Advertisement

ಸಾಗುವಳಿ ಜಮೀನಿನಲ್ಲಿ ತಗ್ಗು ತೋಡಿದ ಅರಣ್ಯ ಇಲಾಖೆ

02:40 PM Feb 10, 2017 | Team Udayavani |

ಚಿಂಚೋಳಿ: ತಾಲೂಕಿನ ರುಮ್ಮನಗೂಡ ತಾಂಡಾದ ಹತ್ತಿರ ಇರುವ ಸರಕಾರಿ ಜಮೀನಿನಲ್ಲಿ ಕಳೆದ 35 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ವಲಯ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಸಸಿಗಳನ್ನು ನೆಡುವುದಕ್ಕಾಗಿ ತೆಗ್ಗು ತೋಡಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆರೋಪಿಸಿದ್ದಾರೆ. 

Advertisement

ರುಮ್ಮನಗೂಡ ತಾಂಡಾದ ಸರ್ವೇ ನಂ.195ರಲ್ಲಿ ಐದಾರು ರೈತರು ಜಮೀನು ಸಾಗುವಳಿ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ರೈತರು ಹೊಲದಲ್ಲಿ ಇಲ್ಲದಿರುವುದನ್ನು ನೋಡಿ ಅರಣ್ಯ ಇಲಾಖೆ ಅಧಿಧಿಕಾರಿಗಳು ಜಮೀನಿನಲ್ಲಿ ಸಸಿಗಳನ್ನು ಹಚ್ಚುವ ಪ್ರಯತ್ನ ನಡೆಸಿದ್ದಾರೆ.

ಇದರಿಂದ ಬಡ ರೈತರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಹೊಲದಲ್ಲಿ ಬಿತ್ತನೆ ಮಾಡಿದರೆ ಪೊಲೀಸ್‌ ಪ್ರಕರಣ ದಾಖಲಿಸುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ.

ತಾಂಡಾದ ಸೀತಾಬಾಯಿ ನೂರಸಿಂಗ್‌, ಅನೀಲ ನೂರಸಿಂಗ್‌, ಶೇಕುಬಾಯಿ ಹೇಮಸಿಂಗ್‌, ಸೋನಿಬಾಯಿ ಹರಿಸಿಂಗ್‌, ಯಶ್ವಂತ ಹರಿಸಿಂಗ್‌, ಜೇಮಿಬಾಯಿ ವಾಚು ಇವರ ಹೊಲದಲ್ಲಿ ಅರಣ್ಯ ಇಲಾಖೆಯವರು ಟ್ರಾಕ್ಟರ್‌ನಿಂದ ಅಗೆದು ತೊಂದರೆ ನೀಡಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next