Advertisement

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

12:12 PM Sep 27, 2020 | Suhan S |

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಜಾಲದಲ್ಲಿ ಸಿನಿ ತಾರೆಯರು, ಉದ್ಯಮಿಗಳು ರಾಜಕೀಯ ಮುಖಂಡರು ಮಾತ್ರವಲ್ಲ ಫ್ಯಾಷನ್‌ ಡಿಸೈನರ್‌ಗಳ ಹೆಸರು ಕೂಡ ಕೇಳಿಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ಶನಿವಾರ ರಾಷ್ಟ್ರೀಯ ಮಟ್ಟದ ಫ್ಯಾಷನ್‌ ವಿನ್ಯಾಸಕ ರಮೇಶ್‌ ದೆಂಬ್ಲಾ ಅವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಸುಮಾರು ಹತ್ತು ಗಂಟೆಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಬಂಧಿತ ಆರೋಪಿಗಳ ಜತೆ ಆತ್ಮೀಯ ಒಡನಾಟ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ರಮೇಶ್‌ ದೆಂಬ್ಲಾಗೆ ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಅಪರಾಹ್ನ 12 ಗಂಟೆ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ರಮೇಶ್‌ ದೆಂಬ್ಲಾ ಅವರನ್ನು ರಾತ್ರಿ 9 ಗಂಟೆವರೆಗೂ ವಿಚಾರಣೆ ನಡೆಸಲಾಗಿದೆ.

ಈ ವೇಳೆ ಬಂಧಿತ ಆರೋಪಿಗಳಿಗೂ ನಿಮಗೂ ಏನು ಸಂಬಂಧ? ಎಷ್ಟು ವರ್ಷಗಳಿಂದ ಫ್ಯಾಷನ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಿರಾ? ಅವರೊಂದಿಗೆ ಯಾವೆಲ್ಲ ಪಾರ್ಟಿಗಳಿಗೆ ಹೋಗುತ್ತಿದ್ರಿ?ಪಾರ್ಟಿಗಳಲ್ಲಿ ನಡೆಯುತ್ತಿದ್ದ ಸಂಗತಿಗಳೇನು? ಯಾರೆಲ್ಲ ಬರುತ್ತಿದ್ದರು? ಎಂಬುದು ಸೇರಿ ಸುಮಾರು 80ಕ್ಕೂ ಅಧಿಕ ಪ್ರಶ್ನೆಗಳನ್ನು ಸಿಸಿಬಿ ತನಿಖಾಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದಕ್ಕೆ ಉತ್ತರಿಸಿರುವ ರಮೇಶ್‌ ದೆಂಬ್ಲಾ, ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿ ಬಹುತೇಕ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ಫ್ಯಾಷನ್‌ ವಿನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಸ್ವಂತ ಫ್ಯಾಷನ್‌ ವಿನ್ಯಾಸ ಸಂಸ್ಥೆ ಕೂಡ ಇದೆ. ಬೆಂಗಳೂರು ಫ್ಯಾಷನ್‌ ಶೋ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತೇನೆ. ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿ ಬಹಳಷ್ಟು ಮಂದಿ ಸೆಲೆಬ್ರಿಟಿಗಳ ಪರಿಚಯವಿದೆ ಎಂದಿದ್ದಾರೆ.

Advertisement

ವೀರೇನ್‌ ಖನ್ನಾ, ವೈಭವ್‌ ಜೈನ್‌ ಸಾಕಷ್ಟು ಪಾರ್ಟಿಗಳನ್ನುಆಯೋಜಿಸುತ್ತಿದ್ದು,ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದೇನೆ. ಅಲ್ಲಿ ಡ್ರಗ್ಸ್‌ ವ್ಯವಹಾರದ ಬಗ್ಗೆ ಗೊತ್ತಿಲ್ಲ. ಫ್ಯಾಷನ್‌ ಸಂಬಂಧಿಸಿದ ಪಾರ್ಟಿಗಳಲ್ಲಿ ಸಿಕ್ಕಾಗ ಮಾತನಾಡಿದ್ದೇವೆ. ಫೋಟೋ ತೆಗೆಸಿಕೊಂಡಿದ್ದೇವೆ. ಅವರ ಖಾಸಗಿ ಜೀವನ ಶೈಲಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫ್ಯಾಷನ್‌ ಡಿಸೈನರ್‌ ಸಂಸ್ಥೆ ಹೊಂದಿರುವ ರಮೇಶ್‌, ರಾಷ್ಟ್ರೀಯ ಮಟ್ಟದ ಫ್ಯಾಷನ್‌ ಡಿಸೈನರ್‌ ಎಂದು ಖ್ಯಾತಿಗಳಿಸಿದ್ದಾರೆ. ಹೀಗಾಗಿ ಅವರಿಗೆ ಸ್ಯಾಂಡಲ್‌ವುಡ್‌, ಬಾಲಿವುಡ್‌, ಮಾಲಿವುಡ್‌, ಕಾಲಿವುಡ್‌ ಸೇರಿ ಎಲ್ಲ ಸಿನಿ ಕ್ಷೇತ್ರದ ನಟ-ನಟಿಯರು, ಉದ್ಯಮಿಗಳು, ಕ್ರಿಕೆಟ್‌ಆಟಗಾರರು ಮತ್ತು ರಾಜಕೀಯ ಮುಖಂಡರ ಮಕ್ಕಳ ಪರಿಚಯವಿದೆ.

