ಬೆಂಗಳೂರು: ಸ್ಯಾಂಡಲ್‌ವುಡ್‌ಡ್ರಗ್ಸ್‌ಪ್ರಕರಣದ ಸಿಸಿಬಿ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೂ ಬಂಧಿತಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ತನಿಖಾ ಹಂತದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿಯಲ್ಲಿ ಸಿಸಿಬಿಯ ಎಸಿಪಿ ಸೇರಿದಂತೆ ಇಬ್ಬರನ್ನು ಅಧಿಕಾರಿ-ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಎಸಿಪಿಎಂ.ಆರ್.ಮುಧವಿ ಮತ್ತುಹೆಡ್‌ಕಾನ್ ಸ್ಟೇಬಲ್ ಮಲ್ಲಿಕಾರ್ಜುನ್ ಅಮಾನತು ಗೊಂಡವರು. ಸ್ಯಾಂಡಲ್‌ವುಡ್‌ಡ್ರಗ್ಸ್‌ಪ್ರಕರಣದ ತನಿಖಾ ತಂಡದಲ್ಲಿ ಎಸಿಪಿ ಮುಧವಿ ಇರಲಿಲ್ಲ. ಆದರೂ ತಮ್ಮ ಸಹೋದ್ಯೋಗಿಗಳ ಮೂಲಕವಿಚಾರ ತಿಳಿದುಕೊಂಡು ಆರೋಪಿಗಳು ಮತ್ತು ಅವರ ಸಂಬಂಧಿಕರಿಗೆ ತಲುಪಿಸುತ್ತಿದ್ದರು.ಅದರಿಂದ ತನಿಖೆಗೆ ಸಾಕಷ್ಟುಹಿನ್ನಡೆಯಾಗುತ್ತಿತ್ತು. ಅನುಮಾನಗೊಂಡ ತನಿಖಾ ತಂಡದ ಅಧಿಕಾರಿಗಳುಹಿರಿಯಅಧಿಕಾರಿಗಳಗಮನಕ್ಕೆ ತಂದಿದ್ದಾರೆ. ಅನಂತರ ಇಲಾಖಾ ಆಂತರಿಕ ತನಿಖೆ ನಡೆಸಿದಾಗ ಎಸಿಪಿ ಕೈವಾಡ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಸಿಪಿ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಬುಧವಾರ ಎಸಿಪಿ ಮುಧವಿ ಮತ್ತು ಅವರಿಗೆ ಸಹಾಯ ಮಾಡಿದ ಆರೋಪದಲ್ಲಿ ಹೆಡ್‌ಕಾನ್‌ಸ್ಟೆàಬಲ್ ಮಲ್ಲಿಕಾರ್ಜುನ್ ಅವರನ್ನು ಆಯುಕ್ತ ಕಮಲ್ ಪಂತ್ ಅಮಾನತು ಮಾಡಿದ್ದಾರೆ.
ಆರೋಪಿಗಳ ಜತೆ ಸಂಪರ್ಕ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮೂಲದ ವಿರೇನ್ ಖನ್ನಾ ಜತೆ ಎಸಿಪಿ ಮುಧವಿ ಹಣದ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಸಿಸಿಬಿ ವಶದಲ್ಲಿದ್ದ ಸಂದರ್ಭದಲ್ಲಿ ಆರೋಪಿಗೆ ತನ್ನ ಸಹಚರರು ಹಾಗೂ ಸಂಬಂಧಿಕರ ಜತೆ ಸಂಪರ್ಕಿಸಲು ಸಹಾಯ ಮಾಡಿದ್ದರು. ಎಸಿಪಿ ಮುಧವಿ ಸೂಚನೆ ಮೇರೆಗೆ ಹೆಡ್‌ಕಾನ್‌ಸ್ಟೆàಬಲ್ ಮಲ್ಲಿಕಾರ್ಜುನ್ ಆರೋಪಿ ವಿರೇನ್ ಖನ್ನಾಗೆ ಸಾಕಷ್ಟು ಬಾರಿ ಮೊಬೈಲ್ ನೀಡಿದ್ದಾರೆ. ಈ ಮೂಲಕ ಆತ ದೆಹಲಿಯಲ್ಲಿರುವ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ಪ್ರಕರಣದಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಶ್ರೀಲಂಕಾದ ಕ್ಯಾಸಿನೋ ಮಾಲೀಕ ಶೇಖ್ ಫಾಜಿಲ್ ಹಾಗೂ ಆತನ ಕುಟುಂಬ ಸದಸ್ಯರ ಜತೆ ಎಸಿಪಿ ಮುಧವಿ ನಂಟು ಹೊಂದಿದ್ದರು ಎಂಬುದು ಗೊತ್ತಾಗಿದೆ. ಆತನ ವಿರುದ್ಧ ನಡೆಯುತ್ತಿರುವ ತನಿಖೆಯ ಪ್ರಮುಖ ಅಂಶಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಂಡು ಬಹಿರಂಗ ಪಡಿಸುತ್ತಿದ್ದರು. ಈ ಮೂಲಕ ಸಂಸ್ಥೆಗೆ ವಿಶ್ವಾಸರ್ಹತೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
50 ಲಕ್ಷ ರೂ.ಗೆ ಡೀಲ್? : ಎಸಿಪಿ ಮುಧವಿ ಅವರು ಆರೋಪಿ ವಿರೇನ್ ಖನ್ನಾ ಜತೆ 50 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಪ್ರಕರಣದ ತನಿಖಾ ಹಂತದ ವಿಚಾರವನ್ನು ಆಗಿಂದಾಗ್ಗೆ ತಿಳಿಸಬೇಕು. ಜತೆಗೆ ತಮ್ಮವರ ಸಂಪರ್ಕಕ್ಕೆ ಮೊಬೈಲ್ ವ್ಯವಸ್ಥೆ ಮಾಡಬೇಕುಎಂಬ ಒಪ್ಪಂದದ ಮೇರೆಗೆ 50 ಲಕ್ಷ ರೂ.ಗೆ ಡೀಲ್ ನಡೆದಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಮಾನತು ಜತೆಗೆ ಮುಧವಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.