Advertisement

ತಪ್ಪಿದ ಭಾರಿ ದುರಂತ; ಒಂದೇ ಟ್ರ್ಯಾಕ್‌ನಲ್ಲಿ 3 ರೈಲುಗಳು!

01:50 PM Sep 26, 2017 | Team Udayavani |

ಅಲಹಾಬಾದ್‌: ಉತ್ತರಪ್ರದೇಶದಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಭಾರಿ ರೈಲು ಅವಘಡವೊಂದು ಸಿಬಂದಿಗಳ ಸಕಾಲಿಕ ಸಮಯಪ್ರಜ್ಞೆಯಿಂದ ತಪ್ಪಿಹೋಗಿದೆ.

Advertisement

ವರದಿಯಾದಂತೆ ದುರಂತೋ ಎಕ್ಸ್‌ಪ್ರೆಸ್‌, ಹತಿಯಾ -ಆನಂದ್‌ ವಿಹಾರ್‌ ಎಕ್ಸ್‌ಪ್ರೆಸ್‌ ಮತ್ತು ಮಹಾಬೋಧಿ ಎಕ್ಸ್‌ಪ್ರೆಸ್‌ ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸುತ್ತಿದ್ದು, ರೈಲ್ವೇ ಸಿಬಂದಿಗಳು ಅವಘಡವನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಯಾವ ಕಾರಣಕ್ಕಾಗಿ ಒಂದೇ ಹಳಿಯಲ್ಲಿ 3 ರೈಲುಗಳು ಸಂಚರಿಸುವಂತಾಯ್ತು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next