Advertisement
ಅನೇಕ ವರ್ಷಗಳ ಹೋರಾಟದ ಫಲವಾಗಿ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯ ಪಾಲಕ ಅಭಿಯಂತರಿಗೆ ಸರ್ವೇ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದು, ವನ್ಯಜೀವಿ ಮೀಸಲು ಅರಣ್ಯಕ್ಕೊಳಪಟ್ಟಿರುವ 6 ಕಿ.ಮೀ. ಮತ್ತು ಕಂದಾಯ ಇಲಾಖೆಗೆ ಒಳಪಟ್ಟಿರುವ 9 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೇ ನಡೆಯುತ್ತಿದೆ.
ಬ್ರಿಟಿಷ್ ಸರಕಾರ 1939ರಲ್ಲಿ ನಡೆಸಿದ್ದ ಅರಣ್ಯ ಸರ್ವೇಯಂತೆ ಜನ – ಜಾನುವಾರುಗಳ ಕಾಲ್ನಡಿಗೆಗೆಂದು ಕಾಲು ದಾರಿಯನ್ನಷ್ಟೇ ಕಲ್ಪಿಸಿತ್ತು. ಅದರಂತೆ 6 ಕಿ.ಮೀ. ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಸರ್ವಋತು ಕಾಂಕ್ರೀಟ್ ಅಥವಾ ಡಾಮರು ರಸ್ತೆ, ಉಳಿದ 9 ಕಿ.ಮೀ.ಯಲ್ಲಿ 12 ಅಡಿ ಅಗಲದ ರಸ್ತೆ ನಿರ್ಮಿಸುವಂತೆ ಯೋಜನೆ ರೂಪಿಸಲಾಗಿದೆ. ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.
Related Articles
Advertisement
ಜೀವಮಾನದ ಸಂಪರ್ಕ ರಸ್ತೆದಿಡುಪೆ-ಸಂಸೆ ರಸ್ತೆಯಾದಲ್ಲಿ ಪರ್ಯಾಯ ರಸ್ತೆಯ ಜತೆಗೆ ಅತೀ ಕಡಿಮೆ ಅಂದಾಜು 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶ ಕ್ರಮಿಸುವ ಅಂತರ ವಾಗಲಿದೆ. ನೂತನ ರಸ್ತೆಗೆ ಯಾವುದೇ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಕಾಂಕ್ರೀಟ್ ಮೋರಿಗಳಷ್ಟೇ ಸಾಕು. ರಸ್ತೆ ನಿರ್ಮಾಣ ವಾದಲ್ಲಿ ರಾಷ್ಟ್ರೀಯ ಹೆದ್ದಾರಿ-73 ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯವಾಗಲಿದೆ. ಅಷ್ಟೇ ಅಲ್ಲದೆ 500ಕ್ಕೂ ಅಧಿಕ ಜನಸಂಖ್ಯೆ ಯಿರುವ ಎಳನೀರು ಪ್ರದೇಶದ ಜನರಿಗೆ ಆರೋಗ್ಯ, ಶಿಕ್ಷಣ ಇತ್ಯಾದಿಗಾಗಿ ತಾಲೂಕು ಕೇಂದ್ರ ನಿಕಟವಾಗಲಿದೆ. ಜತೆಗೆ ಅದು ಅಲ್ಲಿನ ಜನತೆಗೆ ಜೀವಮಾನದ ಸಂಪರ್ಕ ರಸ್ತೆಯಾಗಲಿದೆ. ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು..
– ಶಿವಪ್ರಸಾದ್ ಅಜಿಲ,
ಸಹಾಯಕ ಕಾರ್ಯಪಾಲಕ ಅಭಿಯಂತ,
ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