Advertisement
ದೇಶೀ ಕಂಪೆನಿಗಳು ಅಭಿವೃದ್ಧಿಪಡಿಸಿದ ಡ್ರೋನ್ ಸ್ವಾರ್ಮ್ಗಳನ್ನು ವಾಯುಪಡೆಯ ಈ ಸ್ಪರ್ಧೆಗೆ ಒಡ್ಡಬಹುದಾಗಿದೆ. ನ.14ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.28 ರಂದು ಪ್ರಸೆಂಟೇಶನ್ ನೀಡಬಹುದು. ಅನಂತರ 2 ಹಂತದಲ್ಲಿ ಡ್ರೋನ್‌ಗಳ ಪರೀಕ್ಷೆ ನಡೆಯಲಿದೆ.
ಸೇನೆ ಈ ಡ್ರೋನ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲು ನಿರ್ಧರಿಸಿದೆ. ಅಂದರೆ ಪರಿಹಾರ ಸಾಮಗ್ರಿಗಳು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ನೈಸರ್ಗಿಕ ವಿಪತ್ತಿನ ಸನ್ನಿವೇಶದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಜನರನ್ನು ಸ್ಥಳಾಂತರಿಸುವತ್ತ ಹೆಲಿಕಾಪ್ಟರುಗಳು ಹೆಚ್ಚಿನ ಗಮನ ಹರಿಸಬಹುದಾಗಿರುತ್ತದೆ. ಈ ಡ್ರೋನ್‌ಗಳು ಸಾಮಾನ್ಯವಾಗಿ 100 ಕಿ.ಮೀ.ವರೆಗೆ ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತವೆ. 1 ಕಿಲೋ ತೂಕದ ಆಹಾರ ಪೊಟ್ಟಣಗಳನ್ನು 50ರಿಂದ 100 ಸಣ್ಣ ಡ್ರೋನ್‌ಗಳು ಎತ್ತಿಕೊಂಡು ಹೋಗಿ ಸಂತ್ರಸ್ತರಿಗೆ ಹಂಚಿ ಬರುತ್ತವೆ. ಈ ಎಲ್ಲ ಡ್ರೋನ್‌ಗಳನ್ನೂ ಒಂದೇ ಕೇಂದ್ರದಿಂದ ನಿಯಂತ್ರಿಸಬಹುದಾಗಿರುತ್ತದೆ.