ಅಲ್ಲದೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನಟಿ ರಾಗಿಣಿ, ಸಂಜನಾ ಗಲ್ರಾನಿ, ಪೇಜ್‌-3 ಪಾರ್ಟಿಗಳ ಆಯೋಜಕ ವಿರೇನ್‌ ಖನ್ನಾ, ಆದಿತ್ಯ ಆಳ್ವ ಮತ್ತು ಕೇರಳ ಮೂಲದ ಫ್ಯಾಷನ್‌ ಡಿಸೈನರ್‌ ಹಾಗೂ ನಟ ನಿಯಾಜ್‌ ಸೇರಿ ಕೆಲವರ ಜತೆ ರಮೇಶ್‌ ಆತ್ಮೀಯತೆ ಹೊಂದಿದ್ದಾರೆ. ಹೀಗಾಗಿ ಸೆಲೆಬ್ರಿಟಿಗಳ ಪಾರ್ಟಿಗಳಲ್ಲಿ ರಮೇಶ್‌ದೆಂಬ್ಲಾನಿರಂತರವಾಗಿಕಾಣಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯೆಲ್ಲಿ ನೋಟಿಸ್‌ ನೀಡಲಾಗಿತ್ತು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ನಟಿಯರ ವಿಚಾರಣೆ :  ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ಗಳಿಕೆ ಆರೋಪದಲ್ಲಿ ಇಸಿಐಆರ್‌ ದಾಖಲಿಸಿ ಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರವೂ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣೆಗೊಳಪಡಿಸಿದ್ದಾರೆ.

ಬೆಳಗ್ಗೆ 11.30ಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ಐವರು ಇಡಿ ಅಧಿಕಾರಿಗಳ ತಂಡ ನಟಿ ರಾಗಿಣಿ, ಸಂಜನಾ ಗಲ್ರಾನಿ, ರಾಹುಲ್‌ ಟೋನ್ಶಿ, ದೆಹಲಿ ಮೂಲದ ವಿರೇನ್‌ ಖನ್ನಾ ಮತ್ತು ರವಿಶಂಕರ್‌ನನ್ನು ಸಂಜೆವರೆಗೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಲಿಖೀತ ಹೇಳಿಕೆ ಪಡೆದುಕೊಂಡಿದ್ದಾರೆ.

ಪ್ರಕರಣದಲ್ಲಿ ಸಿಕ್ಕವರ ಪೈಕಿ ಬಹುತೇಕ ನನ್ನ ಸ್ನೇಹಿತರೇ ಇದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಪರಿಚಯ ಹೇಗೆ?ಯಾವಾಗಿಂದ ಪರಿಚಯವಾಗಿದೆ. ಒಡನಾಟ ಏನು? ಹೀಗೆ ನಾನಾ ಪ್ರಶ್ನೆಗಳನ್ನುಕೇಳಿದ್ದಾರೆ. ವಿಚಾರಣೆಯ ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಿಲ್ಲ. ಪ್ರಕರಣದ 14 ಮಂದಿಗಳ ಪೈಕಿ 10 ಮಂದಿ ಪರಿಚಯದವರಿದ್ದಾರೆ. ನನ್ನ ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಂಡಿಲ್ಲ. ಫ್ಯಾಷನ್‌ ಪಾರ್ಟಿಗಳು ಹೊರತು ಪಡಿಸಿ ಬೇರೆಯಾವುದೇ ಪಾರ್ಟಿಗಳಿಗೆ ನಾನು ಹೋಗಿಲ್ಲ. ಮತ್ತೂಮ್ಮೆ ಕರೆದರೆ ವಿಚಾರಣೆಗೆ ಹೋಗುತ್ತೇನೆ. ರಮೇಶ್‌ ದೆಂಬ್ಲಾ, ಫ್ಯಾಷನ್‌ ಡಿಸೈನರ್‌

Advertisement

Udayavani is now on Telegram. Click here to join our channel and stay updated with the latest news.

Next