Advertisement

ಮಾಜಿ ಪಿಎಂ ದೇವೇಗೌಡರ ಹೆಲಿಕ್ಯಾಪ್ಟರ್ ಆಗಮನದ ವೇಳೆ ಡ್ರೋನ್ ಹಾರಾಟ

04:25 PM Apr 24, 2022 | Team Udayavani |

ನೆಲಮಂಗಲ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿದ್ದ ಹೆಲಿಕ್ಯಾಪ್ಟರ್ ಆಗಮನದ ವೇಳೆ ಭದ್ರತಾ ವೈಫಲ್ಯವಾಗಿದ್ದು, ಡ್ರೋನ್ ಹಾರಾಟ ಕಂಡು ಸಿಬ್ಬಂದಿಗಳು ಕಕ್ಕಾಬಿಕ್ಕಿಯಾದ ಘಟನೆ ಭಾನುವಾರ ನಡೆದಿದೆ.

Advertisement

ನೆಲಮಂಗಲ ತಾಲೂಕಿನ ನಿಡವಂದ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಘಟನೆ ನಡೆದಿದ್ದು, ಸಮೀಪಕ್ಕೆ ಬಂದ ಡ್ರೋನ್ ಕ್ಯಾಮರಾ ಕಂಡು ಆತಂಕಕ್ಕೊಳಗಾಗಿದ್ದಾರೆ. ಹೆಲಕ್ಯಾಪ್ಟರ್ ಬಂದ ವೇಳೆ ಡ್ರೋನ್ ಹಾರಾಟ ಮಾಡಿದ ವ್ಯಕ್ತಿಯ ವಿರುದ್ಧ ಭದ್ರತಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ಡ್ರೋನ್ ಹಾರಾಟ ನಿಲ್ಲಿಸುವಂತೆ ಭದ್ರತಾ ಸಿಬ್ಬಂದಿ ಗರಂ ಆದರು.

ಡ್ರೋನ್ ಹಾರಾಟ ನಿಲ್ಲಿಸುವವರೆಗೂ ಮಾಜಿ ಪ್ರಧಾನಿ ದೇವೆಗೌಡ ಅವರು ಕೆಳಗೆ ಇಳಿಯಲಿಲ್ಲ. ಭಾರತಿಪುರದ ಗ್ರಾಮದಲ್ಲಿ ದೇವತಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುವ ವೇಳೆ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next