ಹುಬ್ಬಳ್ಳಿ: ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎಸ್ ಎಚ್‌ಡಿಪಿ) ಅನುದಾನದಡಿ ಮಂಜೂರಾದ 5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ನಗರದ ಬಿಡ್ನಾಳದಿಂದ ಕುಂದಗೋಳ ಕ್ರಾಸ್‌ವರೆಗಿನ 4 ಕಿ.ಮೀ. ರಸ್ತೆ ಡಾಂಬರೀಕರಣ ಹಾಗೂ ಕಾಂಕ್ರೀಟ್ ಗಟಾರು ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತಾಪಿ ವರ್ಗದ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ 5ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕುಂದಗೋಳ, ಗಬ್ಬೂರು ಮತ್ತಿತರೆಡೆ ಭಾಗದ ರೈತರು ಕಡಿಮೆ ಅವಧಿಧಿಯಲ್ಲಿ ನಗರಕ್ಕೆ ಆಗಮಿಸಲು ಅನುಕೂಲವಾಗಲಿದೆ.
ಇದರಿಂದ ಸಾಕಷ್ಟು ಸಮಯ, ಇಂಧನ ಉಳಿತಾಯವಾಗಲಿದೆ. ಈ ಮೊದಲು ಕೇವಲ 12 ಅಡಿ ಅಗಲದಷ್ಟಿದ್ದ ರಸ್ತೆ ಇದೀಗ 18 ಅಡಿಯಷ್ಟು ಅಗಲೀಕರಣ ವಾಗಲಿದೆ. ಜೊತೆಗೆ ರಸ್ತೆ ಬದಿ ಸಿಸಿ ಗಟಾರು ನಿರ್ಮಾಣವಾಗಲಿದೆ. ಇದು ಈ ಭಾಗದ ರೈತರು ತಮ್ಮ ಹೊಲಗಳಿಗೆ ತೆರಳಲು ಹಾಗೂ ಪಾಲಿಕೆ ವ್ಯಾಪ್ತಿಯ ಬೀಡಿ ಕಾರ್ಮಿಕರ ನಗರಕ್ಕೆ ಹೋಗಲು ಪ್ರಮುಖ ರಸ್ತೆಯಾಗಲಿದೆ ಎಂದರು.
ಪಾಲಿಕೆ ಸದಸ್ಯರಾದ ಮಂಜುನಾಥ ಚಿಂತಗಿಂಜಲ, ವಿಜುನಗೌಡ ಪಾಟೀಲ, ಮಾಜಿ ಸದಸ್ಯ ಯಮನೂರ ಜಾಧವ, ನಿರಂಜನ ಹಿರೇಮಠ, ಸಿದ್ದಪ್ಪಣ್ಣ ಮೇಟಿ, ಪರ್ವತಪ್ಪ ಬಳಗಣ್ಣವರ, ವೀರಭದ್ರಣ್ಣ ಅಸುಂಡಿ, ಶಂಕ್ರಣ್ಣ ಅಸುಂಡಿ, ಗುರಣ್ಣ ಅಸುಂಡಿ, ಮಲ್ಲು ಬಳಗಣ್ಣವರ, ವಿರುಪಾಕ್ಷಪ್ಪ ಮೇಟಿ, ಬಸವರಾಜ ಕುಂದನಹಳ್ಳಿ, ಗುರುನಗೌಡ ಪಾಟೀಲ, ಶೌಕತಅಲಿ ಮೊರಬ, ಶಾರುಖ ಮುಲ್ಲಾ, ಸಾದಿಕ ಯಕ್ಕುಂಡಿ, ಪಿಡಬುಡಿ ಅಧಿಕಾರಿಗಳಾದ ವಿ.ಬಿ. ಯಮಕನಮರಡಿ, ಎಚ್. ವಿಜಯಕುಮಾರ, ಎಸ್.ಪಿ. ಕಟ್ಟಿಮನಿ, ಗುತ್ತಿಗೆದಾರ ಪ್ರಕಾಶ ಗುಡಗೇರಿ ಮೊದಲಾದವರಿದ್ದರು.