Advertisement
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು, ಸಮಸ್ತ ಪೋಷಕ ಸಂಘಟನೆಗಳ ವತಿಯಿಂದ ಕೂರ್ನಡ್ಕ ಜುಮಾ ಮಸೀದಿಯ ವಠಾರದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಧರ್ಮದಲ್ಲಿ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯಲು ಯತ್ನಿಸುವ ಸರ್ವ ನೂತನವಾದಿಗಳಿಂದ ಜಾಗೃತರಾಗಬೇಕು. ಶುದ್ಧ ಮನಸ್ಕರಾಗಿ ಸೃಷ್ಟಿಕರ್ತನ ಆರಾಧನೆಯಲ್ಲಿ ತೊಡಗಿಸಿಕೊಂಡು ಬದುಕು ಬೆಳ ಗಿಸಿದಾಗ ಮನುಷ್ಯ ಅಲ್ಲಾಹುವಿನ ಸಂತೃಪ್ತಿಗೆ ಪಾತ್ರ ನಾಗುತ್ತಾನೆ. ಅಂತಹ ಸಂತೃಪ್ತಿ ಪಡೆದ ವಿಶೊÌàತ್ತರ ವಿದ್ವಾಂಸರಾದ ಶೈಖುನಾ ಕನ್ಯಾತ್ ಉಸ್ತಾದ್ ಹಾಗೂ ಶೈಖುನಾ ಸಂಶುಲ್ ಉಲಮಾರಂತಹ ಸಾತ್ವಿಕ ಉಲಮಾ ನಾಯಕರ ಜೀವನಸ್ಥೈರ್ಯವನ್ನು ಅಳವಡಿಸಿಕೊಳ್ಳ ಬೇಕು ಎಂದರು. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷ ಅಲ್‌ಹಾಜ್ ಕೆ.ಪಿ. ಅಬ್ದುಲ್ ಜಬ್ಟಾರ್ ಮುಸ್ಲಿಯಾರ್ ಮಿತ್ತಬೈಲು ಮಾತನಾಡಿ, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಹಾಗೂ ಸಮಸ್ತ ಪೋಷಕ ಸಂಘಟನೆಗಳಿಂದ ಇನ್ನಷ್ಟು ಸಮಾಜ ಮುಖೀ ಕಾರ್ಯಗಳು ನಡೆಯಲಿ ಎಂದರು.
Related Articles
ಅಧ್ಯಕ್ಷತೆ ವಹಿಸಿದ್ದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ತಾ| ಅಧ್ಯಕ್ಷ ಅಹ್ಮದ್ ಪೂಕೋಯ ತಂšಳ್ ಮಾತನಾಡಿ, ಸಮಸ್ತ ಸಂಘಟನೆಗಳ ಬಲ ವರ್ಧನೆಗೆ ಎಲ್ಲ ಉಲೆಮಾ, ಉಮರಾಗಳ ಸಹಕಾರ ಅಗತ್ಯವಾಗಿದೆ. ಸಮಸ್ತದ ಸಾತ್ವಿಕ ಉಲೆಮಾ ನಾಯಕರ ತತ್ತÌ-ಆದರ್ಶ ಗಳು ನಮಗೆಲ್ಲರಿಗೂ ದಾರಿದೀಪವಾಗಲಿ ಎಂದರು.
