Advertisement

ಕಾನೂನು ಬಾಹಿರವಾಗಿ ರಸ್ತೆ ಅಗೆದ ಏಜೆನ್ಸಿ ವಿರುದ್ಧ ಸಮರ

12:12 PM Mar 17, 2017 | Team Udayavani |

ಬೆಂಗಳೂರು: ನಗರದ ರಸ್ತೆಗಳನ್ನು ಅಗೆದು ಕಾನೂನು ಬಾಹಿರವಾಗಿ ಒಎಫ್ಸಿ ಕೇಬಲ್‌ ಅಳವಡಿಸುವ ಏಜೆನ್ಸಿಗಳ ವಿರುದ್ಧ ಬಿಬಿಎಂಪಿ ಸಮರ ಸಾರಿದ್ದು, ಕಟ್ಟುನಿಟ್ಟಿನ ಕ್ರಮಗಳ ಮೂಲಕ ಏಜೆನ್ಸಿಗಳಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿದೆ. ನಗರದಾದ್ಯಂತ ಎಲ್ಲೆಲ್ಲಿ ಅನಧಿಕೃತವಾಗಿ ಒಎಫ್ಸಿ ಕೇಬಲ್‌ಗ‌ಳನ್ನು ಅಳವಡಿಸಿದ್ದಾರೆಂದು ಪತ್ತೆಹಚ್ಚಿ ಕ್ರಮವಹಿಸಲು ಮುಂದಾಗಿದೆ.

Advertisement

ಅದರ ಹಿನ್ನೆಲೆಯಲ್ಲಿ  ಜೀವನ್‌ಭೀಮಾನಗರದಲ್ಲಿ ನಿಯಮ ಉಲ್ಲಂ ಸಿ ಒಎಫ್ಸಿ ಅಳವಡಿಸಿದ ಏಟ್ರಿಯಾ ಕನ್ವರ್ಜೆನ್ಸ್‌ ಟೆಕ್ನೋಲಜಿ ಪ್ರೈವೇಟ್‌ ಲಿಮಿಟೆಡ್‌ (ಎಸಿಟಿ) ಏಜೆನ್ಸಿಗೆ ಬರೋಬ್ಬರಿ ಒಂದು ಕೋಟಿ ದಂಡ ವಿಧಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಮೂಲಕ ಏಜೆನ್ಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕ್ರಮಕ್ಕೆ ಸೂಚಿಸಿದ್ದ ನಗರಾಭಿವೃದ್ಧಿ ಸಚಿವ: ಹಲವಾರು ಬಾರಿ ಒಎಫ್ಸಿ ಕೇಬಲ್‌ ಸಂಸ್ಥೆಗಳೊಂದಿಗೆ ಸಭೆ ನಡೆಸಿ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದ್ದರು. ಆದರೆ ಸಂಸ್ಥೆಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ನಿಯಮ ಬಾಹಿರವಾಗಿ ಕೇಬಲ್‌ ಅಳವಡಿಕೆ ಮಾಡುವುದರ ಮೂಲಕ ಮುಂದುವರಿಸಿದರಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವರು ಇತ್ತೀಚೆಗೆ ಅನಧಿಕೃತ ಹಾಗೂ ನಿಯಮ ಮೀರಿದ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದರು. 

ಅದರ ಹಿನ್ನಲೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಅಧಿಕಾರಿಗಳು ಬುಧವಾರ (ಮಾ.15) ಮೊದಲ ಹಂತವಾಗಿ ಜೀವನ್‌ಭೀಮಾನಗರದಲ್ಲಿ ಅನಧಿಕೃತವಾಗಿ ಸಾರ್ವಜನಿಕ ರಸ್ತೆಗಳನ್ನು ಹಾಳು ಮಾಡಿದ ಹಾಗೂ ರಸ್ತೆ ಅಗೆತದ ಅನುಮತಿ ಪತ್ರದಲ್ಲಿನ ಷರತ್ತುಗಳನ್ನು ಉಲ್ಲಂ ಸಿದ ಎಸಿಟಿ ಏಜೆನ್ಸಿಗೆ ಒಂದು ಕೋಟಿ ರೂ. ದಂಡ ವಿಧಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ. 

