Advertisement

ಡುಂ ಡುಂ ಡೋಲ್‌!

11:49 AM Oct 28, 2017 | |

“ಸತ್ಯಂ ಶಿವಂ ಸುಂದರಂ’ ಧಾರವಾಹಿಯಲ್ಲಿ ಈಗ ಮದುವೆ ಸಂಭ್ರಮ. ಶಿವ ಮತ್ತು ತಾಪ್ಸಿ ವಿವಾಹ ಮಹೋತ್ಸನ ದೊಡ್ಡ ಟ್ವಿಸ್ಟ್‌ ಪಡೆದುಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಧಾರಾವಾಹಿ 70 ಕಂತುಗಳನ್ನು ಪೂರೈಸಲಿದೆ. ಮದುವೆ ಶಾಸ್ತ್ರಗಳಿಗಾಗಿ ಕನಸಿನ ಲೋಕದಂಥ ಅದ್ಭುತಮಂಟಪವನ್ನು ನಿರ್ಮಿಸಲಾಗಿದ್ದು, ಬಳೆಶಾಸ್ತ್ರ,ಅರಿಶಿನ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ಮುಂತಾದ ಶಾಸ್ತ್ರಗಳು ನೆರವೇರಲಿವೆ.

Advertisement

ಚೇತನ್‌ ಚಂದ್ರ, ಅಪೂರ್ವ, ಸ್ನೇಹಾ ಆಚಾರ್ಯ, ಅಜಯ್‌ ರಾಜ್, ಅದಿ ಲೋಕೇಶ್‌ ಮತ್ತಿತರ ಕಲಾವಿದರು ಈ ವಿವಾಹ ಮಹೋತ್ಸವದ ಸಂಭ್ರಮದ ಕಳೆಯನ್ನು ಹೆಚ್ಚಿಸಲಿದ್ದಾರೆ. ಅದ್ಧೂರಿಯಾಗಿ ಮೂಡಿ ಬಂದಿರುವ ಈ ವಿವಾಹ ಮಹೋತ್ಸವದಲ್ಲಿ ವಸ್ತ್ರಾವಿನ್ಯಾಸ, ಆಭರಣ ವಿನ್ಯಾಸ, ಒಳಾಲಂಕಾರ ಮುಂತಾದ ಸಂಗತಿಗಳತ್ತ ವಿಶೇಷ ಗಮನವನ್ನು ನೀಡಲಾಗಿದೆ.

ಚಾನೆಲ್‌: ಸ್ಟಾರ್‌ ಸುವರ್ಣ
ಯಾವಾಗ?: ಸೋಮ- ಶುಕ್ರ, ಸಂಜೆ 7

Advertisement

Udayavani is now on Telegram. Click here to join our channel and stay updated with the latest news.

Next