Advertisement
ಈ ಯೋಜನೆಯ ಪ್ರಕಾರ, ಸಂಯುಕ್ತ ಅರಬ್ ಒಕ್ಕೂಟವು ಫುಜೈರಾದಿಂದ ಮುಂಬೈವರೆಗೆ ಸಮುದ್ರದಾಳದಲ್ಲಿ ರೈಲು ನೆಟ್‌ವರ್ಕ್ ಸ್ಥಾಪಿಸಲಿದೆ. ಈ ಮಾರ್ಗದಲ್ಲಿ ಪ್ರಯಾಣಿಕ ಸಾರಿಗೆಯೂ ಇರುತ್ತದೆ. ಇದರ ಜೊತೆಗೇ ಸರಕು ಸಾಗಣೆಯೂ ನಡೆಯುತ್ತದೆ. ಈ ವಿಶಿಷ್ಟ ಯೋಜನೆಯನ್ನು ರೂಪಿಸಿದ್ದು ರಾಷ್ಟ್ರೀಯ ಸಲಹಾ ಮಂಡಳಿ ನಿಯಮಿತ. ಇದು ಮಸಾªರ್ ನಲ್ಲಿರುವ ಸಲಹಾ ಸಂಸ್ಥೆಯಾಗಿದ್ದು, ಸ್ಟಾರ್ಟಪ್‌ಗ್ಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಈ ಬಗ್ಗೆ ಮಾತನಾಡಿದ ಸಂಸ್ಥೆ ವ್ಯವಸ್ಥಾಪಕ ನಿರ್ದೇ ಶಕ ಮತ್ತು ಮುಖ್ಯ ಸಹಾಯಕ ಅಬ್ದುಲ್ಲಾ ಅಲೆಶಿ, ಈ ಯೋಜ ನೆಯು ಯುಎಇ, ಭಾರತ ಹಾಗೂ ಈ ಭಾಗದ ಇತರ ದೇಶಗಳಿಗೆ ವ್ಯಾಪಕ ನೆರ ವಾಗಲಿದೆ ಎಂದಿದ್ದಾರೆ. ಈ ಯೋಜನೆ ಸುಮಾರು 2 ಸಾವಿರ ಕಿ.ಮೀ ದೂರದ ರೈಲು ನೆಟ್‌ವರ್ಕ್ ಅನ್ನು ಬಯಸುತ್ತದೆ. ಇತರ ದೇಶಗಳಲ್ಲೂ ಇದೇ ರೀತಿಯ ಯೋಜನೆಗಳು ಜಾರಿಯಲ್ಲಿವೆ. ರಷ್ಯಾ, ಕೆನಡಾ ಹಾಗೂ ಅಮೆರಿಕವನ್ನು ಸಂಪರ್ಕಿಸಲು ಚೀನ ಇದೇ ರೀತಿಯ ಯೋಜನೆಯನ್ನು ರೂಪಿಸಿದೆ.
Advertisement
ದುಬಾೖನಿಂದ ಮುಂಬಯಿಗೆ ಹೈಸ್ಪೀಡ್ ರೈಲು ಸಂಪರ್ಕ!
06:00 AM Nov 30, 2018 | |
Advertisement
Udayavani is now on Telegram. Click here to join our channel and stay updated with the latest news.