Advertisement

ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯ ರಸ್ತೆಗೆ: ನಾಗರಿಕರ ತೀವ್ರ ಆಕ್ರೋಶ

07:50 AM May 11, 2018 | Team Udayavani |

ಬದಿಯಡ್ಕ: ಪೆರ್ಲ ಸಮೀಪದ ಗಾಳಿಗೋಪುರ ಏತಡ್ಕ ರಸ್ತೆಯ ಪೆರಿಯಾಲ್‌ ಎಂಬಲ್ಲಿ ಸಮಾಜ ಘಾತುಕರು ಕತ್ತಲೆ ಮರೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾರೆ. ರಸ್ತೆಯಲ್ಲಿಯೇ ತ್ಯಾಜ್ಯ ಎಸೆಯಲಾಗಿದ್ದು ವಾಹನಗಳು ಅವುಗಳ ಮೇಲೆ ಸಾಗಿದ್ದು ಚೆಲ್ಲಾಪಿಲ್ಲಿಯಾಗಿ ಹರಡಿದ್ದು ಘಟನೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಂಡಗಳನ್ನು ರಚಿಸಿ ರಾತ್ರಿ ವೇಳೆಗಳಲ್ಲಿ ಕಾದು ನಿಂತು ತ್ಯಾಜ್ಯ ಎಸೆದ ಸಮಾಜ ಘಾತುಕ ಕೃತ್ಯ ಎಸಗುವವರನ್ನು ಕೈಯ್ನಾರೆ ಸೆರೆ ಹಿಡಿದು ಕಾನೂನಿನ ಮುಂದೆ ತರಲು ಕೋಳಿ ಸಾಗಾಟ ವಾಹನ ಹಾಗೂ ರಖಂ ವ್ಯಾಪಾರಿಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿದ್ದಾರೆ. 


ಎಣ್ಮಕಜೆ ಪಂಚಾಯತ್‌ ಅಧ್ಯಕ್ಷೆ ರೂಪವಾಣಿ ಆರ್‌. ಭಟ್‌, ವಾರ್ಡ್‌ ಸದಸ್ಯೆ ಶಶಿಕಲಾ ವೈ., ಪಂಚಾಯತ್‌ಕಾರ್ಯದರ್ಶಿ ರೆಜಿಮೋನ್‌, ಆರೋಗ್ಯ ಅಧಿಕಾರಿ ಚಂದ್ರನ್‌, ಸಾಮಾಜಿಕ ಹೋರಾಟಗಾರ ವೈದ್ಯ ಡಾ|ಮೋಹನ್‌ ಕುಮಾರ್‌ ವೈ.ಎಸ್‌. ಬದಿಯಡ್ಕ ಠಾಣಾ ಫ್ಲೈಯಿಂಗ್‌ ಸ್ಕ್ವಾಡ್‌ ಪೊಲೀಸ್‌ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪಂಚಾಯತಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಲೇವಾರಿ ನಡೆಸಲಾಯಿತು.

ಇದೇ ಮೊದಲಲ್ಲ
ಸಮಾಜ ಘಾತುಕರ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಈ ಕೃತ್ಯವು ಇದೇ ಮೊದಲಾಗಿರದೆ ಬಿಜಂತಡ್ಕ, ನಾರಂಪಾಡಿ, ಉಕ್ಕಿನಡ್ಕ,ಸ್ವರ್ಗ ಸಮೀ ಪದ ಗೋಳಿಕಟ್ಟೆ, ವಾಣೀನಗರ, ಪಾಣಾಜೆ- ಕಾಟುಕುಕ್ಕೆ ರಸ್ತೆ, ಧರ್ಮತ್ತಡ್ಕ ಮೊದಲಾಗಿ ಹಲವೆಡೆ ಕೋಳಿ ಸಾಗಾಟದ   ವಾಹನ  ಚಾಲಕರು ತ್ಯಾಜ್ಯ ಎಸೆಯುತ್ತಿದ್ದು ದುರ್ನಾತ ಬೀರುತ್ತಿರುವುದಲ್ಲದೆ ಸಾಂಕ್ರಾಮಿಕ ರೋಗ ಪಸರಿಸಲು ಕಾರಣವಾಗುತ್ತದೆ. ವಾರಗಳ ಹಿಂದೆ ಸ್ವರ್ಗದಲ್ಲಿ ಯುವಕರ  ತಂಡ ಕೋಳಿ ಸಾಗಾಟ ವಾಹನ ಚಾಲಕರಿಗೆ ಕೋಳಿತ್ಯಾಜ್ಯ ರಸ್ತೆಗೆ ಎಸೆಯದಂತೆ ಎಚ್ಚರಿಕೆ ನೀಡಿತ್ತು


ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷರಿಂದ ಖಂಡನೆ
ರಾತ್ರಿ ವೇಳೆ ತ್ಯಾಜ್ಯ ಎಸೆತವೇ ಮೊದಲಾಗಿ ದುಷ್ಕೃತ್ಯ ಎಸಗುತ್ತಿರು ಸಮಾಜ ಘಾತುಕ ಕೃತ್ಯವನ್ನು ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೂಪವಾಣಿ ಆರ್‌.ಭಟ್‌ ಅವರು ಖಂಡಿಸಿದ್ದು ದೇಶಾದ್ಯಂತ ಸ್ವತ್ಛ ಭಾರತ್‌ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರು ಅದನ್ನು ಪಾಲಿಸುತ್ತಾ ಬರುವಾಗ ಅದೇ ರೀತಿ ಜಿಲ್ಲೆ, ಬ್ಲಾಕ್‌ ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಆರೋಗ್ಯ ಜಾಗೃತಿ ಸೆಮಿನಾರ್‌ ಸಾಕ್ಷ್ಯ ಚಿತ್ರ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದ ಹಾಗೂ ಮಳೆಗಾಲ ಪೂರ್ವ ಶುಚಿತ್ವ ಕಾರ್ಯಕ್ರಮಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಸಮಾಜ ಘಾತುಕರ ಚಟುವಟಿಕೆ ನಡೆಸುತ್ತಿರುವವರನ್ನು ಕಾನೂನಿನ ಮುಂದೆ ತರುವುದು ಅನಿವಾರ್ಯ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪರಿಸರದಲ್ಲಿನ ಸಿಸಿ.ಟಿವಿ ದೃಶ್ಯ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬದಿಯಡ್ಕ ಠಾಣಾಧಿಕಾರಿಗಳಿಗೆ ಮನವಿ ನೀಡಿದ್ದು ರಾತ್ರಿ ವೇಳೆಗಳಲ್ಲಿ ಇನ್ನೂ ಹೆಚ್ಚಿನ ಗಸ್ತು ಹಾಗೂ ತಪಾಸಣೇ ನಡೆಸಿ ದುಷ್ಕೃತ್ಯ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಬದಿಯಡ್ಕ ಪೊಲೀಸ್‌ ಠಾಣಾಧಿಕಾರಿ ಕೆ. ಪ್ರಶಾಂತ್‌ ತಿಳಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next