Advertisement

Dubai Tennis Championship: ಬೋಪಣ್ಣ, ಭಾಂಬ್ರಿ ಮುನ್ನಡೆ

11:55 PM Feb 28, 2024 | Team Udayavani |

ದುಬಾೖ: ಅಗ್ರ ಶ್ರೇಯಾಂಕದ ರೋಹನ್‌ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜತೆಗಾರ ಮ್ಯಾಥ್ಯೂ ಎಬೆxನ್‌ “ದುಬಾೖ ಡ್ನೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಶಿಪ್‌’ನ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ನೆದರ್ಲೆಂಡ್ಸ್‌ನ ರಾಬಿನ್‌ ಹಾಸೆ ಜತೆಗೂಡಿ ಆಡುತ್ತಿರುವ ಭಾರತದ ಮತ್ತೋರ್ವ ಆಟಗಾರ ಯುಕಿ ಭಾಂಬ್ರಿ ಕೂಡ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್‌ ಆಟ ಕೊನೆಗೊಂಡಿದೆ.

ಕಳೆದ ತಿಂಗಳು ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ ಜಯಿಸಿದ್ದ ಬೋಪಣ್ಣ-ಎಬೆxನ್‌ ಸೇರಿಕೊಂಡು ಸ್ಕಂದರ್‌ ಮನ್ಸೂರಿ (ಟ್ಯುನೀಶಿಯಾ)- ಐಸಮ್‌ ಉಲ್‌ ಹಕ್‌ ಖುರೇಶಿ (ಪಾಕಿಸ್ಥಾನ) ವಿರುದ್ಧ ಭಾರೀ ಹೋರಾಟ ನಡೆಸಿ 7-6 (4), 7-6 (5) ಅಂತರದ ಜಯ ಗಳಿಸುವಲ್ಲಿ ಯಶಸ್ವಿಯಾದರು. ಇವರ ಹೋರಾಟ ಒಂದು ಗಂಟೆ, 41 ನಿಮಿಷಗಳ ಕಾಲ ಸಾಗಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಇಂಡೋ-ಆಸ್ಟ್ರೇಲಿಯನ್‌ ಜೋಡಿ ಏರಿಯಲ್‌ ಬೆಹರ್‌ (ಉರುಗ್ವೆ)-ಆ್ಯಡಂ ಪಾವ್ಲಸೆಕ್‌ (ಜೆಕ್‌ ಗಣರಾಜ್ಯ) ವಿರುದ್ಧ ಸೆಣಸಲಿದೆ.

ಯುಕಿ ಭಾಂಬ್ರಿ-ರಾಬಿನ್‌ ಹಾಸೆ ಸೇರಿಕೊಂಡು ಅಲೆಕ್ಸಾಂಡರ್‌ ಬಬ್ಲಿಕ್‌ (ಕಜಕಸ್ಥಾನ)-ಆ್ಯಡ್ರಿಯನ್‌ ಮನ್ನಾರಿನೊ (ಫ್ರಾನ್ಸ್‌) ಜೋಡಿಗೆ 6-7 (5), 6-3, 10-8 ಅಂತರದ ಸೋಲುಣಿಸಿದರು.

ಸುಮಿತ್‌ಗೆ ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯ ಆಟಗಾರ ಸುಮಿತ್‌ ನಾಗಲ್‌ 32ರ ಸುತ್ತಿನ ಸ್ಪರ್ಧೆಯಲ್ಲಿ ಪರಾಭವಗೊಂಡರು. ಅವರನ್ನು ಇಟಲಿಯ ಲೊರೆಂಜೊ ಸೊನೆಗೊ 6-4, 5-7, 6-1 ಅಂತರದಿಂದ ಸೋಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next