Advertisement
ಕೂರ್ನಡ್ಕ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ, ಇಂತಹ ಕಾರ್ಯಕ್ರಮದ ಮೂಲಕ ಸಮಸ್ತ ತñ¤ಾÌದರ್ಶಗಳು ಎಲ್ಲ ಕಡೆಗಳಲ್ಲೂ ಪಸರಿಸಲಿ ಎಂದರು. ಮುಖ್ಯ ಅತಿಥಿಗಳಾಗಿ ಎಸ್.ಕೆಜೆಯು ತಾ| ಉಪಾಧ್ಯಕ್ಷ ಅಬ್ಟಾಸ್ ಮದನಿ ಪಣೆಮಜಲು, ಸಂಘಟನ ಕಾರ್ಯದರ್ಶಿ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಎಸ್‌ಕೆಜೆಯು ಇದರ ಫತ್ವಾ ಕಮಿಟಿಯ ಇಸ್ಮಾಯಿಲ್ ದಾರಿಮಿ ದರ್ಬೆ, ಪುತ್ತೂರು ಬದ್ರಿಯಾ ಮಸೀದಿಯ ಖತೀಬ ಎಸ್.ಬಿ. ಮುಹಮ್ಮದ್ ದಾರಿಮಿ, ಕಲ್ಲೇಗ ಮಸೀದಿಯ ಮುದರ್ರಿಸ್ ಮೊದು ಫೈಝಿ ಕಲ್ಲೇಗ, ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಂನ ಅಧ್ಯಕ್ಷ ಆಸಿಫ್ ಅಝØರಿ, ಕೂರ್ನಡ್ಕ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಂನ ಅಧ್ಯಕ್ಷ ಉಮ್ಮರ್ ಫೈಝಿ ಅಜ್ಜಿಕಟ್ಟೆ, ಕುಂಬ್ರ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ, ಪುತ್ತೂರು ವಲಯ ಎಸ್‌ಕೆಎಸ್‌ಎಸ್‌ಎಫ್ನ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ, ಅಬ್ದುಲ್ ರಝಾಕ್ ಫೈಝಿ ಪಾಲ್ಯತ್ತಡ್ಕ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ.ಬಿ. ಹಸನ್ ಹಾಜಿ ಯುನಿಟಿ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆಂಪಿ ಮುಸ್ತಾಫಾ ಹಾಜಿ, ಮಾಡನ್ನೂರು ನೂರುಲ್ ಹುದಾ ಅಕಾಡೆಮಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ, ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹೀರಾ ಅಬ್ದುಲ್ ಖಾದರ್ ಹಾಜಿ, ಕೂರ್ನಡ್ಕ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರು, ಕೂರ್ನಡ್ಕ ಜಮಾತ್ ಕಮಿಟಿಯ ಅಧ್ಯಕ್ಷರೂ ಆದ ಅಬೂಬಕ್ಕರ್, ಪುತ್ತೂರು ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಝಾಕೀರ್ ಹನೀಫ್, ಉಮ್ಮರ್ ಮುಸ್ಲಿಯಾರ್ ತಿಂಗಳಾಡಿ, ರಾಜ್ಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಅನೀಸ್ ಕೌಸರಿ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಮೂಸಾ ಹಾಜಿ ಚೆರೂರು, ಅಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು.
ಈಬಾದ್ ಕೇಂದ್ರ ಸಮಿತಿಯ ಕನ್ವೀನರ್ ಆಶೀಫ್ ದಾರಿಮಿ ಪುಳಿಕಲ್Éರವರು ಮುಖ್ಯ ಪ್ರಭಾಷಣ ಮಾಡಿ ದರು. ಸಾಲ್ಮರ ಸಯ್ಯದ್‌ಮಲೆ ಮಸೀದಿ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ಪ್ರಾಸ್ತಾವಿಸಿದರು. ಜಂಇಯ್ಯತ್ತುಲ್ ಉಲಮಾ ಪುತ್ತೂರು ತಾ| ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿದರು. ಕೋಡಿಂಬಾಡಿ ಮಸೀದಿಯ ಖತೀಬ್ ಕೆ.ಎಂ.ಎ. ಕೋಡುಂಗೈ ನಿರೂಪಿಸಿದರು.
ಸಮ್ಮಾನಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂšಳ್ ಹಾಗೂ ಉಪಾಧ್ಯಕ್ಷ ಹಾಜಿ ಕೆ.ಪಿ. ಅಬ್ದುಲ್ ಜಬ್ಟಾರ್ ಮುಸ್ಲಿಯಾರ್ ಮಿತ್ತಬೈಲು ಅವರನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಇದರ ಅಧ್ಯಕ್ಷ ಹಾಜಿ ಅಹ್ಮದ್ ಪೂಕೋಯ ತಂšಳ್ ಅವರು ಸಮ್ಮಾನಿಸಿದರು.