Advertisement
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಅಜಯ್ ಕುಮಾರ್ ಅವರು ದೇಶದ ಆದಿವಾಸಿ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
“ಮುರ್ಮು ಅವರು ಉತ್ತಮ ವ್ಯಕ್ತಿ. ಆದರೆ, ಭಾರತದಲ್ಲಿ ಪರಿಶಿಷ್ಟ ವರ್ಗಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಂಥ ಶೋಚನೀಯ ಸಮುದಾಯಗಳ ಪ್ರತಿನಿಧಿಯಂತೆ ಕಾಣುವ ಮುರ್ಮು, ಭಾರತದ ರಾಕ್ಷಸೀ ತತ್ವದ ಪ್ರತೀಕವಾಗಿದ್ದಾರೆ. ಆದರೆ, ಅವರನ್ನು ಕೇವಲ ಆದಿವಾಸಿಗಳ ಪ್ರತೀಕ ಎನ್ನುವಂತೆ ಬಿಂಬಿಸುವುದು ಸರಿಯಲ್ಲ’ ಎಂದಿದ್ದಾರೆ. ಬಿಜೆಪಿ ತಿರುಗೇಟು
ಕುಮಾರ್‌ರವರ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಬಿಜೆಪಿಯ ಅಮಿತ್ ಮಾಳವಿಯ, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನಾಗಿ ಮುರ್ಮು ಅವರ ಹೆಸರನ್ನು ಮೋದಿ ಘೋಷಿಸಿದ್ದು, ಆದಿವಾಸಿ ಸಮುದಾಯಗಳ ಸಬಲೀಕರಣಕ್ಕೆ ಇಟ್ಟ ಹೆಜ್ಜೆಯಾಗಿದೆ. ಹಾಗಿರುವಾಗ, ಮುರ್ಮು ಅವರನ್ನು ರಕ್ಕಸ ತತ್ವದ ಪ್ರತೀಕ ಎಂದಿರುವುದು ಆಕ್ಷೇಪಾರ್ಹ. ಕುಮಾರ್ ಅವರು ಕೂಡಲೇ ಆದಿವಾಸಿ ಸಮುದಾಯದ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.