ಮುಂಬಯಿ: ಮಹಾರಾಷ್ಟ್ರವು ತೀವ್ರ ಬರಗಾಲವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶಿವಸೇನೆಯು ಬಿಜೆಪಿ ಆಡಳಿತದ ಕೇಂದ್ರ ಸರಕಾರಕ್ಕೆ ಹೆಚ್ಚುವರಿ ಹಣಕಾಸು ನೆರವು ಒದಗಿಸಲು ಮನವಿ ಮಾಡಿದೆ. ರಾಜ್ಯದ ಸುಮಾರು 9000 ಹಳ್ಳಿಗಳಿಗೆ ಇನ್ನೂ ಆರ್ಥಿಕ ನೆರವು ದೊರೆತಿಲ್ಲ. ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿವಸೇನೆ ಬುಧವಾರ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. ಬರ ಸಮಸ್ಯೆಗಳನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಶಿವಸೇನೆ ಸಭೆ ಕೂಡ ನಡೆಸಿದೆ.
ಕೇಂದ್ರ ಸರಕಾರವು ಬರ ನಿವಾರಣೆ ಕ್ರಮಗಳನ್ನು ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಈವರೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ 4,248.59 ಕೋಟಿ ರೂ.ಗಳ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿ¨ªಾರೆ.
ಕೇಂದ್ರದಿಂದ ಈವರೆಗೆ ಒಟ್ಟು 4,248.59 ಕೋಟಿ ರೂ. ನೆರವು ಸ್ವೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಟ್ವೀಟ್‌ನಲ್ಲಿ ತಿಳಿಸಿ¨ªಾರೆ. ಕಳಪೆ ಮುಂಗಾರಿನ ಅನಂತರ ಫಡ್ನವೀಸ್ ಸರಕಾರವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯದ 358 ತಾಲೂಕುಗಳ ಪೈಕಿ 151 ತಾಲೂಕುಗಳಲ್ಲಿ ಬರಗಾಲವನ್ನು ಘೋಷಿಸಿದೆ. ಏತನ್ಮಧ್ಯೆ, ವಿಪತ್ತು ನಿರ್ವಹಣಾ ಕಾಯಿದೆಯನ್ನು ಅನುಷ್ಠಾನಗೊಳಿಸಲು ಹಾಗೂ ಪ್ರತಿ ಜಿÇÉೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸಲು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಒಂದು ಅರ್ಜಿಯನ್ನು ಕೂಡ ಸಲ್ಲಿಸಲಾಗಿದೆ. ಕಳೆದ ತಿಂಗಳು ಹೈಕೋರ್ಟ್ ಬರ ನಿಭಾಯಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿದವಿತ್ ಸಲ್ಲಿಸುವಂತೆ ರಾಜ್ಯ ಸರಕಾರವನ್ನು ಕೇಳಿತ್ತು. ಇದಾದ ಒಂದು ವಾರದ ಅನಂತರ ಫಡ್ನವೀಸ್ ಸರಕಾರವು ಅಫಿದವಿತ್ ಸಲ್ಲಿಸಿದ್ದು, ನೀರಿನ ಕೊರತೆಯ ನಿರ್ವಹಣೆ ಮತ್ತು ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರವು ಕ್ರಿಯಾ ಯೋಜನೆಗಳ ಸಿದ್ಧತೆ ಸೇರಿದಂತೆ ಹಲವಾರು ಬರ ನಿರೋಧಕ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಅದರಲ್ಲಿ ತಿಳಿಸಿದೆ.
ಹೊಸ ಕೊಳವೆಬಾವಿಗಳ ಸ್ಥಾಪನೆ, ಪೈಪ್ ನೀರು ಸರಬರಾಜು ಯೋಜನೆಗಳ ವಿಶೇಷ ರಿಪೇರಿ, ಟ್ಯಾಂಕರ್‌ಗಳು ಮತ್ತು ಎತ್ತಿನ ಬಂಡಿಗಳ ಮೂಲಕ ನೀರು ಸರಬರಾಜು, ಬಾವಿಗಳ ಆಳಗೊಳಿಸುವಿಕೆ ಮತ್ತು ಹೂಳೆತ್ತುವಿಕೆ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರವು ಅಫಿದವಿತ್‌ನಲ್ಲಿ ತಿಳಿಸಿದೆ.