ಕಾಮಗಾರಿ ಮುಗಿದರೂ ರಸ್ತೆ ದುರಸ್ತಿಯಿಲ್ಲ: ಏಜೆನ್ಸಿಯವರು ಬಿಬಿಎಂಪಿಯಿಂದ ಹಾರಿಜೆಂಟಲ್‌ ಡೈರೆಕ್ಷನಲ್‌ ಡ್ರಿಲ್ಲಿಂಗ್‌ (ಎಚ್‌ಡಿಡಿ) ಯಂತ್ರದ ಮೂಲಕ ಒಎಫ್ಸಿ ಅಳವಡಿಸಲು ಎಸಿಟಿ ಏಜೆನ್ಸಿ ಪಾಲಿಕೆಯಿಂದ ಅನುಮತಿ ಪಡೆದಿದ್ದಾರೆ. ಆದರೆ ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಏಜೆನ್ಸಿಯಿಂದ ರಸ್ತೆ ಹಾಳಾಗಿರುವುದು ಮತ್ತು ನಿಯಮಗಳ ಉಲ್ಲಂಘನೆಯಾಗಿರುವ ಕಂಡು ಬಂದಿದ್ದು, ಕಾಮಗಾರಿ ಮುಗಿದ ನಂತರವೂ ರಸ್ತೆಯ ಪುನರ್‌ ದುರಸ್ತಿ ಮಾಡದಿರುವುದು ಬೆಳಕಿಗೆ ಬಂದಿತ್ತು. 

Advertisement

ಎಸಿಟಿ ಏಜೆನ್ಸಿಯವರು ಈ ಭಾಗದ ವಾಟರ್‌ ಟ್ಯಾಂಕ್‌ ರಸ್ತೆಯಲ್ಲಿ 101 ಮೀಟರ್‌, ಜೀವನ್‌ಭೀಮಾನಗರ ಬಸ್‌ ನಿಲ್ದಾಣ ರಸ್ತೆಯಲ್ಲಿ 157 ಮೀಟರ್‌, ಬಿಡಿಎ ರಸ್ತೆಯಲ್ಲಿ 118 ಮೀಟರ್‌ ಸೇರಿ ಒಟ್ಟು 376 ಉದ್ದದ ರಸ್ತೆಯಲ್ಲಿ ಎಚ್‌ಡಿಡಿ ಬದಲಿಗೆ ತೆರೆದ ಅಗೆತ ಮಾಡಿ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಜತೆಗೆ ಕೆಲಸ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ವಲಯ ಅಧಿಕಾರಿಗಳಿಗೆ, ಪಾಲಿಕೆಯ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ಗಳಿಗೆ ಲಿಖೀತ ರೂಪದಲ್ಲಿ ಮಾಹಿತಿ ನೀಡುವುದು,

ಕಾಮಗಾರಿಗೆ ಸಂಬಂಧಪಟ್ಟ ಕಾರ್ಯಯೋಜನೆಯನ್ನು ಸಂಬಂಧಪಟ್ಟ ವಾರ್ಡ್‌ ಎಂಜಿನಿಯರ್‌ ಗಮನಕ್ಕೆ ತರುವುದು, ಸಂಬಂಧಿಸಿ ವಲಯ ಅಧಿಕಾರಿಗಳು ಅಥವಾ ರಸ್ತೆ ಮೂಲ ಸೌಕರ್ಯ ಎಂಜಿನಿಯರ್‌ಗಳ ಸಲಹೆ ಮೇರಗೆ ಮಣ್ಣು ಅಗೆಯುವುದು ಮತ್ತು ಅಗೆತದ ನಂತರ ರಸ್ತೆಯ ಪುನರ್‌ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂ ಸಿದೆ.

3 ದಿನದಲ್ಲಿ ದಂಡ ಪಾವತಿಗೆ ನೋಟಿಸ್‌
ಬಿಬಿಎಂಪಿಯಿಂದ ಎಸಿಟಿ ಏಜೆನ್ಸಿಗೆ ನಿಯಮ ಬಾಹಿರವಾಗಿ ಓಎಫ್ಸಿ ಕೇಬಲ್‌ ಅಳವಡಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಒಂದು ಕೋಟಿ ದಂಡ ವಿಧಿಸಿ ನೋಟಿಸ್‌ ನೀಡಿದ್ದು, ಮೂರು ದಿನಗಳೊಳಗೆ ದಂಡದ ಮೊತ್ತವನ್ನು ಬಿಬಿಎಂಪಿ ಆಯುಕ್ತರ ಹೆಸರಿಗೆ ಡಿಡಿ ತೆಗೆದು ಪಾಲಿಕೆಗೆ ಪಾವತಿಸಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನಿಯಮಗಳ ಪಾಲಿಸು ವಂತೆ ಹಲವಾರು ಬಾರಿ ಒಎಫ್ಸಿ ಕೇಬಲ್‌ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಈ ವರೆಗೆ ಸಂಸ್ಥೆಗಳು ತಪ್ಪು ಸರಿಪಡಿಸಿಕೊಳ್ಳಲು ಮುಂದಾಗದೆ ತಪ್ಪುಗಳನ್ನು ಮುಂದುವರಿಸಿದ್ದು , ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಏಜೆನ್ಸಿಗಳಿಗೆ ದಂಡ ವಿಧಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದ್ದು , ನಗರಾದ್ಯಂತ, ಕಾರ್ಯಾಚರಣೆ ನಡೆಸಲಾಗುವುದು. 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next