ಸೇರಿದಂತೆ ಹೊರ ಜಿಲ್ಲೆಯ ವಿವಿಧ ಭಾಗಗಳ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಕುಂದನ್ ರಂಗೋಲಿ, ಕರಕುಶಲ ವಸ್ತುಗಳು, ವಿವಿಧ ನಮೂನೆಯ ರೆಡಿಮೆಡ್ ಹಾರಗಳು, ರಾಗಿ ಉತ್ಪನ್ನ, ಮರದ ಆಟಿಕೆಗಳು, ಮಣ್ಣಿನಿಂದ ತಯಾರಿಸಿದ ಗೃಹಾಲಂಕಾರಿ ವಸ್ತುಗಳು ವೈನ್ ಮತ್ತು ಜೇನುತುಪ್ಪ, ಖಾದಿ ಬಟ್ಟೆಗಳು ಸೇರಿದಂತೆ ಹತ್ತಾರು ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಕಂಡುಬಂದವು.
Related Articles
Advertisement
ಕಾರ್ಯಕ್ರಮಗಳ ವಿವರಮೈಸೂರು: ನಗರದ ಜೆ.ಕೆ. ಮೈದಾನದಲ್ಲಿ ದಸರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಮಹಿಳಾ ಮತ್ತು ಮಕ್ಕಳ ದಸರಾ ಮಂಗಳವಾರದಿಂದ ಐದು ದಿನಗಳ ಕಾಲ ನಡೆಯಲಿದೆ. ಮೊದಲ ದಿನವಾದ ಮಂಗಳವಾರ ಉದ್ಘಾಟನೆ ಕಾರ್ಯಕ್ರಮ, ಮಹಿಳೆಯ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬುಧವಾರ ಮಹಿಳೆಯರಿಗಾಗಿರಾಗಿ ಬೀಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ತಯಾರಿಸುವ ಸ್ಪರ್ಧೆ, ಚುಟುಕು ಹಾಸ್ಯ ಮತ್ತು ನಾಟಕ
ಪ್ರದರ್ಶನ ನಡೆಯಲಿದೆ. ಗುರುವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖಾ ಸಿಬ್ಬಂದಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಲೆಮನ್ ಇನ್ ದ ಸ್ಪೂನ್, ಬಲೂನ್ ಊದು ಸ್ಪರ್ಧೆ, ಜಾನಪದ ಮತ್ತು ಭಾವ ಗೀತೆ ಸ್ಪರ್ಧೆ ನಡೆದರೆ ಮಹಿಳೆಯರಿಗೆ ಕೇಶ ವಿನ್ಯಾಸ, ಜಾನಪದ ಸಮೂಹ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ವೇಶಭೂಷಣ ಸ್ಪರ್ಧೆ, ಚಿಣ್ಣರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಕೊನೆಯ ದಿನವಾದ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ವಿವಿಧ ಕಾರ್ಯಕ್ರಮ ಮತ್ತು ಸ್ಪರ್ಧೆ ಆಯೋಜಿಸಲಾಗಿದೆ. ಮೊದಲನೆಯದಾಗಿ ಹಿರಿಯ ನಾಗರೀಕರಿಗೆ 100 ಮೀಟರ್ ವಾಕಿಂಗ್ ಸ್ಪರ್ಧೆ, ಬಕೆಟ್ ಒಳಗೆ ಚೆಂಡು ಎಸೆಯುವ ಸ್ಪರ್ಧೆ ನಡೆಯಲಿದೆ. ಬಳಿಕ ಅಂಧ ಮಕ್ಕಳಿಂದ ಯೋಗ ಮತ್ತು ಜಾನಪದ ನೃತ್ಯ, ಶ್ರವಣ ದೋಷ ಮಕ್ಕಳಿಂದ ಜಾನಪದ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.