Advertisement
ಕಳೆದ ಸಾಲಿನಲ್ಲಿ ಬರದಿಂದಾಗಿ ತಾಲೂಕಿನಲ್ಲಿ 622.32 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ನಷ್ಟವಾಗಿತ್ತು. ಬೆಳೆ ನಷ್ಟದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಅದರಂತೆ ಸರಕಾರದಿಂದ ಒಣ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 8.5ಸಾವಿರ, ನೀರಾವರಿ ಬೆಳೆಗೆ 17ಸಾವಿರ ರೂ, ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 22,500 ಹಾಗೂ ರೇಷ್ಮೆ ಬೆಳೆಗೆ 6,500 ರಿಂದ 7ಸಾವಿರ ರೂವರೆಗೆ ದೊರೆಯಲಿದೆ.
Related Articles
2023-24ನೇ ಸಾಲಿನಲ್ಲಿ ತಾಲೂಕಿನಲ್ಲಿ 13ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 11ಮಂದಿಗೆ ಸರಕಾರದ ವತಿಯಿಂದ ತಲಾ ಐದು ಲಕ್ಷರೂಗಳ ಪರಿಹಾರದ ಚೆಕ್‌ನ್ನು ಶಾಸಕ ಜಿ.ಡಿ.ಹರೀಶ್‌ಗೌಡರು ತಾಲೂಕು ಕಚೇರಿಯಲ್ಲಿ ಮೃತರ ಕುಟುಂಬದವರಿಗೆ ವಿತರಿಸಿ, ಹಣವನ್ನು ಸದ್ಬಳಕೆ ಮಾಡಿಕೊಳ್ಳಿರೆಂದು ಸಲಹೆ ನೀಡಿದರು.
Advertisement
ಈ ಕುಟುಂಬದ ಮಂದಿಗೆ ಪ್ರತಿ ಮಾಹೆ ತಲಾ ಎರಡು ಸಾವಿರ ರೂ ಮಾಶಾಸನ, ಆರೋಗ್ಯ ಕಾರ್ಡ್ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಲಿದೆ. ಇಬ್ಬರು ರೈತರ ಅರ್ಜಿ ತಿರಸ್ಕೃತಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನಿಲ್‌ಕುಮಾರ್ ತಿಳಿಸಿದ್ದಾರೆ.